'ಕ್ಲಿಕ್' ಚಿತ್ರದ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಪವನ್ ನಾಯಕನಾಗಿ ಪದಾರ್ಪಣೆ

ಶಶಿಕುಮಾರ್ ನಿರ್ದೇಶನದ 'ಕ್ಲಿಕ್' ಸಿನಿಮಾ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಮಗ ಮಾಸ್ಟರ್ ಪವನ್ ಬಸ್ರೂರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶರಣ್ಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಶಶಿಕಿರಣ್ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಿಸುತ್ತಿದ್ದಾರೆ. 
ಪುತ್ರ ಪವನ್ ಬಸ್ರೂರ್ ಜೊತೆ ರವಿ ಬಸ್ರೂರ್ - ಕ್ಲಿಕ್ ಸಿನಿಮಾದ ಪೋಸ್ಟರ್
ಪುತ್ರ ಪವನ್ ಬಸ್ರೂರ್ ಜೊತೆ ರವಿ ಬಸ್ರೂರ್ - ಕ್ಲಿಕ್ ಸಿನಿಮಾದ ಪೋಸ್ಟರ್
Updated on

ಶಶಿಕುಮಾರ್ ನಿರ್ದೇಶನದ 'ಕ್ಲಿಕ್' ಸಿನಿಮಾ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಮಗ ಮಾಸ್ಟರ್ ಪವನ್ ಬಸ್ರೂರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶರಣ್ಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಶಶಿಕಿರಣ್ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಿಸುತ್ತಿದ್ದಾರೆ. 

ಚಿತ್ರದಲ್ಲಿ ಕಾರ್ತಿಕ್, ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಆನಂದ್, ಮತ್ತು ಸುಮನ್ ಶಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. 

'ಅನೇಕ ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸುತ್ತಾರೆ. ಆದರೆ, ಇವುಗಳನ್ನು ಮೀರಿ ಹೆಚ್ಚಿನ ಆಯ್ಕೆಗಳಿವೆ. ಮಕ್ಕಳು ತಾವು ಕಲಿಯಲು ಬಯಸುವುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವ ಶಿಕ್ಷಣದ ಕುರಿತಾದ ಕಥೆಯನ್ನು 'ಕ್ಲಿಕ್' ಹೊಂದಿದೆ' ಎಂದು ನಿರ್ದೇಶಕರು ವಿವರಿಸುತ್ತಾರೆ.

ಪವನ್ ಬಸ್ರೂರ್ ಅವರನ್ನು ಪಾತ್ರಕ್ಕೆ ಪರಿಗಣಿಸಿದಾಗ ನಿರ್ದೇಶಕರು ಮೊದಲಿಗೆ ರವಿ ಬಸ್ರೂರ್ ಅವರೊಂದಿಗೆ ಕಥೆಯನ್ನು ಹಂಚಿಕೊಂಡರು. ಅವರು ಕಥೆಯನ್ನು ಇಷ್ಟಪಟ್ಟರು. 'ವಾಸ್ತವವಾಗಿ, ಪವನ್ ಅವರನ್ನು ಪಾತ್ರಕ್ಕೆ ಅಂತಿಮಗೊಳಿಸುವ ಮೊದಲು ಆಡಿಷನ್ ಮಾಡಲು ಅವರು ನಮ್ಮನ್ನು ಕೇಳಿದರು. ನಾವು ಆಡಿಷನ್ ಮತ್ತು ಕಾರ್ಯಾಗಾರವನ್ನು ಮಾಡಿದ್ದೇವೆ. ಪವನ್‌ಗೆ ಚಿಕ್ಕ ವಯಸ್ಸಿನಲ್ಲೇ ನಟನಾ ಕೌಶಲ್ಯ ಮತ್ತು ದೊಡ್ಡ ಮಹತ್ವಾಕಾಂಕ್ಷೆ ಇದೆ. ನಾನು ಚಿತ್ರವನ್ನು ನಿರ್ಮಿಸಿದರೂ ಕೂಡ ಕಥೆಯಿಂದ ಸಂಗೀತದವರೆಗೆ ಚಿತ್ರದ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದೇನೆ' ಎನ್ನುತ್ತಾರೆ ನಿರ್ಮಾಪಕ ಶಶಿಕಿರಣ್. 

ಪ್ರಾಥಮಿಕವಾಗಿ ಬೆಂಗಳೂರಿನ ಬಿಡದಿ, ರಾಮನಗರ ಮತ್ತು ಇತರ ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಕ್ಲಿಕ್‌ಗೆ ವಿಶ್ವಾಸ್ ಕೌಶಿಕ್ ಅವರ ಸಂಗೀತ, ಆಕಾಶ್ ಪರ್ವ ಅವರ ಹಿನ್ನೆಲೆ ಸಂಗೀತ ಮತ್ತು ಜೀವನ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com