'ವಿದ್ಯಾರ್ಥಿ ವಿದ್ಯಾಥಿನಿಯರೇ' ಟ್ರೇಲರ್ ಎರಡು ಭಾಗಗಳಲ್ಲಿ ಬಿಡುಗಡೆ; ಸೈಡ್ ಎ ರಿಲೀಸ್
ನಟನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ರಾಪ್ ಗಾಯಕ ಮತ್ತು ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಬಿಡುಗಡೆಗೆ ಸಜ್ಜಾಗಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು. ಈಮಧ್ಯೆ, ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿದ್ದು, ಕಾಲೇಜು ಕ್ಯಾಂಪಸ್‌ನ ಹಿನ್ನೆಲೆಯಲ್ಲಿ ನಡೆಯುತ್ತದೆ. ಅರುಣ್ ಅಮುಕ್ತ ನಿರ್ದೇಶನದ ಈ ಚಿತ್ರವು ವಿದ್ಯಾರ್ಥಿಗಳ ಕುರಿತದ್ದಾಗಿದೆ ಎಂದು ನಿರೀಕ್ಷಿಸಲಾಗಿದೆ.
ಕುತೂಹಲಕಾರಿಯಾಗಿ, ಚಿತ್ರದ ಟ್ರೇಲರ್ ಅನ್ನು ಸೈಡ್ ಎ ಮತ್ತು ಬಿ ಎಂದು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಿದ್ದು, ಸೈಡ್ ಬಿಯನ್ನು ಚಿತ್ರ ಬಿಡುಗಡೆಯ ಹತ್ತಿರ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಚಿತ್ರತಂಡ ಚಂದನ್ ಶೆಟ್ಟಿ ಅವರ ಪಾತ್ರವನ್ನು ಮುಚ್ಚಿಟ್ಟಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕರ ಪ್ರಕಾರ, ಯೂತ್‌ಫುಲ್ ಎಂಟರ್‌ಟೈನರ್‌ನಲ್ಲಿ ಗಾಯಕ-ನಟ ವಿಭಿನ್ನ ಛಾಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಬ್ರಹ್ಮಣ್ಯ ಕುಡ್ಡೆ ಮತ್ತು ಎಸಿ ಶಿವಲಿಂಗೇಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ಅಮರ್, ಭಾವನಾ, ಮಾನಸಿ, ಭವ್ಯ, ಮತ್ತು ವಿವಾನ್ ಸೇರಿದಂತೆ ಬಹುತೇಕ ಹೊಸ ಮುಖಗಳಿದ್ದು, ರಘು ರಾಮನಕೊಪ್ಪ, ಸುಧಿ ಮುಂತಾದ ಅನುಭವಿ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದು, ಕುಮಾರ್ ಗೌಡ ಮತ್ತು ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ