'ಫೈರ್ ಫ್ಲೈ' ಕನ್ನಡ ಚಿತ್ರರಂಗದಲ್ಲಿ ಹೊಸ ಮಾದರಿಯ ಚಿತ್ರವಾಗಲಿದೆ: ಶೀತಲ್ ಶೆಟ್ಟಿ

ರಕ್ಷಿತ್ ಶೆಟ್ಟಿಯವರ ಉಳಿದವರು ಕಂಡಂತೆ ಚಿತ್ರದಲ್ಲಿನ ಅಭಿನಯಕ್ಕಾಗಿ ಗಮನಸೆಳೆದಿದ್ದ ನಿರೂಪಕಿ-ನಟಿ ಶೀತಲ್ ಶೆಟ್ಟಿ, ಫೈರ್ ಫ್ಲೈ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಟಿಯ ಹುಟ್ಟುಹಬ್ಬದಂದು ಈ ವಿಚಾರವನ್ನು ಬಹಿರಂಗಪಡಿಸಿದ್ದು, 'ವಿಕ್ಕಿಯ ಪ್ರಪಂಚವು ನಮ್ಮ ದಿವ್ಯಾ ಅವರೊಂದಿಗೆ ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಲಿದೆ' ಎಂದು ಬರೆದಿದ್ದಾರೆ.
ಶೀತಲ್ ಶೆಟ್ಟಿ - ಫೈರ್ ಫ್ಲೈ ಸ್ಟಿಲ್
ಶೀತಲ್ ಶೆಟ್ಟಿ - ಫೈರ್ ಫ್ಲೈ ಸ್ಟಿಲ್
Updated on

ಪಿಆರ್‌ಕೆ ಪ್ರೊಡಕ್ಷನ್ಸ್‌ನ ಮಾಯಾಬಜಾರ್‌ನಲ್ಲಿ ಸಹಾಯಕ ನಿರ್ದೇಶಕರಾಗಿದ್ದ ವಂಶಿ ಕೃಷ್ಣ ಫೈರ್‌ ಫ್ಲೈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಾಯಕರಾಗಿಯೂ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿವೇದಿತಾ ಶಿವರಾಜಕುಮಾರ್ ಅವರು ಚೊಚ್ಚಲ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಹಳೆಯ ಸುದ್ದಿ. ಇತ್ತೀಚಿನ ಸುದ್ದಿ ಏನೆಂದರೆ, ರಕ್ಷಿತ್ ಶೆಟ್ಟಿಯವರ ಉಳಿದವರು ಕಂಡಂತೆ ಚಿತ್ರದಲ್ಲಿನ ಅಭಿನಯಕ್ಕಾಗಿ ಗಮನಸೆಳೆದಿದ್ದ ನಿರೂಪಕಿ-ನಟಿ ಶೀತಲ್ ಶೆಟ್ಟಿ, ಫೈರ್ ಫ್ಲೈ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಟಿಯ ಹುಟ್ಟುಹಬ್ಬದಂದು ಈ ವಿಚಾರವನ್ನು ಬಹಿರಂಗಪಡಿಸಿದ್ದು, 'ವಿಕ್ಕಿಯ ಪ್ರಪಂಚವು ನಮ್ಮ ದಿವ್ಯಾ ಅವರೊಂದಿಗೆ ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಲಿದೆ' ಎಂದು ಬರೆದಿದ್ದಾರೆ.

ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿರುವ ಶೀತಲ್ ಶೆಟ್ಟಿ, ಚೊಚ್ಚಲ ನಿರ್ದೇಶಕರೊಬ್ಬರ ಜೊತೆ ಕೆಲಸ ಮಾಡಿದ ಅನುಭವ ಮತ್ತು ನಿರ್ಮಾಪಕಿ ನಿವೇದಿತಾ ಅವರೊಂದಿಗಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ, ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆಯೂ ಹೇಳಿದ್ದಾರೆ.

'ವಂಶಿ ಅವರು ನಟರ ಬಗ್ಗೆ ಸ್ಪಷ್ಟ ದೃಷ್ಟಿಯೊಂದಿಗೆ ಸಂಪೂರ್ಣವಾಗಿ ಸಿದ್ಧರಾಗಿಯೇ ಸೆಟ್‌ಗೆ ಆಗಮಿಸುತ್ತಿದ್ದರು. ಅವರು ಚೊಚ್ಚಲ ನಿರ್ದೇಶಕರಂತೆ ಕೆಲಸ ಮಾಡುವುದಿಲ್ಲ. ಅವರ ಕಥೆ ಹೇಳುವುದು, ಪಾತ್ರ ಚಿತ್ರಣ ಮತ್ತು ಪಾತ್ರವರ್ಗದ ನಿರ್ವಹಣೆ ಅತ್ಯುತ್ತಮವಾಗಿತ್ತು. ಅದು ಅವರ ಪ್ರತಿಭೆಯನ್ನು ತೋರಿಸುತ್ತದೆ. ಅವರ ನಿಖರವಾದ ಪೂರ್ವ ಯೋಜನೆ ಮತ್ತು ಯುವ ತಾಂತ್ರಿಕ ತಂಡವು ಅವರ ಅಸಾಧಾರಣ ಸಾಮರ್ಥ್ಯಗಳನ್ನು ನನಗೆ ಮನವರಿಕೆ ಮಾಡಿಕೊಟ್ಟಿತು. ಚಿತ್ರಕ್ಕೆ ಡಬ್ಬಿಂಗ್ ಮಾಡುವಾಗ, ಚಿತ್ರವು ಹೇಗೆ ಸುಂದರವಾಗಿ ಹೊರಹೊಮ್ಮಿದೆ ಎಂಬುದನ್ನು ನಾನು ನೋಡಿದೆ' ಎಂದು ಶೀತಲ್ ಹೇಳುತ್ತಾರೆ.

ಶೀತಲ್ ಶೆಟ್ಟಿ - ಫೈರ್ ಫ್ಲೈ ಸ್ಟಿಲ್
ಸೆಟ್ಟೇರಿದ ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ಮೊದಲ ಸಿನಿಮಾ 'ಫೈರ್ ಫ್ಲೈ'; ಚಿತ್ರಕ್ಕೆ ಶಿವಣ್ಣ ದಂಪತಿ ಹಾರೈಕೆ 

ಫೈರ್ ಫ್ಲೈ ಕನ್ನಡ ಚಿತ್ರರಂಗದಲ್ಲಿ ಒಂದು ಅದ್ಭುತ ಚಿತ್ರವಾಗಲಿದೆ. ಮುಂದಿನ ವರ್ಷಗಳಲ್ಲಿ ಚಿತ್ರದ ತಯಾರಿಕೆ ಮತ್ತು ಕಂಟೆಂಟ್‌ಗಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಿವೇದಿತಾ ಅವರ ಸಿನಿಮಾ ರಂಗದ ಹಿನ್ನೆಲೆಯು ಲಿಂಗವನ್ನು ಲೆಕ್ಕಿಸದೆ ಅವರಿಗೆ ತೀಕ್ಷ್ಣವಾದ ಸಿನಿಮೀಯ ದೃಷ್ಟಿಯನ್ನು ನೀಡಿದೆ ಮತ್ತು ನಿರ್ಮಾಪಕಿಯಾಗಿ ಉತ್ತಮವಾಗಿದೆ. ಅವರು ಫೈರ್ ಫ್ಲೈನಂತಹ ಚಿತ್ರವನ್ನು ಬೆಂಬಲಿಸಿರುವುದು ನನಗೆ ಸಂತೋಷವಾಗಿದೆ ಎನ್ನುತ್ತಾರೆ ಶೀತಲ್.

ತಮ್ಮ ಪಾತ್ರದ ಬಗ್ಗೆ ವಿವರಿಸುವ ಅವರು, 'ದಿವ್ಯಾ ಅವರು ಜೀವನದಲ್ಲಿ ಬೆಳಕನ್ನು ನೋಡುತ್ತಾಳೆ ಮತ್ತು ಮಾನವ ಸಂಪರ್ಕಗಳ ಆಳವಾದ ತಿಳುವಳಿಕೆಯನ್ನು ಹೊಂದಿರುತ್ತಾಳೆ. ನಾನು ಪಾತ್ರದೊಂದಿಗೆ ಸಂಬಂಧ ಹೊಂದಿದ್ದೇನೆ. ಹೀಗಾಗಿಯೇ, ಆ ಪಾತ್ರದಲ್ಲಿ ನಟಿಸಲು ನೆರವಾಯಿತು' ಎನ್ನುತ್ತಾರೆ.

ಶ್ರೀ ಮುತ್ತು ಸಿನಿ ಸರ್ವಿಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಶಿವರಾಜಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದು, ಅಭಿಲಾಷ್ ಕಲಹತ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com