ಸೆಟ್ಟೇರಿದ ‘ಲೈಫ್ ಟುಡೆ’: ಕಾಂತ ಕನ್ನಳ್ಳಿ ಅವರ ಎರಡನೆ ಸಿನಿಮಾಗೆ ಧ್ರುವ ಸರ್ಜಾ ಸಾಥ್!

ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಕಾಂತ ಕನ್ನಳ್ಳಿ ಅವರು ತಮ್ಮ ಎರಡನೆಯ ವರ್ಷದ ಪ್ರಾಜೆಕ್ಟ್ ಲೈಫ್ ಟುಡೇ ಪ್ರಾರಂಭಿಸಿದ್ದಾರೆ
ಕಾಂತ ಕನ್ನಳ್ಳಿ 2ನೇ ಸಿನಿಮಾಗೆ ಟೈಟಲ್
ಕಾಂತ ಕನ್ನಳ್ಳಿ 2ನೇ ಸಿನಿಮಾಗೆ ಟೈಟಲ್
Updated on

ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಕಾಂತ ಕನ್ನಳ್ಳಿ ಅವರು ತಮ್ಮ ಎರಡನೆಯ ವರ್ಷದ ಪ್ರಾಜೆಕ್ಟ್ ಲೈಫ್ ಟುಡೇ ಪ್ರಾರಂಭಿಸಿದ್ದಾರೆ. ನಿರ್ದೇಶಕ ಮಹೇಂದರ್ ಜೊತೆಗೆ ನಟ ಧ್ರುವ ಸರ್ಜಾ ಟೈಟಲ್ ಮತ್ತು ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕರು ತಮ್ಮ ಮೊದಲ ಚಿತ್ರದ ಬಗ್ಗೆ ತೋರಿದ ಪ್ರೀತಿ, ಉತ್ಸಾಹ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಿದರು, ಮೊದಲ ಸಿನಿಮಾಗೆ ಸಿಕ್ಕ ಬೆಂಬಲದಿಂದ ಮತ್ತೊಂದು ಚಿತ್ರ ಮಾಡಲು ಅನುವು ಮಾಡಿಕೊಟ್ಟಿತು.

ಲೈಫ್ ಟುಡೇ ಲವ್ ಫ್ಯಾಮಿಲಿ ಕಥಾಹಂದರ ಹೊಂದಿದ್ದು, ಈ ಚಿತ್ರದ ಮೂಲಕ ಕಿರಣ್ ಆನಂದ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದು, ಲೇಖಾ ಚಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಜನವರಿ ತಿಂಗಳಾಂತ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಸಿನಿಮಾಗೆ ಶ್ರೀಧರ್ ವಿ ಸಂಭ್ರಮ ಸಂಗೀತ, ಸತೀಶ್ ಕುಮಾರ್ ಕ್ಯಾಮೆರಾ ಹಿಡಿಯಲಿದ್ದಾರೆ. ಮೇಘನಾ ಪ್ರೊಡಕ್ಷನ್ ಮೇಘನಾ ಪ್ರದೀಪ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇರುವುದೆಲ್ಲವ ಬಿಟ್ಟು ಸಿನಿಮಾಗೆ ನೀವು ತೋರಿಸಿದ ಪ್ರೀತಿ, ಪ್ರೋತ್ಸಾಹ ಹಾಗೂ ಸಹಕಾರವನ್ನು ಎಂದು ಮರೆಯಲಾಗುವುದಿಲ್ಲ. ಆ ಸಹಕಾರವೇ ನನ್ನ ಇನ್ನೊಂದು ಸಿನಿಮಾ ಮಾಡಲು ವೇದಿಕೆ ಸೃಷ್ಟಿಸಿದೆ. ’ಲೈಫ್ ಟುಡೇ’ ಸಿನಿಮಾಗೆ ಬೆಂಬಲ ಕೊಡಲು ಆಗಮಿಸಿರುವ ಧ್ರುವ ಸರ್, ಶ್ರೀಧರ್ ಸರ್, ಮಹೇಂದರ್ ಸರ್‌ಗೆ ಧನ್ಯವಾದ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com