ಕೈಲಾಸ ಕಾಸಿದ್ರೆ ಚಿತ್ರದಲ್ಲಿ ನನ್ನ ಪಾತ್ರ ಮನರಂಜನೆ ನೀಡುತ್ತದೆ, ನನ್ನ ಚೊಚ್ಚಲ ಚಿತ್ರಕ್ಕೆ ವ್ಯತಿರಿಕ್ತವಾಗಿದೆ: ರವಿ

ತಾರಕಾಸುರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ರವಿ ಇದೀಗ ತಮ್ಮ ಎರಡನೇ ಚಿತ್ರ 'ಕೈಲಾಸ ಕಾಸಿದ್ರೆ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಚಿತ್ರವು ಮಾರ್ಚ್ 8 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.
ಕೈಲಾಸ ಕಾಸಿದ್ರೆ ಚಿತ್ರದ ಸ್ಟಿಲ್
ಕೈಲಾಸ ಕಾಸಿದ್ರೆ ಚಿತ್ರದ ಸ್ಟಿಲ್

ತಾರಕಾಸುರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ರವಿ ಇದೀಗ ತಮ್ಮ ಎರಡನೇ ಚಿತ್ರ 'ಕೈಲಾಸ ಕಾಸಿದ್ರೆ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಚಿತ್ರವು ಮಾರ್ಚ್ 8 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.

'ಕೈಲಾಸ ಕಾಸಿದ್ರೆ ನನ್ನ ಚೊಚ್ಚಲ ಚಿತ್ರಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಇದು ಕೇವಲ ವಿನೋದ ತುಂಬಿದ ಮನರಂಜನೆಯಾಗಿದೆ. ನಾವು ಸೆನ್ಸಾರ್ ಮಂಡಳಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿದ್ದೇವೆ. ಆದರೆ ಅಂತಿಮವಾಗಿ, ಎಲ್ಲವನ್ನೂ ಬಗೆಹರಿಸಿಕೊಳ್ಳಲಾಗಿದೆ' ಎಂದು ಹೇಳುತ್ತಾರೆ ರವಿ.

ನಾಗ್ ವೆಂಕಟ್ ನಿರ್ದೇಶನದ ಕೈಲಾಸ ಕಾಸಿದ್ರೆ ಇಂದಿನ ಯುವಕರ ಕಥೆಯನ್ನು ಹೇಳುತ್ತದೆ. ಹಣ ಮಾಡಲು ಶಾರ್ಟ್‌ಕಟ್‌ ದಾರಿಯ ಮೇಲೆ ನಂಬಿಕೆಯಿಡುವ ನಾಯಕ ಮತ್ತು ಅವನು ಎದುರಿಸುವ ಪರಿಣಾಮಗಳ ಸುತ್ತ ಸಿನಿಮಾ ಸುತ್ತುತ್ತದೆ ಎಂದು ರವಿ ಹೇಳುತ್ತಾರೆ.

ಕಾಮಿಡಿ, ಸೆಂಟಿಮೆಂಟ್ಸ್ ಮತ್ತು ಪ್ರೀತಿಯನ್ನೊಳಗೊಂಡ ಎಂಟರ್‌ಟೈನರ್ ಮಿಶ್ರಣವಾಗಿ ಬಿಂಬಿಸಲಾದ ಈ ಚಿತ್ರದಲ್ಲಿ ಸುಕನ್ಯಾ ಗಿರೀಶ್ ನಾಯಕಿಯಾಗಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಜೊತೆಗೆ ಲೋಕೇಶ್ ಮತ್ತು ಆಕರ್ಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣದ ಕೈಲಾಸ ಕಾಸಿದ್ರೆ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ ಮತ್ತು ವಿನೋದ್ ರಾಜೇಂದ್ರನ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com