ಫೆಬ್ರವರಿ 29 ರಿಂದ ಮಾರ್ಚ್ 7ರ ವರೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ

ಫೆಬ್ರವರಿ 29 ರಿಂದ ಮಾರ್ಚ್ 7ರ ವರೆಗೆ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಫೆಬ್ರವರಿ 29 ರಿಂದ ಮಾರ್ಚ್ 7ರ ವರೆಗೆ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ದಿನಾಂಕ ಘೋಷಣೆ ಮಾಡಲಾಗಿದೆ.

ಫೆಬ್ರವರಿ 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, ಮಾರ್ಚ್ 1 ರಿಂದ ಮಾರ್ಚ್ 7ರ ವರೆಗೆ ಸಿನಿಮಾಗಳ ಪ್ರದರ್ಶನ ನಡೆಯಲಿದೆ.

ಸಭೆ ಬಳಿಕ ಮಾತನಾಡಿದ ಸಿಎಂ, ‘ನನ್ನ ಅಧ್ಯಕ್ಷತೆಯಲ್ಲಿ ಇಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಸಭೆ ನಡೆದಿದೆ, ಫೆಬ್ರವರಿ 29 ರಿಂದ ಮಾರ್ಚ್ 7ವರೆಗೂ ಚಲನಚಿತ್ರೋತ್ಸವ ನಡೆಸಲು ತೀರ್ಮಾನ ಮಾಡಿದ್ದೇವೆ. ಇದು 15ನೇ ಆವೃತ್ತಿ ಆಗಿದೆ, ನಿಯಮದಂತೆ ಸಿಎಂ ಉದ್ಘಾಟನೆ ಮಾಡಲಿದ್ದಾರೆ, ದೇಶ ವಿದೇಶಗಳಲ್ಲಿ ಈ ಚಲನಚಿತ್ರೋತ್ಸವ ಮನ್ನಣೆ ಪಡೆದಿದೆ, ವಿಧಾನಸೌಧ ಮುಂಭಾಗ ಉದ್ಘಾಟನೆ ಮಾಡಲಾಗುತ್ತೆ, ಮಾರ್ಚ್ 7ನೇ ತಾರೀಖು ಸಮಾರೋಪ ಸಮಾರಂಭ ನಡೆಯುತ್ತೆ, ರಾಜ್ಯಪಾಲರು ಪ್ರಶಸ್ತಿಗಳನ್ನು ನೀಡುತ್ತಾರೆ. ಚಿತ್ರೋತ್ಸವ ಸಂಬಂಧ ಕೋರ್ ಕಮಿಟಿ ಮಾಡಿದ್ದೇವೆ. ವಿದೇಶದಿಂದ ಉತ್ತಮ ಚಿತ್ರಗಳನ್ನ ತರಿಸುತ್ತೇವೆ, ಕೋಮುವಾದ, ಸಮಾನತೆ, ಶಾಂತಿ ಸೌಹಾರ್ದತೆ ಬಗ್ಗೆ ಸಾರುವ ಚಿತ್ರಗಳ ಪ್ರದರ್ಶನ ನಡೆಯುತ್ತೆ’ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com