ಸಂಗೀತ, ನಾಟಕವೇ ನನ್ನ ಸಿನಿಮಾ ಪಯಣವನ್ನು ರೂಪಿಸಿದೆ: ಸಂಗೀತ ನಿರ್ದೇಶನಕ್ಕೆ ಪ್ರಶಾಂತ್ ಸಿದ್ದಿ ಎಂಟ್ರಿ

ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಸೂರಿ ಅವರ ಚಿತ್ರಗಳಲ್ಲಿನ ಪಾತ್ರಗಳಿಂದ ಹೆಸರುವಾಸಿಯಾದ ಬಹುಮುಖ ಪ್ರತಿಭೆ ಪ್ರಶಾಂತ್ ಸಿದ್ದಿ ಅವರೀಗ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಲು ಮುಂದಾಗಿದ್ದಾರೆ. 
ಪ್ರಶಾಂತ್ ಸಿದ್ದಿ- ಮತ್ಸ್ಯಗಂಧ ಚಿತ್ರದಲ್ಲಿ ಪೃಥ್ವಿ  ಅಂಬರ್
ಪ್ರಶಾಂತ್ ಸಿದ್ದಿ- ಮತ್ಸ್ಯಗಂಧ ಚಿತ್ರದಲ್ಲಿ ಪೃಥ್ವಿ ಅಂಬರ್

ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಸೂರಿ ಅವರ ಚಿತ್ರಗಳಲ್ಲಿನ ಪಾತ್ರಗಳಿಂದ ಹೆಸರುವಾಸಿಯಾದ ಬಹುಮುಖ ಪ್ರತಿಭೆ ಪ್ರಶಾಂತ್ ಸಿದ್ದಿ ಅವರೀಗ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಲು ಮುಂದಾಗಿದ್ದಾರೆ. ಪ್ರಶಾಂತ್ ಸಿದ್ದಿ ಅವರ ಜೀವನದ ನಿರಂತರ ಒಡನಾಡಿ ಸಂಗೀತವಾಗಿದೆ. ಇದೀಗ ಅವರು ದೇವರಾಜ್ ಪೂಜಾರಿ ನಿರ್ದೇಶನದ ಪೃಥ್ವಿ ಅಂಬರ್ ಅಭಿನಯದ 'ಮತ್ಸ್ಯಗಂಧ' ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಇದೀಗ ಚಿತ್ರತಂಡ ಪ್ರಶಾಂತ್ ಸಿದ್ಧಿ ಸಂಗೀತ ಸಂಯೋಜನೆಯ ಮತ್ಸ್ಯಗಂಧ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದೆ. ಈ ಹಾಡಿಗೆ ಈಗಾಗಲೇ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಯಾದ ಐದೇ ದಿನಕ್ಕೆ ಸುಮಾರು ಹತ್ತು ಮಿಲಿಯನ್ ವೀಕ್ಷಣೆ ಕಂಡಿದೆ. ನಿರ್ದೇಶಕರೇ ಹಾಡಿಗೆ ಸಾಹಿತ್ಯ ಬರೆದಿದ್ದು, ಇಂದು ನಾಗರಾಜ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಅಂಜಲಿ ಪಾಂಡೆ ಇದ್ದು, ಧನಂಜಯ್ ಅವರ ನೃತ್ಯ ನಿರ್ದೇಶನವಿದೆ. 

ಪ್ರಶಾಂತ್ ಸಿದ್ದಿ ಅವರು ತಮ್ಮ ಸಂಗೀತದ ಅಭಿರುಚಿಯ ಮೆಚ್ಚುಗೆ ತಮ್ಮ ತಾಯಿಗೆ ಸಲ್ಲಿಸುತ್ತಾರೆ. 'ಸಂಗೀತ ಮತ್ತು ನಾಟಕದಿಂದ ಸುತ್ತುವರೆದಿರುವುದೇ ನನ್ನ ಸಿನಿಮಾದ ಪ್ರಯಾಣವನ್ನು ರೂಪಿಸಿದೆ. ಮತ್ಸ್ಯಗಂಧದ ಮೂಲಕ ಸಂಗೀತ ಲೋಕಕ್ಕೆ ಕಾಲಿಟ್ಟದ್ದು, ನನ್ನ ಸಿನಿಮಾ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಿದೆ' ಎನ್ನುತ್ತಾರೆ ಪ್ರಶಾಂತ್.

ಮತ್ಸ್ಯಗಂಧ ಸಿನಿಮಾ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮೀನುಗಾರರ ಬಾಷೆ, ಬದುಕು, ಸಂಪ್ರದಾಯ, ಹೋರಾಟ, ಮೀನುಗಾರರ ಸ್ವಾಭಿಮಾನ, ಬವಣೆಯನ್ನು ಪರಿಚಯಿಸುತ್ತ ಸಾಗುತ್ತದೆ. ಸಮಾಜದಲ್ಲಿ ಪೋಲಿಸರ ಮತ್ತು ಜನಸಾಮಾನ್ಯರ ನಡುವಿನ ಸಂಭಂದದ ಮೇಲೆ ಬೇಳಕು ಚೆಲ್ಲುತ್ತದೆ ಎನ್ನುತ್ತದೆ ಚಿತ್ರತಂಡ.

ದೇಸಿ ಪೆಪ್ಪಿ-ಶೈಲಿಯ ಹಿನ್ನೆಲೆ ಸಂಗೀತಕ್ಕೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಪ್ರಶಾಂತ್ ಹರ್ಷಗೊಂಡಿದ್ದಾರೆ. ಪೃಥ್ವಿ ಅಂಬರ್ ಜೊತೆಗೆ ಮತ್ಸ್ಯಗಂಧದಲ್ಲಿ ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ನಾಗರಾಜ್ ಬೈಂದೂರು, ಕಿರಣ್ ನಾಯ್ಕ್, ದಿಶಾ ಶೆಟ್ಟಿ ಮತ್ತು ಪಿಡಿ ಸತೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಿಎಸ್ ವಿಶ್ವನಾಥ್ ನಿರ್ಮಿಸಿರುವ ಮತ್ಸ್ಯಗಂಧವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಫೆಬ್ರುವರಿಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com