ವಿಭಿನ್ನ ರೀತಿಯ ಸಿನಿಮಾಗಳನ್ನು ನೀಡಲು ಸದಾ ಶ್ರಮಿಸುತ್ತೇನೆ: ನಿರ್ದೇಶಕ ವೆಂಕಟ್ ಭಾರದ್ವಾಜ್

ಎ ಡೇ ಇನ್ ದಿ ಸಿಟಿ, ಬಬ್ಲುಷಾ ಮತ್ತು ಕೆಂಪಿರುವೆ ಮುಂತಾದ ಸಿನಿಮಾಗಳ ನಿರ್ದೇಶನ ಮಾಡಿ ಗಮನ ಸೆಳೆದಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು, ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ನಿರ್ದೇಶಕ ವೆಂಕಟ್ ಭಾರದ್ವಾಜ್ ಹಾಗೂ ನಗುವಿನ ಹೂಗಳ ಮೇಲೆ ಚಿತ್ರದ ಸ್ಟಿಲ್.
ನಿರ್ದೇಶಕ ವೆಂಕಟ್ ಭಾರದ್ವಾಜ್ ಹಾಗೂ ನಗುವಿನ ಹೂಗಳ ಮೇಲೆ ಚಿತ್ರದ ಸ್ಟಿಲ್.

ಎ ಡೇ ಇನ್ ದಿ ಸಿಟಿ, ಬಬ್ಲುಷಾ ಮತ್ತು ಕೆಂಪಿರುವೆ ಮುಂತಾದ ಸಿನಿಮಾಗಳ ನಿರ್ದೇಶನ ಮಾಡಿ ಗಮನ ಸೆಳೆದಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು, ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ವೆಂಕಟ್ ಅವರು ನಗುವಿನ ಹೂಗಳ ಮೇಲೆ ಎಂಬ ರೊಮ್ಯಾಂಟಿಕ್ ಚಿತ್ರಕ್ಕೆ ಚಿತ್ರವನ್ನು ನಿರ್ದೇಶನ ಮಾಡಿದ್ದು, ಊ ಮೂಲಕ ಎಲ್ಲ ವಯೋಮಾನದವರನ್ನೂ, ಎಲ್ಲ ತೆರನಾದ ಅಭಿರುಚಿಯ ಪ್ರೇಕ್ಷಕರನ್ನೂ ಅಚ್ಚರಿಗೀಡು ಮಾಡಲು ಸಜ್ಜಾಗಿದ್ದಾರೆ.

ಈ ವರೆಗೂ 9 ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ನನ್ನ ಮೊದಲ ಚಿತ್ರ ದ ಎ ಡೇ ಇನ್ ದಿ ಸಿಟಿಯಿಂದ ನನ್ನ ಇತ್ತೀಚಿನ ಚಿತ್ರವನ್ನು ನೋಡಿದರೆ, ಒಂದೊಂದು ಚಿತ್ರದ ಕಥೆಯೂ ವಿಭಿನ್ನವಾಗಿದೆ. ನನ್ನ ಸಿನಿ ಪಯಣದಲ್ಲಿ ಸದಾಕಾಲ ವಿಭಿನ್ನ ರೀತಿಯ ಸಿನಿಮಾಗಳ ಪ್ರಸ್ತುತಪಡಿಸಲು ಸದಾ ಶ್ರಮಿಸಿದ್ದೇನೆಂದು ಭಾರಧ್ವಾಜ್ ಅವರು ಹೇಳಿದ್ದಾರೆ.

ನಗುವಿನ ಹೂಗಳ ಮೇಲೆ ಚಿತ್ರ ನನ್ನ ಮೊದಲ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ಆಗಿದ್ದು, ಇದನ್ನು ನನ್ನ 10ನೇ ಚಿತ್ರವಾಗಿದೆ. ಚಿತ್ರ ವಿಶಿಷ್ಠವಾಗಿದ್ದು, ಪ್ರೀತಿ ಎಂಬುದು ವೈಯಕ್ತಿಕ ಮೌಲ್ಯ, ಸಂದರ್ಭ ಹಾಗೂ ಸಂಬಂಧಗಳನ್ನು ಅವಂಬಿಸಿರುತ್ತದೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಲಾಗಿದೆ.

ಪ್ರೀತಿಯು ಜೀವನದ ವಿವಿಧ ಹಂತಗಳಲ್ಲಿ ವಿಭಿನ್ನವಾಗಿ ವಿಕಸನಗೊಳ್ಳುತ್ತದೆ, ಪ್ರತಿಯೊಂದು ವಯೋಮಾನದವರು ಪ್ರೀತಿಯ ಬಗ್ಗೆ ಅನನ್ಯ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ, ಇದು ನಗುವಿನ ಹೂಗಳ ಮೇಳದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಚಿತ್ರ ಕುರಿತು ವೆಂಕಟ್ ಅವರು ಮಾಹಿತಿ ನೀಡಿದ್ದಾರೆ.

ಹೊಸಾ ತೆರನಾದ ಪ್ರೇಮಕಥನವನ್ನೊಳಗೊಂಡಿರುವ ಚಿತ್ರ `ನಗುವಿನ ಹೂಗಳ ಮೇಲೆ’. ಇದರಲ್ಲಿ ಅಭಿದಾಸ್ ನಾಯಕನಾಗಿ ನಟಿಸಿದ್ದಾರೆ. ಇನ್ನು ಒಂದಷ್ಟು ಪಾತ್ರಗಳ ಮೂಲಕ ಸೆಳೆದುಕೊಂಡಿದ್ದ ಶರಣ್ಯಾ ಶೆಟ್ಟಿ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಹೊರಹೊಮ್ಮಿದ್ದಾರೆ.

ಶ್ರೀ ಸತ್ಯಸಾಯಿ ಆರ್ಟ್ಸ್ ಲಾಂಛನದಲ್ಲಿ ಕೆ.ಕೆ ರಾಧಾಮೋಹನ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾ ಫೆಬ್ರುವರಿ 9 ರಂದು ತೆರೆಗೆ ಬರುತ್ತಿದೆ.

ವೆಂಕಟ್ ಭಾರದ್ವಾಜ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ ಚಿತ್ರಕ್ಕಿದೆ. ಪ್ರಮೋದ್ ಭಾರತೀಯ ಛಾಯಾಚಿತ್ರಗ್ರಹಣ, ಚಂದನ್ ಪಿ. ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಲರ್ವಿನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಹರೀಶ್ ಭಟ್, ಗಿರೀಶ್ ಬೆಟ್ಟಪ್ಪ, ಬಾಲ ರಾಜವಾಡಿ, ಬೆನಕ ನಂಜಪ್ಪ ಮತ್ತು ಆಶಾ ಸುಜಯ್, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com