ಜುಲೈ 2 ನೇ ವಾರದಲ್ಲಿ 'ಗೌರಿ' ಚಿತ್ರ ಬಿಡುಗಡೆ: ನಿರ್ದೇಶಕ ಇಂದ್ರಜಿತ್ ಲಂಕೇಶ್

ಇಂದ್ರಜಿತ್​ ಲಂಕೇಶ್​ ಅವರ ಪುತ್ರ ನಟ ಸಮರ್ಜಿತ್​ ಹಾಗೂ ಸಾನ್ಯಾ ಅಯ್ಯರ್ ಅಭಿನಯದ 'ಗೌರಿ' ಚಿತ್ರ ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಗೆ ಬರಲಿದೆ.
ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್
ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್
Updated on

ಶಿವಮೊಗ್ಗ: ಇಂದ್ರಜಿತ್​ ಲಂಕೇಶ್​ ಅವರ ಪುತ್ರ ನಟ ಸಮರ್ಜಿತ್​ ಹಾಗೂ ಸಾನ್ಯಾ ಅಯ್ಯರ್ ಅಭಿನಯದ 'ಗೌರಿ' ಚಿತ್ರ ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ವಿಷಯ ತಿಳಿಸಿದರು. ಅಕ್ಕನ ನೆನಪಿಗಾಗಿ ಚಿತ್ರಕ್ಕೆ ಗೌರಿ ಎಂದು ಹೆಸರಿಡಲಾಗಿದೆ. ಈ ಚಿತ್ರ ಯುವಕರಿಗೆ ಪ್ರೇರಣೆಯಾಗಲಿದೆ. ಇದು ನೈಜ ಜೀವನದ ಘಟನೆಯನ್ನು ಆಧರಿಸಿದ್ದು, ಉತ್ತಮ ಸಂದೇಶವನ್ನು ಹರಡುತ್ತದೆ. ಕಥೆ ನಮ್ಮ ರಾಜ್ಯಕ್ಕೆ ಸೇರಿದ್ದು, ರಾಷ್ಟ್ರದಾದ್ಯಂತ ಜನರು ಇದನ್ನು ಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ ಎಂದರು.

ಇದಲ್ಲದೆ, ತಮ್ಮ ಎಲ್ಲಾ ಜೀವನದ ಅನುಭವವನ್ನು ಸೇರಿಸಿ ಪ್ರೀತಿಯಿಂದ ಚಿತ್ರ ಮಾಡಿದ್ದೇನೆ. ಪುತ್ರ ಸಮರ್ಜಿತ್ ಲಂಕೇಶ್ ಮತ್ತು ಕಿರುತೆರೆ ನಟಿ ಸಾನ್ಯಾ ಅಯ್ಯರ್ ಸೇರಿದಂತೆ ಅನೇಕ ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಅವರು ತಿಳಿಸಿದರು.

ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್
ಇಂದ್ರಜಿತ್ ಲಂಕೇಶ್ ಪುತ್ರನ ಚೊಚ್ಚಲ ಅಭಿನಯದ 'ಗೌರಿ' ಚಿತ್ರದ ಟೀಸರ್

ಈ ಸಿನಿಮಾ ತನ್ನ ಅಕ್ಕ ಗೌರಿಯ ಜೀವನಾಧಾರಿತವಲ್ಲ. ಅವರ ಜೀವನಾಧಾರಿತ ಚಿತ್ರವೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಗೌರಿ ಒಂದು ಪಾತ್ರವಾಗಿದ್ದು, ನೈಜ ಘಟನೆಯನ್ನು ಆಧರಿಸಿ ಚಿತ್ರವನ್ನು ಮಾಡಲಾಗಿದೆ. ಗೌರಿ ಮೇಲೆ ಸಿನಿಮಾ ಮಾಡುವುದು ತುಂಬಾ ಕಷ್ಟ ಎಂದರು. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ, ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಅಕುಲ್ ಬಾಲಾಜಿ ಸೇರಿದಂತೆ ಹಿಂದಿನ ಮತ್ತು ಇಂದಿನ ಅನೇಕ ಕಲಾವಿದರು ನಟಿಸಿದ್ದಾರೆ. ಚಿತ್ರವನ್ನು ಕರ್ನಾಟಕದಲ್ಲಿ ಚಿತ್ರೀಕರಿಸಲಾಗಿದ್ದು, ಬಹುತೇಕ ಭಾಗವನ್ನು ನಿಸರ್ಗದ ಮಡಿಲು ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿದರು.

ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್
ರಮಣೀಯ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಚಿತ್ರೀಕರಣ

ಶಿವಮೊಗ್ಗ ಜಿಲ್ಲೆ ತನ್ನ ತವರು ನಾಡು ಮತ್ತು ನನ್ನ ಬೇರುಗಳಿವೆ. ಹಾಗಾಗಿ ನನ್ನ ಮಗನಿಗೆ ನನ್ನ ಹುಟ್ಟೂರು ಜಿಲ್ಲೆಯವರ ಆಶೀರ್ವಾದ ಬೇಕು ಮತ್ತು ಅದು ಶಿವಮೊಗ್ಗದಿಂದ ಚಿತ್ರದ ಪ್ರಚಾರವನ್ನು ಪ್ರಾರಂಭಿಸುವಂತೆ ಮಾಡಿದೆ. ಈ ಭೂಮಿ ಓರ್ವ ಮಹಾನ್ ಪತ್ರಕರ್ತ, ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ಪಿ ಲಂಕೇಶ್ ಅವರಿಗೆ ಜನ್ಮ ನೀಡಿದೆ. ತಾಂತ್ರಿಕವಾಗಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಮತ್ತು ನಾಲ್ವರು ಸಂಗೀತ ನಿರ್ದೇಶಕರು ಚಿತ್ರದ ಭಾಗವಾಗಿದ್ದಾರೆ ಮತ್ತು ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುಧಾ ಶಾಸ್ತ್ರಿ, ಜಾವೇದ್ ಅಲಿ , ಅನನ್ಯ ಭಟ್, ನಿಹಾಲ್ ಟೂರೊ ಮತ್ತು ಇತರರು ಹಾಡುಗಳನ್ನು ಹಾಡಿದ್ದಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com