'ದೇಸಾಯಿ'ಯಾಗಿ ಲವ್ 360 ಖ್ಯಾತಿಯ ನಟ ಪ್ರವೀಣ್ ಕುಮಾರ್; ನಾಳೆ ತೆರೆಗೆ

ನಾನು ಕೇಳಿದ ಮೂರು ಸ್ಕ್ರಿಪ್ಟ್‌ಗಳ ಪೈಕಿ, ಕೆಲವು ಹಿರಿಯ ನಟರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದರಿಂದ ಇದು ಸರಿಯಾದ ಆಯ್ಕೆ ಎಂದು ನಾನು ಭಾವಿಸಿದೆ' ಎಂದು ಪ್ರವೀಣ್ ಹೇಳುತ್ತಾರೆ.
ದೇಸಾಯಿ ಚಿತ್ರದ ಸ್ಟಿಲ್
ದೇಸಾಯಿ ಚಿತ್ರದ ಸ್ಟಿಲ್

ಶಶಾಂಕ್ ನಿರ್ದೇಶನದ ಲವ್ 360 ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟ ಪ್ರವೀಣ್ ಕುಮಾರ್, ಇದೀಗ ತಮ್ಮ ಎರಡನೇ ಪ್ರಾಜೆಕ್ಟ್ 'ದೇಸಾಯಿ' ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ವೀರಭದ್ರೇಶ್ವರ ಫಿಲಂಸ್ ಅಡಿಯಲ್ಲಿ ಮಹಾಂತೇಶ್ ವಿ ಚೋಳದಗುಡ್ಡ ನಿರ್ಮಿಸಿರುವ ಈ ಚಿತ್ರವನ್ನು ನಾಗಿರೆಡ್ಡಿ ಬಾಡ ನಿರ್ದೇಶಿಸಿದ್ದಾರೆ. ಜೂನ್ 21 ರಂದು ರಾಜ್ಯದಾದ್ಯಂತ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

'ನಾನು ಲವ್ 360 ನಲ್ಲಿ ನಟಿಸಿದ ನಂತರ, ಹೆಚ್ಚಾಗಿ ಪ್ರೀತಿ-ಪ್ರೇಮದ ಆಧರಿತ ಸ್ಕ್ರಿಪ್ಟ್‌ಗಳನ್ನು ಒಳಗೊಂಡ ಆಫರ್‌ಗಳನ್ನು ಸ್ವೀಕರಿಸಿದ್ದೇನೆ. ಆದರೆ, ನಾನು ಮಾಸ್ ಚಿತ್ರಗಳಲ್ಲಿ ನಟಿಸಲು ಬಯಸುತ್ತೇನೆ. ನಾನು ಕೇಳಿದ ಮೂರು ಸ್ಕ್ರಿಪ್ಟ್‌ಗಳ ಪೈಕಿ, ಕೆಲವು ಹಿರಿಯ ನಟರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದರಿಂದ ಇದು ಸರಿಯಾದ ಆಯ್ಕೆ ಎಂದು ನಾನು ಭಾವಿಸಿದೆ' ಎಂದು ಪ್ರವೀಣ್ ಹೇಳಿದರು.

'ನಾನು ನಿರ್ದಿಷ್ಟ ಟ್ರೆಂಡ್‌ನಿಂದ ಹೊರಬರಲು ಬಯಸುತ್ತೇನೆ. ಇದಲ್ಲದೆ, ಪ್ರಾಜೆಕ್ಟ್‌ನ ಹಣಕಾಸಿನ ಜವಾಬ್ದಾರಿಯನ್ನು ಹಂಚಿಕೊಳ್ಳಲು ನಿರೀಕ್ಷಿಸುವ ನಿರ್ಮಾಪಕರನ್ನು ನಾನು ಆಗಾಗ್ಗೆ ಎದುರಿಸುತ್ತೇನೆ. ಈ ಪರಿಸ್ಥಿತಿಯು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವ ನಟರಿಗೆ ವಿಶೇಷವಾಗಿ ಕಷ್ಟಕರವಾಗಿದೆ. ಆದರೆ, ದೇಸಾಯಿ ಚಿತ್ರದ ಹಿಂದಿದ್ದ ತಂಡ ನನ್ನ ಮೇಲೆ ನಂಬಿಕೆಯಿಟ್ಟು, ಈ ಯೋಜನೆಗೆ ಬಂಡವಾಳ ಹೂಡಿತು' ಎಂದರು.

ದೇಸಾಯಿ ಸಿನಿಮಾದಲ್ಲಿ ಪ್ರವೀಣ್ ಸಾಕಷ್ಟು ಸಾಹಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ಪ್ರತ್ಯೇಕ ತರಬೇತಿಯನ್ನು ಪಡೆದಿದ್ದಾರೆ ಮತ್ತು ನಿಜ ಜೀವನದ ಕುಸ್ತಿ ಆಟಗಾರರೊಂದಿಗೆ ಸಂವಹನ ನಡೆಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಮಾಸ್ ಫಿಲ್ಮ್ ಎಂದು ಬಿಂಬಿಸಲಾಗಿದ್ದರೂ, ದೇಸಾಯಿ ಮೂರು ತಲೆಮಾರುಗಳನ್ನು ವ್ಯಾಪಿಸಿರುವ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಅಜ್ಜ, ತಂದೆ ಮತ್ತು ಮಗನ ನಡುವೆ ನಡೆಯುತ್ತದೆ. ಚಿತ್ರಕ್ಕೆ ಪಿಕೆಎಚ್ ದಾಸ್ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ತಾರಾಗಣದಲ್ಲಿ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ ಮತ್ತು ಮಂಜುನಾಥ್ ಹೆಗಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ದೇಸಾಯಿ ಚಿತ್ರದ ಸ್ಟಿಲ್
ದೇಸಾಯಿ ಚಿತ್ರದ ಟೀಸರ್

ಈಮಧ್ಯೆ, ಚೊಚ್ಚಲ ನಿರ್ದೇಶಕ ಪೃಥ್ವಿ ಅವರ ಕಬಿ ಶೀರ್ಷಿಕೆಯ ಮತ್ತೊಂದು ಚಿತ್ರವನ್ನು ಸಹ ಪ್ರವೀಣ್ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

'ಲವ್ 360 ಮೂಲಕ ಹೆಸರಾಂತ ನಿರ್ದೇಶಕ ಶಶಾಂಕ್ ಅವರೊಂದಿಗೆ ವೃತ್ತಿಜೀವನ ಆರಂಭಿಸಿದ್ದಕ್ಕೆ ನಾನು ಅದೃಷ್ಟಶಾಲಿಯಾಗಿದ್ದೆ ಮತ್ತು ಈಗ ನಾನು ನನ್ನ ವೃತ್ತಿಜೀವನವನ್ನು ಮುನ್ನಡೆಸುವ ಮತ್ತು ನನ್ನನ್ನು ನಾನು ಸ್ಥಾಪಿಸಿಕೊಳ್ಳುವ ಸವಾಲನ್ನು ಎದುರಿಸುತ್ತಿದ್ದೇನೆ. ನನ್ನ ಮುಂದಿನ ಚಿತ್ರ ದೇಸಾಯಿ ಮತ್ತು ಇತರ ಯೋಜನೆಗಳು ಇದಕ್ಕೆ ದಾರಿ ಮಾಡಿಕೊಡುತ್ತವೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com