ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ ನಟನೆಯ ಮಾಫಿಯಾ ಚಿತ್ರದ ಮೊದಲ ಹಾಡು ಬಿಡುಗಡೆ

ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ಅಭಿನಯದ ಲೋಹಿತ್ ಎಚ್ ನಿರ್ದೇಶನದ ಮಾಫಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಚಿತ್ರದ ಮೊದಲ ಹಾಡು 'ತುಂಬಾನೆ ಕೇಳಲಾರೆ ಹಿಂದೆ ಬಿದ್ದು' ಬಿಡುಗಡೆಯಾಗಿದೆ. 
ಮಾಫಿಯಾ ಚಿತ್ರದ ಸ್ಟಿಲ್
ಮಾಫಿಯಾ ಚಿತ್ರದ ಸ್ಟಿಲ್

ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ಅಭಿನಯದ ಲೋಹಿತ್ ಎಚ್ ನಿರ್ದೇಶನದ ಮಾಫಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಚಿತ್ರದ ಮೊದಲ ಹಾಡು 'ತುಂಬಾನೆ ಕೇಳಲಾರೆ ಹಿಂದೆ ಬಿದ್ದು' ಬಿಡುಗಡೆಯಾಗಿದೆ. ಹಾಡಿಗೆ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಅನೂಪ್ ಸೀಳಿನ್ ಅವರ ಸಂಗೀತವಿದೆ. ಹರಿಚರಣ್ ಅವರು ಹಾಡಿಗೆ ಧ್ವನಿಯಾಗಿದ್ದು, ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆಯಿದೆ.

ಬೆಂಗಳೂರು ಫಿಲ್ಮ್ಸ್ ಬ್ಯಾನರ್‌ ಅಡಿ ಕುಮಾರ್ ಬಿ ನಿರ್ಮಿಸಿರುವ ಆ್ಯಕ್ಷನ್ ಥ್ರಿಲ್ಲರ್, ಪ್ರಜ್ವಲ್ ದೇವರಾಜ್ ಅವರ 35ನೇ ಚಿತ್ರವಾಗಿದೆ. ಚಿತ್ರದಲ್ಲಿ ಅವರ ತಂದೆ ದೇವರಾಜ್ ಕೂಡ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಧುಕೋಕಿಲಾ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್ ಮತ್ತು ವಾಸುಕಿ ವೈಭವ್ ನಟಿಸಿದ್ದಾರೆ. ಎಸ್ ಪಾಂಡಿಕುಮಾರ್ ಅವರ ಛಾಯಾಗ್ರಹಣವಿದೆ.

ಪ್ರಜ್ವಲ್ ದೇವರಾಜ್ ಅವರು ಗಣ, ಚೀತಾ ಮತ್ತು ಗುರುದತ್ತ ಗಾಣಿಗ ನಿರ್ದೇಶನದ ಮುಂಬರುವ ಕರಾವಳಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com