ದಿಗಂತ್, ಲೂಸ್ ಮಾದ, ಅಚ್ಯುತ್ ಕುಮಾರ್ ಅಭಿನಯದ 'ಬ್ಯಾಚುಲರ್ ಪಾರ್ಟಿ' ಹೊಸ ಹಾಡು ಬಿಡುಗಡೆ

ಗಣರಾಜ್ಯೋತ್ಸವದಂದು ಬಿಡುಗಡೆಗೆ ಸಜ್ಜಾಗುತ್ತಿರುವ ಬ್ಯಾಚುಲರ್ ಪಾರ್ಟಿಯ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬೆಂಬಲಿತ ಚಿತ್ರವು ಟೀಸರ್‌ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹೊಸ ವರ್ಷಕ್ಕೆ ಇದೀಗ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. 
ಬ್ಯಾಚುಲರ್ ಪಾರ್ಟಿ ಚಿತ್ರದ ಹಾಡಿನ ಸ್ಟಿಲ್

ವಾರ್ನಿಂಗ್ ಸಾಂಗ್ ಎಂಬ ಶೀರ್ಷಿಕೆಯ ಈ ಹಾಡು ಮದುವೆಯಾಗಲು ಬಯಸುವ ಜನರ ಬಗ್ಗೆ ಹೇಳುತ್ತದೆ ಮತ್ತು ಇದೊಂದು ಕಾಮಿಡಿ ಎಂಟರ್‌ಟೈನರ್ ಚಿತ್ರ ಎಂಬುದನ್ನು ಖಾತರಿಪಡಿಸುತ್ತದೆ. 

ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಅರ್ಜುನ್ ರಾಮು ಅವರ ಸಂಗೀತ ಮತ್ತು ಅಭಿಜಿತ್ ಮಹೇಶ್ ಮತ್ತು ವೀರೇಶ್ ಶಿವಮೂರ್ತಿ ಅವರ ಸಾಹಿತ್ಯದೊಂದಿಗೆ ವಾರ್ನಿಂಗ್ ಗೀತೆಗೆ ಭೂಷಣ್ ಅವರ ನೃತ್ಯ ಸಂಯೋಜನೆ ಇದೆ.

ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅಭಿನಯದ ಚಿತ್ರಗಳಲ್ಲಿ ಬರಹಗಾರರಾಗಿದ್ದ ಅಭಿ ಅವರು ಬ್ಯಾಚುಲರ್ ಪಾರ್ಟಿ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಚಿತ್ರದಲ್ಲಿ ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಬ್ಯಾಂಕಾಕ್ ಮತ್ತು ಪಟ್ಟಾಯ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಜನವರಿ 26 ರಂದು ಬಿಡುಗಡೆಯಾಗಲಿರುವ ಬ್ಯಾಚುಲರ್ ಪಾರ್ಟಿ ಚಿತ್ರವನ್ನು ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅಮಿತ್ ಗುಪ್ತಾ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com