'ಕಣ್ಣಾಮುಚ್ಚೆ ಕಾಡೆಗೂಡೆ' ಚಿತ್ರದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್‌ ನಿವೃತ್ತ ವೈದ್ಯನ ಪಾತ್ರ

ಕೊಲೆ ರಹಸ್ಯವನ್ನು ಬೇಧಿಸುವ ನಟರಾಜ್ ಕೃಷ್ಣ ಅವರ ಕಣ್ಣಾಮುಚ್ಚೆ ಕಾಡೆಗೂಡೆ ಸಿನಿಮಾ ಆಸಕ್ತಿದಾಯಕ ಪಾತ್ರಗಳನ್ನು ಒಳಗೊಂಡಿದೆ. ಚಿತ್ರದಲ್ಲಿ ನಿವೃತ್ತ ವೈದ್ಯರಾಗಿ ನಟ ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್‌
ರಾಘವೇಂದ್ರ ರಾಜ್‌ಕುಮಾರ್‌
Updated on

ಕೊಲೆ ರಹಸ್ಯವನ್ನು ಬೇಧಿಸುವ ನಟರಾಜ್ ಕೃಷ್ಣ ಅವರ ಕಣ್ಣಾಮುಚ್ಚೆ ಕಾಡೆಗೂಡೆ ಸಿನಿಮಾ ಆಸಕ್ತಿದಾಯಕ ಪಾತ್ರಗಳನ್ನು ಒಳಗೊಂಡಿದೆ. ಗರುಡ ಗಮನ ವೃಷಭ ವಾಹನದಲ್ಲಿ ಖಳನಾಯಕಿಯಾಗಿ ನಟಿಸಿದ್ದ ಜ್ಯೋತಿ ಶೆಟ್ಟಿ, ಮ್ಯಾನ್ ಆಫ್ ದಿ ಮ್ಯಾಚ್‌ನ ಪ್ರಮುಖ ನಾಯಕ ಅಥರ್ವ ಪ್ರಕಾಶ್ ಮತ್ತು ನಿವೃತ್ತ ವೈದ್ಯರಾಗಿ ನಟ ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪೋಸ್ಟರ್ ಅನ್ನು ಇತ್ತೀಚೆಗೆ ಸುಕನಂಕ ಚಾರಿಟಬಲ್ ಟ್ರಸ್ಟ್ ಅನಾಥಾಶ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ನಟರಾಜ್ ಕೃಷ್ಣ, 'ಕಣ್ಣಾಮುಚ್ಚೆ ಕಾಡೆಗೂಡೆ ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. ಅಲ್ಲದೆ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ರಾಘವೇಂದ್ರ ರಾಜ್‌ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ನಮ್ಮ ಚಿತ್ರದ ಪ್ರಮುಖ ಹೈಲೈಟ್. ಅವರು ಕಥೆಗೆ ಗಣನೀಯ ಕೊಡುಗೆ ನೀಡಿದ್ದಾರೆ ಮತ್ತು ಹೊಸಬರೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದರು.

ರಾಘವೇಂದ್ರ ರಾಜ್‌ಕುಮಾರ್‌
ಅಪ್ಪು ಜೊತೆಗಿನ ಕೊನೆ ಸೆಲ್ಫೀ ಹಂಚಿಕೊಂಡ ರಾಘವೇಂದ್ರ ರಾಜ್‌ಕುಮಾರ್‌!

ಅನಿತಾ ವೀರೇಶ್ ಕುಮಾರ್ ಮತ್ತು ಮೀನಾಕ್ಷಿ ರಾಜಶೇಖರ್ ನಿರ್ಮಾಣದ ಕಣ್ಣಾಮುಚ್ಚೆ ಕಾಡೆಗೂಡೆ ಚಿತ್ರಕ್ಕೆ ದೀಪಕ್ ಕುಮಾರ್ ಜೆಕೆ ಅವರ ಛಾಯಾಗ್ರಹಣ, ಬೇದ್ರೆ ಅವರು ಸಂಕಲನದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಪ್ರಾರ್ಥನಾ ನಾಯಕಿಯಾಗಿ ನಟಿಸಿದ್ದು, ವೀರೇಶ್ ಕುಮಾರ್, ಅರವಿಂದ್ ಬೋಳೂರು, ರವಿರಾಮ್ ಕುಂಜ್, ಸುರೇಶ್ ರೈ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com