'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಮೂಲಕ ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶಕರಾಗಿ ಪದಾರ್ಪಣೆ; ಸೋನಲ್ ಮೊಂತೆರೋ ನಾಯಕಿ

ಪಂಚತಂತ್ರ, ಗಾಳಿಪಟ 2, ಗರಡಿ ಮತ್ತು ಮುಂಬರುವ ಕರಟಕ–ದಮನಕ ಮುಂತಾದ ಚಿತ್ರಗಳಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಶ್ರೇಯಸ್ ರಾಜ್ ಶೆಟ್ಟಿ ಇದೀಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನ ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ. ಚಿತ್ರಕ್ಕೆ 'ಕುಲದಲ್ಲಿ ಕೀಳ್ಯಾವುದೋ' ಎಂದು ಹೆಸರಿಸಲಾಗಿದೆ. 
ನಟಿ ಸೋನಲ್ ಮೊಂತೆರೋ
ನಟಿ ಸೋನಲ್ ಮೊಂತೆರೋ

ಪಂಚತಂತ್ರ, ಗಾಳಿಪಟ 2, ಗರಡಿ ಮತ್ತು ಮುಂಬರುವ ಕರಟಕ–ದಮನಕ ಮುಂತಾದ ಚಿತ್ರಗಳಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಶ್ರೇಯಸ್ ರಾಜ್ ಶೆಟ್ಟಿ ಇದೀಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನ ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ. ಶ್ರೇಯಸ್ ಅವರು ಈ ಹಿಂದೆ ಹರಿಪ್ರಸಾದ್ ಜಯಣ್ಣ ಅವರ ಪದವಿಪೂರ್ವ ಚಿತ್ರಕ್ಕೂ ಕೆಲಸ ಮಾಡಿದ್ದರು.

ಚಿತ್ರಕ್ಕೆ 'ಕುಲದಲ್ಲಿ ಕೀಳ್ಯಾವುದೋ' ಎಂದು ಹೆಸರಿಸಲಾಗಿದೆ. ಸತ್ಯಹರಿಶ್ಚಂದ್ರ ಚಿತ್ರದ ಪ್ರಸಿದ್ಧ ಗೀತೆಯೊಂದರಿಂದ ಶೀರ್ಷಿಕೆಯನ್ನು ಪಡೆಯಲಾಗಿದೆ. ಈ ಥ್ರಿಲ್ಲರ್ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮತ್ತು ವಿವಿಧ ಚಿತ್ರಗಳಲ್ಲಿ ಅಭಿನಯಿಸಿರುವ ಮಡೆನೂರು ಮನು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಪಂಚತಂತ್ರ, ರಾಬರ್ಟ್ ಮತ್ತು ಗರಡಿ ಚಿತ್ರಗಳಲ್ಲಿ ನಟಿಸಿರುವ ಸೋನಲ್ ಮೊಂತೆರೋ ಅವರು ನಟಿಸಲಿದ್ದಾರೆ. ಇವರೊಂದಿಗೆ ರಂಗಾಯಣ ರಘು, ಶರತ್ ಲೋಹಿತಾಶ್ವ, ಮೌನ ಗುಡ್ಡೆಮನೆ ಸೇರಿದಂತೆ ಇತರರು ನಟಿಸುತ್ತಿದ್ದಾರೆ.

ಹೆಚ್ಚುವರಿಯಾಗಿ, ಕುಲದಲ್ಲಿ ಕೀಳ್ಯಾವುದೋ ಚಿತ್ರದಲ್ಲಿ ದಿಗಂತ್ ಮಂಚಾಲೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಸೆಟ್‌ಗೆ ಸೇರಿದ ನಂತರವೇ ಅವರ ಪಾತ್ರದ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಲಿವೆ. ಇಂದು ಚಿತ್ರದ ಮುಹೂರ್ತ ನಿಗದಿಯಾಗಿದ್ದು, ಫೆಬ್ರುವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಯೋಗರಾಜ್ ಸಿನಿಮಾಸ್ ಮತ್ತು ಪರ್ಲ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕ್ರಮವಾಗಿ ಯೋಗರಾಜ್ ಭಟ್ ಮತ್ತು ವಿದ್ಯಾ-ಸಂತೋಷ್ ಕುಮಾರ್ ಅವರು ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಯೋಗಿ ಗೌಡ ಬರೆದಿದ್ದಾರೆ. ಈ ಹಿಂದೆ ಮುಂಗಾರು ಮಳೆಯಲ್ಲಿ ಕೆಲಸ ಮಾಡಿದ್ದ ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ನೀಡಲಿದ್ದು, ಜಯಂತ್ ಕಾಯ್ಕಿಣಿ ಜೊತೆಗೆ ಯೋಗರಾಜ್ ಭಟ್ರು ಸಾಹಿತ್ಯ ಬರೆಯಲಿದ್ದಾರೆ. 

'ಕುಲದಲ್ಲಿ ಕೀಳ್ಯಾವುದೋ’ ತಾಂತ್ರಿಕ ತಂಡದಲ್ಲಿ ಕಲಾ ನಿರ್ದೇಶಕ ಶಶಿಧರ್ ಅಡಪ ಮತ್ತು ಛಾಯಾಗ್ರಾಹಕ ನಿರಂಜನ್ ಬಾಬು ಕೂಡ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com