
ದಿವಾಕರ್ ಡಿಂಡಿಮ ನಿರ್ದೇಶಿಸಿರುವ ಜುಗಲ್ ಬಂದಿ ಸಿನಿಮಾ ಮಾರ್ಚ್ 1 ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕಾಗಿ ನಿರ್ದೇಶನದೊಂದಿಗೆ ಹಲವು ಜವಾಬ್ದಾರಿಗಳನ್ನು ಹೊತ್ತುಕೊಂಡಿರುವ ಡಿಂಡಿಮ ಅವರು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರಹಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಚಿತ್ರವನ್ನು ಅವರ ಸ್ವಂತ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ವಿಸಿಕಾ ಫಿಲ್ಮ್ಸ್ ವಿತರಿಸಿದೆ.
ಸಿನಿಮಾವು ಮೂರು ಮುಖ್ಯ ಕಥಾವಸ್ತುಗಳನ್ನು ಒಳಗೊಂಡಿದ್ದು, ತಾಯಿ, ದಂಪತಿ ಮತ್ತು ದೃಷ್ಟಿಹೀನ ವ್ಯಕ್ತಿಯ ಸುತ್ತ ಸುತ್ತುತ್ತದೆ. ಅವರೆಲ್ಲರೂ ತಮ್ಮ ಹಣವನ್ನು ಹೊಂದಿಸುವುದರ ಮೇಲೆ ಗಮನ ಕೇಂದ್ರೀಕರಿಸಿರುತ್ತಾರೆ.
'ಚಿತ್ರದ ಪ್ರಮುಖ ವಿಚಾರವೇ ಹಣದ ಅನ್ವೇಷಣೆಯಾಗಿದೆ. ಈ ಪರಿಕಲ್ಪನೆಯು ಬೈಬಲ್, ಭಗವದ್ಗೀತೆ ಅಥವಾ ಕುರಾನ್‌ನಂತಹ ಧಾರ್ಮಿಕ ಪಠ್ಯಗಳಲ್ಲಿ ಕಂಡುಬರುವುದಿಲ್ಲ. ಜುಗಲ್‌ಬಂದಿ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಏಕಕಾಲದಲ್ಲಿ ಮೂರು ಕಥಾವಸ್ತುಗಳನ್ನು ತೆರೆಯ ಮೇಲೆ ತರುತ್ತದೆ' ಎನ್ನುತ್ತಾರೆ ನಿರ್ದೇಶಕರು.
ಜುಗಲ್ ಬಂದಿಗೆ ಪ್ರದ್ಯೋತನ್ ಸಂಗೀತ ಸಂಯೋಜಿಸಿದ್ದು, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್, ಸಂತೋಷ್ ಆಶ್ರಯ್ ಮತ್ತು ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಪ್ರಕಾಶ್ ಬೆಳವಾಡಿ, ಚಂದ್ರ ಪ್ರಭಾ ಜಿಜೆ, ರಂಜನ್ ಮತ್ತು ಯುಕ್ತಲು ಸುಶ್ ಕಾಣಿಸಿಕೊಂಡಿದ್ದಾರೆ.
Advertisement