ದೀಪಾವಳಿ ದಿನ ಗುಡ್ ನ್ಯೂಸ್ ಕೊಟ್ಟ ಡಾಲಿ ಧನಂಜಯ್: ಗೆಳತಿ ಜೊತೆ ಹಸೆಮಣೆ ಏರಲು ಸಿದ್ಧ

ಮುಂದಿನ ವರ್ಷ ಫೆಬ್ರವರಿ 16ರಂದು ಮದುವೆ ನಡೆಯಲಿದೆ. ಧನಂಜಯ್ ಅವರು ಮದುವೆಯಾಗುತ್ತಿರುವ ಹುಡುಗಿ ವೃತ್ತಿಯಿಂದ ವೈದ್ಯೆ.
Dali Dhananjay with his girlfriend
ಡಾಲಿ ಧನಂಜಯ್ ತಮ್ಮ ಬಾಳಸಂಗಾತಿ ಜೊತೆಗೆ
Updated on

ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಅವರು ದೀಪಾವಳಿ ಹಬ್ಬದ ಸಮಯದಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಿದ್ದು, ತಮ್ಮ ಬಾಳ ಸಂಗಾತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಧನಂಜಯ್ ಪರಿಚಯಿಸಿದ್ದಾರೆ.

ಮುಂದಿನ ವರ್ಷ ಫೆಬ್ರವರಿ 16ರಂದು ಮದುವೆ ನಡೆಯಲಿದೆ. ಧನಂಜಯ್ ಅವರು ಮದುವೆಯಾಗುತ್ತಿರುವುದು ಚಿತ್ರರಂಗದವರನ್ನಲ್ಲ, ವೈದ್ಯೆಯನ್ನು ಕೈಹಿಡಿಯುತ್ತಿದ್ದಾರೆ. ಹುಡುಗಿಯ ಹೆಸರು ಧನ್ಯತಾ. ಸ್ತ್ರೀರೋಗ ತಜ್ಞೆ ಧನ್ಯತಾ ಮತ್ತು ಡಾಲಿ ಅನೇಕ ವರ್ಷಗಳಿಂದ ಪರಿಚಿತರು. ಇದೀಗ ಮನೆಯವರ ಒಪ್ಪಿಗೆ ಪಡೆದು ಹಸೆಮಣೆ ಏರಲು ಸಿದ್ಧವಾಗಿದ್ದಾರೆ.

ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋನ ಅವರು ಹಂಚಿಕೊಂಡಿದ್ದಾರೆ. ಧನ್ಯತಾ ಚಿತ್ರದುರ್ಗ ಮೂಲದವರು. ಓದಿದ್ದು ಮೈಸೂರಿನಲ್ಲಿ. ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಧನಂಜಯ್ ಅವರು ಭಾವಿ ಪತ್ನಿಗೆ ಸುಂದರ ಸಾಲುಗಳನ್ನು ಕೂಡ ಬರೆದಿದ್ದಾರೆ.

2013ರಲ್ಲಿ ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಡಾಲಿ ಧನಂಜಯ್ ಹಲವಾರು ಸದಭಿರುಚಿ ಚಿತ್ರಗಳನ್ನು ನೀಡಿದ್ದಾರೆ. ನಾಯಕ ನಟನಾಗಿ, ಚಿತ್ರ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಅತ್ಯುತ್ತಮ ನಟನಿಗೆ ನೀಡುವ ಸೈಮಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಧನಂಜಯ್‌ಗೆ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಬಡವ ರಾಸ್ಕಲ್ ಅನ್ನೋ ಚಿತ್ರ ನಿರ್ಮಾಣ ಮಾಡುವ ಮೂಲಕವೂ ಸೈ ಎನಿಸಿಕೊಂಡಿದ್ದಾರೆ. ವಿಶೇಷ ಅಂದರೆ ತೆಲುಗು ಹಾಗೂ ತಮಿಳು ಚಿತ್ರದಲ್ಲೂ ಧನಂಜಯ್ ಕೆಲ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com