ನಟ ಪ್ರಶಾಂತ್
ನಟ ಪ್ರಶಾಂತ್

ಶೂನ್ಯಾ ನಿರ್ದೇಶನದ 'ರೋಸಿ' ಮೂಲಕ ಒರಟ ಖ್ಯಾತಿಯ ಪ್ರಶಾಂತ್‌ ಸ್ಯಾಂಡಲ್‌ವುಡ್‌ಗೆ ರೀಎಂಟ್ರಿ

ಶೂನ್ಯಾ ನಿರ್ದೇಶನದ ಲೂಸ್ ಮಾದ ಯೋಗೀಶ್ ಅವರ 50ನೇ ಚಿತ್ರ ರೋಸಿ ಸಿನಿಮಾ ಸದ್ಯ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದಲ್ಲಿ ಸ್ಯಾಂಡಿ ಮತ್ತು ಶ್ರೀನಗರ ಕಿಟ್ಟಿ ನಟಿಸಿದ್ದು, ಇದೀಗ ಒರಟ ಐ ಲವ್ ಯೂ ಖ್ಯಾತಿಯ ಪ್ರಶಾಂತ್ ಚಿತ್ರತಂಡ ಸೇರಿಕೊಂಡಿದ್ದಾರೆ.
Published on

ಶೂನ್ಯಾ ನಿರ್ದೇಶನದ ಲೂಸ್ ಮಾದ ಯೋಗೀಶ್ ಅವರ 50ನೇ ಚಿತ್ರ ರೋಸಿ ಸಿನಿಮಾ ಸದ್ಯ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದಲ್ಲಿ ಸ್ಯಾಂಡಿ ಮತ್ತು ಶ್ರೀನಗರ ಕಿಟ್ಟಿ ನಟಿಸಿದ್ದು, ಇದೀಗ ಒರಟ ಐ ಲವ್ ಯೂ ಖ್ಯಾತಿಯ ಪ್ರಶಾಂತ್ ಚಿತ್ರತಂಡ ಸೇರಿಕೊಂಡಿದ್ದಾರೆ. ಪ್ರಶಾಂತ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಅಣ್ಣ ಸ್ವಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ರೋಸಿಯನ್ನು ಸ್ಟೈಲಿಶ್ ಗ್ಯಾಂಗ್‌ಸ್ಟರ್ ನಾಟಕ ಎಂದು ಶೂನ್ಯಾ ವಿವರಿಸುತ್ತಾರೆ. ಸುದೀರ್ಘ ವಿರಾಮದ ನಂತರ ಪ್ರಶಾಂತ್ ನಟನೆಗೆ ಪುನರಾಗಮನ ಮಾಡುತ್ತಿದ್ದಾರೆ. ಚಿತ್ರತಂಡ ಪ್ರಶಾಂತ್ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ನಟ ಪ್ರಶಾಂತ್
ಯೋಗಿ ನಟನೆಯ ರೋಸಿ ಚಿತ್ರದಲ್ಲಿ ತಮಿಳು ನಟ-ನಿರ್ದೇಶಕ ಪಾರ್ಥಿಬನ್‌ಗೆ ಪ್ರಮುಖ ಪಾತ್ರ?

ಈ ಸಿನಿಮಾವನ್ನು ಯಾಕೆ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಪ್ರತಿಕ್ರಿಯಿಸುವ ಪ್ರಶಾಂತ್, 'ನನಗೆ ಅನೇಕ ಅವಕಾಶಗಳು ಬಂದವು. ಆದರೆ, ನಿರ್ದೇಶಕ ಶೂನ್ಯಾ ಅವರು ಹೇಳಿದ ಕಥೆಗೆ ನಾನು ಸಾಕಷ್ಟು ಆಕರ್ಷಿತನಾಗಿದ್ದೆ. ನನ್ನ ಪಾತ್ರ ವಿನ್ಯಾಸ ವಿಶೇಷವಾಗಿ ಆಕರ್ಷಕವಾಗಿತ್ತು. ಅದಕ್ಕಿಂತ ಹೆಚ್ಚಾಗಿ, ನಾನು ಯೋಗಿ ಜೊತೆ ಕೆಲಸ ಮಾಡುವ ಹಂಬಲವನ್ನು ಹೊಂದಿದ್ದೇನೆ' ಎಂದರು.

ರೋಸಿ ಚಿತ್ರದ ಪೋಸ್ಟರ್
ರೋಸಿ ಚಿತ್ರದ ಪೋಸ್ಟರ್

ಇನ್ನೆರಡು ಪಾತ್ರಗಳ ಪರಿಚಯ ಬಾಕಿಯಿದೆ ಎಂದು ಶೂನ್ಯಾ ತಿಳಿಸಿದ್ದಾರೆ. ಅವರ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರವೇ ಚಿತ್ರತಂಡ ಅವರ ಹೆಸರನ್ನು ಬಹಿರಂಗಪಡಿಸುತ್ತಾರೆ. ಡಿವೈ ರಾಜೇಶ್ ಮತ್ತು ಡಿವೈ ವಿನೋದ್ ನಿರ್ಮಾಣದ ಈ ಚಿತ್ರಕ್ಕೆ ಎಸ್‌ಕೆ ರಾವ್ ಅವರ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಗುರುಕಿರಣ್ ಅವರ ಸಂಗೀತ ನಿರ್ದೇಶನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com