ಭೀಕರ ಅಪಘಾತದಿಂದಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಖ್ಯಾತ ನಟಿ, ಆಘಾತ ವ್ಯಕ್ತಪಡಿಸಿದ ಸಹೋದರಿ!

ನಟಿ ಅರುಂಧತಿ ನಾಯರ್ ತೆರಳುತ್ತಿದ್ದ ಬೈಕ್ ಅಪಘಾತಕ್ಕೀಡಾಗಿರುವ ಬಗ್ಗೆ ವರದಿಯಾಗಿತ್ತು. ಮಾರ್ಚ್ 14ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ನಟಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಟಿ ಅರುಂಧತಿ ನಾಯರ್
ನಟಿ ಅರುಂಧತಿ ನಾಯರ್

ನಟಿ ಅರುಂಧತಿ ನಾಯರ್ ತೆರಳುತ್ತಿದ್ದ ಬೈಕ್ ಅಪಘಾತಕ್ಕೀಡಾಗಿರುವ ಬಗ್ಗೆ ವರದಿಯಾಗಿತ್ತು. ಮಾರ್ಚ್ 14ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ನಟಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬೆಲ್ಲ ಸುದ್ದಿಗಳು ಹರಿದಾಡಿತ್ತು. ಇದೀಗ ಅದಕ್ಕೆ ಆಕೆಯ ಸಹೋದರಿ ಆರತಿ ಸ್ಪಷ್ಟನೆ ನೀಡಿದ್ದಾರೆ.

ಆರತಿ ಅರುಂಧತಿಯನ್ನು ಟ್ಯಾಗ್ ಮಾಡಿ, ತನ್ನ ಸಹೋದರಿ ಮೂರು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿದ್ದಾಳೆ. ಅಲ್ಲದೆ ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು Instagram ನಲ್ಲಿ ಬರೆದಿದ್ದಾರೆ. 'ತಮಿಳುನಾಡಿನ ಪತ್ರಿಕೆಗಳು ಮತ್ತು ಮಾಧ್ಯಮಗಳಿಗೆ ವರದಿಯಾದ ಸುದ್ದಿಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ನಾವು ಭಾವಿಸಿದ್ದೇವೆ. ಮೂರು ದಿನಗಳ ಹಿಂದೆ ನನ್ನ ಸಹೋದರಿ ಅರುಂಧತಿ ನಾಯರ್ ಅಪಘಾತಕ್ಕೀಡಾಗಿರುವುದು ನಿಜ ಎಂದು ಬರೆದಿದ್ದಾರೆ.

ತೀವ್ರವಾಗಿ ಗಾಯಗೊಂಡು ತಿರುವನಂತಪುರದ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇಡಲಾಗಿದೆ. ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ, ಆಕೆಗೆ ನಿಮ್ಮ ಬೆಂಬಲ ಬೇಕು ಎಂದು ಬರೆದಿದ್ದಾರೆ.

ನಟಿ ಅರುಂಧತಿ ನಾಯರ್
ಹೈದರಾಬಾದ್: ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ 'ಮಂಗ್ಲಿ'ಗೆ ಗಾಯ!

ಕೋವಲಂ ಬೈಪಾಸ್‌ನಲ್ಲಿ ಅಪಘಾತ ಸಂಭವಿಸಿದ್ದು, ಅರುಂಧತಿ ಅವರ ತಲೆಗೆ ಗಾಯಗಳಾಗಿವೆ. ಆಕೆ ತನ್ನ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.

ಅರುಂಧತಿ 2014ರಲ್ಲಿ ತಮಿಳು ಚಿತ್ರ ಪೊಂಗಿ ಎಜು ಮನೋಹರ ಮೂಲಕ ಪಾದಾರ್ಪಣೆ ಮಾಡಿದರು. ಅವರು ಸೈತಾನ್ ಮತ್ತು ಪಿಸ್ತಾ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಅಲ್ಲದೆ 2018ರಲ್ಲಿ ಮಲಯಾಳಂನಲ್ಲಿ ಒಟ್ಟಕೋರು ಕಾಮುಕನ್ ಚಿತ್ರದೊಂದಿಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ಶೈನ್ ಟಾಮ್ ಚಾಕೊಗೆ ಜೋಡಿಯಾಗಿದ್ದರು. ಕೊನೆಯದಾಗಿ 2023ರಲ್ಲಿ ಬಿಡುಗಡೆಯಾಗಿದ್ದ ಆಯಿರಂ ಪೊರ್ಕಾಸುಕಲ್ ನಲ್ಲಿ ಕಾಣಿಸಿಕೊಂಡರು. 2021ರಲ್ಲಿ ಮಲಯಾಳಂ ವೆಬ್-ಸರಣಿ ಪದ್ಮಿನಿ ಮತ್ತು ತಮಿಳು ಶೋ ಡೋಂಟ್ ಥಿಂಕ್‌ನಲ್ಲಿ ನಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com