ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ: ಮನೆ ಬಳಿ ಜನಸಾಗರ, ಡೆವಿಲ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 47ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜರಾಜೇಶ್ವರಿ ನಗರದ ಮನೆ ಬಳಿ ಜನಸಾಗರವೇ ನೆರೆದಿದೆ.
ಡೇವಿಲ್ ಚಿತ್ರದ ಫಸ್ಟ್ ಲುಕ್
ಡೇವಿಲ್ ಚಿತ್ರದ ಫಸ್ಟ್ ಲುಕ್
Updated on

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 47ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜರಾಜೇಶ್ವರಿ ನಗರದ ಮನೆ ಬಳಿ ಜನಸಾಗರವೇ ನೆರೆದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಅಭಿಮಾನಿಗಳು ಕಿಲೋ ಮೀಟರ್ ವರೆಗೂ ಸರತಿ ಸಾಲಿನಲ್ಲಿ ನಿಂತು ಜಯಘೋಷ ಮೊಳಗಿಸಿದರು. ದರ್ಶನ್ ಅವರನ್ನು ಕಣ್ಣಾರೆ ಕಂಡು ಸಂಭ್ರಮಪಟ್ಟರು. ಅಲ್ಲದೇ ಅವರ ಸೂಚನೆಯಂತೆ ದವಸ, ಧಾನ್ಯ ತಂದು ಶುಭ ಕೋರಿದರು.

ಡೇವಿಲ್ ಚಿತ್ರದ ಫಸ್ಟ್ ಲುಕ್
'ಡೆವಿಲ್' ಚಿತ್ರದ ಬಗ್ಗೆ ವದಂತಿ ಬೇಡ, ಎಲ್ಲದಕ್ಕೂ ಫೆ.16 ದರ್ಶನ್ ಹುಟ್ಟುಹಬ್ಬ ದಿನ ಉತ್ತರ: ನಿರ್ದೇಶಕ ಮಿಲನ ಪ್ರಕಾಶ್

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಭಾರೀ ಗಾತ್ರದ ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿವೆ. ಚಿಕ್ಕಣ್ಣ, ಪ್ರಜ್ವಲ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ನಟ, ನಟಿಯರು ಕೂಡಾ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ದರ್ಶನ್ ಅಭಿನಯದ ಮುಂದಿನ ಡೆವಿಲ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಯಿತು. ಮನೆ ಮುಂದೆ ಹಾಕಲಾದ ಬೃಹತ್ ಸ್ಕ್ರೀನ್ ನಲ್ಲಿ ಡೇವಿಲ್ ಚಿತ್ರದ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಲಾಯಿತು.

ದರ್ಶನ್ ಹುಟ್ಟುಹಬ್ಬಕ್ಕಾಗಿ ಬುಧವಾರ ಸಿಡಿಪಿ ರಿಲೀಸ್ ಆಗಿತ್ತು. ಕಾಮನ್ ಡಿಪಿಯಲ್ಲಿ(CDP) ‘ನಿಮ್‍ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ’ ಮಾತು ಟ್ರೆಂಡ್ ಆಗಿದೆ. ಹುಟ್ಟುಹಬ್ಬ ಸಮಾರಂಭ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಹುಟ್ಟು ಹಬ್ಬದ ಜೊತೆ ಜೊತೆಗೆ ದರ್ಶನ್ ಸ್ಯಾಂಡಲ್ ವುಡ್ ಪದಾರ್ಪಣೆ ಮಾಡಿ ಭರ್ತಿ 25 ವರ್ಷಗಳಾಗಿವೆ. ಇದೇ ಶುಭ ಸಂದರ್ಭದಲ್ಲಿ ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಶ್ರೀರಂಗಪಟ್ಟಣದಲ್ಲಿ ಅರ್ಥಪೂರ್ಣವಾದ ಸಮಾರಂಭವೊಂದನ್ನು ಏರ್ಪಡಿಸಿದ್ದಾರೆ. ಆದಿಚುಂಚನಗಿರಿ ಸ್ವಾಮೀಜಿ, ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com