
ನಮ್ ಗಣಿ B.Com ಪಾಸ್ ಚಿತ್ರದ ನಟ ಮತ್ತು ನಿರ್ದೇಶಕ ಅಭಿಷೇಕ್ ಶೆಟ್ಟಿ ಇದೀಗ ಸೀಕ್ವೆಲ್‌ನೊಂದಿಗೆ ಮರಳಿದ್ದಾರೆ. ಈ ಬಾರಿಯೂ ಅಭಿಷೇಕ್ ನಟ ಮತ್ತು ನಿರ್ದೇಶಕನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದಂದು ಚಿತ್ರದ ಅಧಿಕೃತ ಪ್ರಕಟಣೆ ಮಾಡಲಾಗಿದ್ದು, ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ.
ಅಭಿಷೇಕ್ ಸದ್ಯ ಅನೀಶ್ ಅಭಿನಯದ 'ಆರಾಮ್ ಅರವಿಂದ್ ಸ್ವಾಮಿ' ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ 'ನಮ್ ಗಣಿ B.Com ಪಾಸ್ 2' ಎಂಬ ಸೀಕ್ವೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವನ್ನು ಅದ್ವಿ ಕ್ರಿಯೇಷನ್ಸ್‌ನ ಪ್ರಶಾಂತ್ ಶೆಟ್ಟಿ ನಿರ್ಮಿಸುತ್ತಿದ್ದಾರೆ ಮತ್ತು ಚಿತ್ರತಂಡ ಇನ್ನೂ ಪಾತ್ರವರ್ಗವನ್ನು ಅಂತಿಮಗೊಳಿಸಿಲ್ಲ.
ಚಿತ್ರಕ್ಕೆ ಸುಮಂತ್ ಆಚಾರ್ ಅವರ ಛಾಯಾಗ್ರಹಣ, ಉಮೇಶ್ ಆರ್ ಅವರ ಸಂಕಲನ, ಆನಂದ್ ರಾಜ್ ವಿಕ್ರಮ್ ಅವರ ಸಂಗೀತ ನಿರ್ದೇಶನವಿದೆ. ಕಥೆ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ.
Advertisement