ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿರುವ ಬಹುಮುಖ ನಟ ಕಿಶೋರ್ ಅವರು ಸಾಗರ್ ಕುಮಾರ್ ನಿರ್ದೇಶಿಸುತ್ತಿರುವ ಅನಾಮಧೇಯ ಅಶೋಕ್ ಕುಮಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಚಿತ್ರತಂಡ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಚಿತ್ರದ ಕೆಲವು ಸ್ಟಿಲ್ ಗಳನ್ನು ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ ನಟ ಹರ್ಶಿಲ್ ಕೌಶಿಕ್ ಕೂಡ ನಟಿಸಿದ್ದಾರೆ.
ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ನಟ ಕಿಶೋರ್ ಅವರು ಸಲ್ಮಾನ್ ಖಾನ್ ಅಭಿನಯದ ಮತ್ತು ಎಆರ್.ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರದಲ್ಲಿಯೂ ನಟಿಸುತ್ತಿದ್ದು, ಈ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಅನಾಮಧೇಯ ಅಶೋಕ್ ಕುಮಾರ್ ಚಿತ್ರದ ಕಥೆಯು ಖ್ಯಾತ ವಕೀಲರೊಬ್ಬರ ಕೊಲೆ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಜೀವನ್ಮರಣದ ಸುತ್ತ ಸುತ್ತುತ್ತದೆ. ಪಟ್ಟುಬಿಡದ ಪತ್ರಕರ್ತನೊಬ್ಬನ ಅನುಮಾನದ ಜಾಲದಲ್ಲಿ ಸಿಲುಕಿಕೊಳ್ಳುವುದು, ಪೊಲೀಸ್ ಅಧಿಕಾರಿಯಾಗಿ ಹರ್ಷಿಲ್ ಕೌಶಿಕ್ ಎಂಟ್ರಿ, ಸತ್ಯವನ್ನು ಬಹಿರಂಗಪಡಿಸುವ ಕಥೆಯನ್ನು ಚಿತ್ರ ಹೊಂದಿದೆ.
ಎಸ್‌ಕೆಎನ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಲಾದ ಮತ್ತು ಜನನಿ ಪಿಕ್ಚರ್ಸ್ ವಿತರಿಸಿದ ಈ ಚಿತ್ರಕ್ಕೆ ಬೆನ್ನಿ ಥಾಮಸ್ ಹಾಗೂ ನಿರ್ದೇಶಕ ಸಾಗರ್ ಕುಮಾರ್ ಅವರು ಕಥೆ ಬರೆದಿದ್ದಾರೆ. ಚಿತ್ರದ ಡಿಒಪಿ ಸುನಿಲ್ ಹೊನಳ್ಳಿ, ಮತ್ತು ಸಂಗೀತವನ್ನು ಆಜಾದ್ ಸಂಯೋಜಿಸಿದ್ದಾರೆ, ಸಂಕಲನವನ್ನು ಕೆ. ಯೇಸು ನಿರ್ವಹಿಸಿದ್ದಾರೆ. ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವು ತಮಿಳಿನಲ್ಲೂ ಡಬ್ ಆಗುವ ಸಾಧ್ಯತೆ ಇದೆ.
Advertisement