5ನೇ ಚಿತ್ರಕ್ಕೆ ‘ಡಾಲಿ ಪಿಕ್ಚರ್ಸ್’ ಸಜ್ಜು: ಚೇತನ್ ಜಯರಾಮ್ ನಿರ್ದೇಶನದ ಆ್ಯಕ್ಷನ್ ಡ್ರಾಮಾ ಚಿತ್ರದಲ್ಲಿ ಪ್ರಖ್ಯಾತ್ ನಾಯಕ
ಟಗರು ಪಲ್ಯ’ ಸಕ್ಸಸ್ ನಲ್ಲಿರುವ ‘ಡಾಲಿ ಪಿಚ್ಚರ್’ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದೆ.
ಧನಂಜಯ್ ಅವರು ತಮ್ಮ ಬ್ಯಾನರ್ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯಿಸಲು ಸದಾ ಉತ್ಸುಕರಾಗಿರುತ್ತಾರೆ. ಈ ಹಿಂದೆ ಬಡವ ರಾಸ್ಕಲ್ ಮತ್ತು ಟಗರು ಪಲ್ಯ ಚಿತ್ರವನ್ನು ಹೊರತಂದಿದ್ದ ಪ್ರೊಡಕ್ಷನ್ ಹೌಸ್, ಇದೀಗ ತನ್ನ 5ನೇ ಚಿತ್ರಕ್ಕೆ ನಡುವೆ ಅಂತರವಿರಲಿ ಖ್ಯಾತಿಯ ನಟ ಪ್ರಖ್ಯಾತ್ ಅವರನ್ನು ನಾಯಕ ನಟನಾಗಿ ಆಯ್ಕೆ ಮಾಡಿಕೊಂಡಿದೆ.
ಚಿತ್ರಕ್ಕೆ ಚೇತನ್ ಜಯರಾಮ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದು ಜಯರಾಮ್ ಅವರ ಮೊದಲ ಸಿನಿಮಾ ಆಗಿದೆ. ಚಿತ್ರದ ಮುಹೂರ್ತದ ಕುರಿತು ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದೆ.
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ದೇಶಕರು ಚಿತ್ರಕಥೆಯನ್ನು ಬರೆದಿದ್ದು, ಚಿತ್ರತಂಡ ಇದೀಗ ಉಳಿದ ಪಾತ್ರವರ್ಗಗಳನ್ನು ಅಂತಿಮಗೊಳಿಸುತ್ತಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲಿದೆ. ಚಿತ್ರದ ಶೀರ್ಷಿಕೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಚಿತ್ರದಲ್ಲಿ ಕಾರ್ತಿಕ್ ಅವರ ಛಾಯಾಗ್ರಾಹಣ ಮತ್ತು ರೋಹಿತ್ ಸೋವರ್ ಅವರ ಸಂಗೀತ ಇರಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ