'ವಿದ್ಯಾಪತಿ'ಗೆ ಮಲೈಕಾ ವಸುಪಾಲ್‌ ನಾಯಕಿ!

‘ಹಿಟ್ಲರ್ ಕಲ್ಯಾಣ’ದ ಯಡವಟ್ಟು ಸುಂದರಿ ಮಲೈಕಾ ವಸುಪಾಲ್, ಇದೀಗ ನಾಗಭೂಷಣ್‌ ನಾಯಕರಾಗಿರುವ ‘ವಿದ್ಯಾಪತಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ವಿದ್ಯಾಪತಿ ಚಿತ್ರದ ಸ್ಟಿಲ್.
ವಿದ್ಯಾಪತಿ ಚಿತ್ರದ ಸ್ಟಿಲ್.

ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ' ಸಿನಿಮಾದಲ್ಲಿ ನಾಯಕಿಯಾಗಿ ಸ್ಯಾಂಡಲ್ ವುಡ್'ಗೆ ಎಂಟ್ರಿ ಕೊಟ್ಟಿದ್ದ ‘ಹಿಟ್ಲರ್ ಕಲ್ಯಾಣ’ದ ಯಡವಟ್ಟು ಸುಂದರಿ ಮಲೈಕಾ ವಸುಪಾಲ್, ಇದೀಗ ನಾಗಭೂಷಣ್‌ ನಾಯಕರಾಗಿರುವ ‘ವಿದ್ಯಾಪತಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ನಾಗಭೂಷಣ್‌ ಮತ್ತು ಇಷಾಂ, ಹಸೀಂ ಖಾನ್‌ ಕಾಂಬಿನೇಶನ್‌ನಲ್ಲಿ ‘ಇಕ್ಕಟ್‌’ ಎಂಬ ಸಿನಿಮಾ ಬಂದಿತ್ತು. ಈ ಬಾರಿ ಮತ್ತೊಂದು ವಿಭಿನ್ನ ಕಥೆಯ ಜೊತೆಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

‘ನನ್ನ ‘ಉಪಾಧ್ಯಕ್ಷ’ ಸಿನಿಮಾ ನೋಡಿ ‘ವಿದ್ಯಾಪತಿ’ ಸಿನಿಮಾ ತಂಡದವರು ಮೆಚ್ಚಿಕೊಂಡು ಈ ಚಿತ್ರಕ್ಕೆ ನನ್ನನ್ನು ಸೆಲೆಕ್ಟ್ ಮಾಡಿಕೊಂಡಿದ್ದು ಖುಷಿಯ ವಿಚಾರ. ಇದೊಂದು ಹಾಸ್ಯ ಚಿತ್ರವಾಗಿದ್ದು, ಚಿತ್ರದಲ್ಲಿನ ನನ್ನ ಪಾತ್ರ ಬಹಳ ಇಷ್ಟವಾಯಿತು. ‘ಉಪಾಧ್ಯಕ್ಷ’ ನಂತರ ಐದಾರು ಕಥೆ ಕೇಳಿದ್ದೆ. ಅದರಲ್ಲಿ ಈ ಚಿತ್ರದಲ್ಲಿನ ನನ್ನ ಪಾತ್ರ ಇಷ್ಟವಾಯಿತು. ಆದ್ದರಿಂದ ಆಯ್ಕೆ ಮಾಡಿಕೊಂಡೆ. ಅದಕ್ಕೆ ಮುಖ್ಯ ಕಾರಣ ಡಾಲಿ ಧನಂಜಯ ಅವರ ನಿರ್ಮಾಣ ಸಂಸ್ಥೆ ಮತ್ತು ಸಿನಿಮಾದ ಕಥೆ’ ಎಂದು ಮಲೈಕಾ ವಸುಪಾಲ್ ಹೇಳಿದ್ದಾರೆ.

ವಿದ್ಯಾಪತಿ ಚಿತ್ರದ ಸ್ಟಿಲ್.
ಕಿರುತೆರೆ ಅಥವಾ ಹಿರಿತೆರೆ, ಎಲ್ಲಾ ಕಡೆ ಪಾತ್ರದ ಅಭಿನಯ ಮುಖ್ಯ: ನಟಿ ಮಲೈಕಾ ವಸುಪಾಲ್

"ಉಪಾಧ್ಯಕ್ಷ ಚಿತ್ರದಲ್ಲಿ ಅಪ್ರಾಪ್ತ ವಯಸ್ಸಿನ ಪಾತ್ರವನ್ನು ನಿರ್ವಹಿಸಿದ್ದೆ. ಧಾರಾವಾಹಿಗಳಲ್ಲಿ ನೋಡಿದ ಪ್ರತಿಯೊಬ್ಬರೂ ವಿದ್ಯಾಪತಿಯಲ್ಲಿ ನನ್ನನ್ನು ವಿಭಿನ್ನ ರೀತಿಯಲ್ಲಿ ನೋಡಲಿದ್ದಾರೆ. ನಿರ್ದೇಶಕರು ನನ್ನ ಪಾತ್ರವನ್ನು ಉತ್ತಮವಾಗಿ ವಿನ್ಯಾಸಗೊಳಿಸಿದ್ದಾರೆ. ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಕ್ರಿಯೇಟಿವ್ ಡೈರೆಕ್ಟರ್ ಆಗಿ ತೇಜೇಶ್ ಗಣೇಶ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com