'ಮಾರಿಗೆ ದಾರಿ' ಚಿತ್ರದ ಟೀಸರ್ ಬಿಡುಗಡೆ: ನಿರ್ದೇಶನದ ಜೊತೆಗೆ ಹಲವು ಜವಾಬ್ದಾರಿ ಹೊತ್ತ ನಾಯಕ ಅಗಸ್ತ್ಯ!

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಟೋಬಿ ಚಿತ್ರದ ಥೀಮ್ ಸಾಂಗ್‌ನ 'ಮಾರಿಗೆ ದಾರಿ' ಎಂಬ ಎರಡು ಪದಗಳನ್ನು ಈಗ ಹೊಸ ಚಿತ್ರಕ್ಕೆ ಶೀರ್ಷಿಕೆಯಾಗಿ ಆಯ್ಕೆ ಮಾಡಲಾಗಿದೆ. ಈ ಚಿತ್ರದ ಮೂಲಕ ಅಗಸ್ತ್ಯ ಅವರು ಚೊಚ್ಚಲ ನಿರ್ದೇಶನ ಮತ್ತು ನಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಮಾರಿಗೆ ದಾರಿ ಚಿತ್ರದಲ್ಲಿ ಅಗಸ್ತ್ಯ
ಮಾರಿಗೆ ದಾರಿ ಚಿತ್ರದಲ್ಲಿ ಅಗಸ್ತ್ಯ
Updated on

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಟೋಬಿ ಚಿತ್ರದ ಥೀಮ್ ಸಾಂಗ್‌ನ 'ಮಾರಿಗೆ ದಾರಿ' ಎಂಬ ಎರಡು ಪದಗಳನ್ನು ಈಗ ಹೊಸ ಚಿತ್ರಕ್ಕೆ ಶೀರ್ಷಿಕೆಯಾಗಿ ಆಯ್ಕೆ ಮಾಡಲಾಗಿದೆ. ಈ ಚಿತ್ರದ ಮೂಲಕ ಅಗಸ್ತ್ಯ ಅವರು ಚೊಚ್ಚಲ ನಿರ್ದೇಶನ ಮತ್ತು ನಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಮಾರಿಗೆ ದಾರಿ ಚಿತ್ರದ ಟೀಸರ್ ಹೃದಯಸ್ಪರ್ಶಿ ನಿರೂಪಣೆಯ ಬಗ್ಗೆ ಸುಳಿವು ನೀಡುತ್ತದೆ ಮತ್ತು ಪ್ರೇಕ್ಷಕರ ಮನ ಮುಟ್ಟುತ್ತದೆ ಎನ್ನುತ್ತಾರೆ ಅಗಸ್ತ್ಯ. ಚಿತ್ರಕ್ಕೆ ನಾಯಕ ಮತ್ತು ನಿರ್ದೇಶಕರಾಗಿರುವುದಷ್ಟೇ ಅಲ್ಲದೆ, ಸಂಭಾಷಣೆ ಮತ್ತು ಚಿತ್ರಕಥೆಯನ್ನು ತಾವೇ ಬರೆದಿದ್ದಾರೆ. ರಾಧಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ನಿರ್ದೇಶಕ ಅಗಸ್ತ್ಯ ಅವರು ಹೊಸ ಕಥಾಹಂದರಕ್ಕೆ ಆಕರ್ಷಣೀಯ ಅಂಶಗಳು ತುಂಬಿರುವುದಾಗಿ ಭರವಸೆ ನೀಡುತ್ತಾರೆ.

ಶೀರ್ಷಿಕೆಯಿಂದಲೇ ಸದ್ಯ ಚಿತ್ರವು ತೀವ್ರ ಗಮನ ಸೆಳೆದಿದ್ದು, ಶೀರ್ಷಿಕೆಯ ಟೀಸರ್ ನಾಯಕನ ವೈವಿಧ್ಯಮಯ ವ್ಯಕ್ತಿತ್ವಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಟೀಸರ್ ಕಥಾಹಂದರದ ಬಗ್ಗೆ ಯಾವುದೇ ಸುಳಿವುಗಳನ್ನು ಬಹಿರಂಗಪಡಿಸದಿದ್ದರೂ, ಇದು ನಾಯಕನ ಅಸಂಖ್ಯಾತ ಅಭಿವ್ಯಕ್ತಿಗಳನ್ನು ಪ್ರಸ್ತುತಪಡಿಸುತ್ತದೆ.

ಮಾರಿಗೆ ದಾರಿ ಚಿತ್ರದ ಸ್ಟಿಲ್
ಮಾರಿಗೆ ದಾರಿ ಚಿತ್ರದ ಸ್ಟಿಲ್

ಚಿತ್ರದಲ್ಲಿ ಮಹಾಲಕ್ಷ್ಮಿ ನಾಯಕಿಯಾಗಿ ಮತ್ತು ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ ಮತ್ತು ಬಾಲ ರಾಜವಾಡಿ ಪೋಷಕ ಪಾತ್ರಗಳಲ್ಲಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಜಗದೀಶ್ ಗೌಡ ನಿರ್ವಹಿಸಿದರೆ, ಸ್ವಾಮಿನಾಥನ್ ಆರ್ ಕೆ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡವು ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com