ರಂಗಾಯಣ ರಘು ಅವರಿಂದಲೇ 'ರಂಗಸಮುದ್ರ' ಸಾಧ್ಯವಾಯಿತು: ನಿರ್ದೇಶಕ ರಾಜ್‌ಕುಮಾರ್ ಅಸ್ಕಿ

ರಾಜ್‌ಕುಮಾರ್‌ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ರಾಘವೇಂದ್ರ ರಾಜ್‌ಕುಮಾರ್‌ ಬುಧವಾರ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದರು. ರಂಗಾಯಣ ರಘು ಅವರು ಮಹತ್ವದ ಪಾತ್ರವನ್ನು ನಿರ್ವಹಿಸಿರುವ ಈ ಚಿತ್ರವು ಜನವರಿ 12ರಂದು ತೆರೆಗೆ ಬರಲಿದೆ.
ರಂಗಸಮುದ್ರ ಚಿತ್ರದ ಸ್ಟಿಲ್
ರಂಗಸಮುದ್ರ ಚಿತ್ರದ ಸ್ಟಿಲ್

ರಾಜ್‌ಕುಮಾರ್‌ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ರಾಘವೇಂದ್ರ ರಾಜ್‌ಕುಮಾರ್‌ ಬುಧವಾರ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದರು. ರಂಗಾಯಣ ರಘು ಅವರು ಮಹತ್ವದ ಪಾತ್ರವನ್ನು ನಿರ್ವಹಿಸಿರುವ ಈ ಚಿತ್ರವು ಜನವರಿ 12ರಂದು ತೆರೆಗೆ ಬರಲಿದೆ ಮತ್ತು ಈ ಸಂಕ್ರಾಂತಿಯಂದು ಬಿಡುಗಡೆಯಾಗಲಿರುವ ಏಕೈಕ ಕನ್ನಡ ಚಿತ್ರ ಇದಾಗಿದೆ.

ರಾಘವೇಂದ್ರ ರಾಜ್‌ಕುಮಾರ್ ಅವರು ಚಿತ್ರದ ಕಂಟೆಂಟ್ ಆಯ್ಕೆ ಮಾಡಿದ ನಿರ್ದೇಶಕರನ್ನು ಶ್ಲಾಘಿಸಿದರು. ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಅವರ ನಟನೆಯನ್ನು ಶ್ಲಾಘಿಸಿದ ಅವರು, ಅಂತಹ ಚಿತ್ರದ ಭಾಗವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಚಿತ್ರದ ಯಶಸ್ಸಿಗೆ ಹಾರೈಸಿದರು ಮತ್ತು ತಂಡದೊಂದಿಗೆ ತಮ್ಮ ನಿರಂತರ ಸಹಯೋಗವಿರುತ್ತದೆ ಎಂದರು.

'ನನಗೆ ರಾಜ್‌ಕುಮಾರ್ ಅಸ್ಕಿ ಅವರ ನಿರೂಪಣೆ ಇಷ್ಟವಾಯಿತು. ಹೀಗಾಗಿಯೇ ಸಿನಿಮಾ ಮಾಡಲು ತಕ್ಷಣ ಒಪ್ಪಿಕೊಂಡೆ' ಎಂದು ನಟ ಹೇಳಿದರು. ಚಿತ್ರದ ಶೂಟಿಂಗ್ ಕರ್ನಾಟಕ ಮತ್ತು ಮಹಾರಾಷ್ಟ್ರದ ಮನಮೋಹಕ ಸ್ಥಳಗಳಲ್ಲಿ ನಡೆದಿದೆ. 

'ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಈಗ ಅದೇ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಜನವರಿ 12 ರಂದು ಬಿಡುಗಡೆಯಾಗಲಿದೆ' ಎಂದು ನಿರ್ದೇಶಕರು ಹೇಳುತ್ತಾರೆ.

'ನಿರ್ಮಾಪಕ ಹೊಯ್ಸಳ ಕೊಣನೂರು ಅವರಿಗೆ ಕಥೆಯನ್ನು ಹೇಳಿದಾಗ, ರಂಗಾಯಣ ರಘು ಅವರು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಳ್ಳದಿದ್ದರೆ, ಈ ಚಿತ್ರ ಚೆನ್ನಾಗಿರುವುದಿಲ್ಲ ಎಂದು ಹೇಳಿದರು. ಅಲ್ಲದೆ, ಈ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ನಟಿಸಬೇಕೆನ್ನುವ ತಮ್ಮ ಬಯಕೆಯನ್ನು ತಮ್ಮ ಬಳಿ ತಿಳಿಸಿದರು. ಇದೀಗ ಅವರ ಆಸೆಯೂ ಈಡೇರಿದೆ' ಎಂದು ರಾಜ್‌ಕುಮಾರ್ ಅಸ್ಕಿ ಹೇಳಿದರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಗೀಶ್ ಚನ್ನಗಿರಿ ಅವರ ಸಾಹಿತ್ಯವಿದೆ. ಕೈಲಾಶ್ ಖೇರ್, ವಿಜಯ ಪ್ರಸಾದ್, ಕೀರವಾಣಿ, ಸಂಚಿತ್ ಹೆಗ್ಡೆ ಮತ್ತು ನಿರ್ದೇಶಕ ರಾಜ್‌ಕುಮಾರ್ ಅಸ್ಕಿ ಕೂಡ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ಸಂಯೋಜಿಸಿದ್ದು, ಧನು ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com