ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ್ದ ನಟ ದರ್ಶನ್ ತೂಗುದೀಪ ಅಭಿನಯದ ಕಾಟೇರಾ ಚಿತ್ರ 100 ದಿನಗಳ ಪೂರೈಸಿದ ಸಂಭ್ರಮದ ನಡುವೆಯೇ ಚಿತ್ರತಂಡಕ್ಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ನಟ ದರ್ಶನ್ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಹೌದು.. ಸಿನಿಮಾ ಥಿಯೇಟರ್ಗಳಲ್ಲಿ ಕಾಟೇರ ಸಿನಿಮಾ ನೂರು ದಿನ ಪೂರೈಕೆ ಹಿನ್ನಲೆ ಚಿತ್ರದ ನಿರ್ಮಾಪಕರು ಚಿತ್ರತಂಡದ ಕೆಲವರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೂಡಿ ಕಥೆಗಾರ ಜಡೇಶ್ ಕುಮಾರ್ ಹಂಪಿ, ಸಂಭಾಷಣೆ ಬರಹಗಾರ ಮಾಸ್ತಿ ಉಪ್ಪಾರಹಳ್ಳಿ ಹಾಗೂ ನಟ ಸೂರಜ್ ಅವರಿಗೆ ಕಾರು ಗಿಫ್ಟ್ ಆಗಿ ನೀಡಿದ್ದಾರೆ.

ಚಿತ್ರ ತಂಡದಿಂದ ದಿಢೀರ್ ಸುದ್ದಿಗೋಷ್ಠಿ, ಕಾರು ಗಿಫ್ಟ್
ಕಾಟೇರ ಸಿನಿಮಾವನ್ನು ನಿರ್ಮಾಣ ಮಾಡಿದ ರಾಕ್ ಲೈನ್ ವೆಂಕಟೇಶ್ ಅವರು ರಾಕ್ಮಾಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಪ್ರೆಸ್ಮೀಟ್ನಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ಡೈಲಾಗ್ ರೈಟರ್ ಮಾಸ್ತಿ, ಕಥೆಗಾರ ಜಡೇಶ್ ಕೆ ಹಂಪಿ ಭಾಗಿಯಾಗಿದ್ದರು.
ಕಾಟೇರ ಸಿನಿಮಾ ನೂರು ದಿನ ಪೂರೈಕೆ ಹಿನ್ನಲೆ ನಿರ್ಮಾಪಕರ ಚಿತ್ರತಂಡದ ಕೆಲವರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಕಾಟೇರ ಚಿತ್ರಕಥೆ ಬರೆದ ಜಡೇಶ್ ಹಂಪಿ, ಸಂಭಾಷಣೆಗಾರ ಮಾಸ್ತಿ, ಹಾಗೂ ನಟ ಸೂರಜ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದರು.
ಚಿತ್ರದಲ್ಲಿ ನಟಿಸಿರುವ ಸೂರಜ್ ಅವರಿಗೆ ಸಿನಿಮಾ ರಿಲೀಸ್ ಆಗುವ ವೇಳೆಗೆ ಆಕ್ಸಿಡೆಂಟ್ ಆಗಿತ್ತು. ಅಪಘಾತದಲ್ಲಿ ನಟನ ಕಾಲಿಗೆ ಹಾನಿಯಾಗಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೂರಜ್ ಅವರಿಗೂ ಕಾರ್ ಗಿಫ್ಟ್ ಮಾಡಿದ್ದಾರೆ.
‘ಕಾಟೇರ’ ಕಣ್ಣೀರ ಕಥೆ, ಅನ್ಯಾಯ ವಿರುದ್ಧ ಹೋರಾಡುವ ರೀತಿ ಜನರ ಮನಮುಟ್ಟಿತು. ಅಷ್ಟೇ ಅಲ್ಲದೇ ಬಾಕ್ಸ್ಆಫೀಸ್ನಲ್ಲೂ ಭರ್ಜರಿ ಕಮಾಯಿ ಮಾಡಿತು. 2023ರ ಡಿಸೆಂಬರ್ 29ರಂದು ಬಿಡುಗಡೆ ಆದ ‘ಕಾಟೇರ’ ಸಿನಿಮಾ 100 ದಿನಗಳನ್ನು ಪೂರೈಸಿದೆ. ಇದೀಗ ಸಿನಿಮಾ 100 ದಿನಗಳನ್ನು ಪೂರೈಸಿದ ಖುಷಿಯನ್ನು ಚಿತ್ರತಂಡ ವಿಶೇಷವಾಗಿ ಸಂಭ್ರಮಿಸಿತು.
Advertisement