Bhairathi Ranagal: Puneeth Rajkumar ಫೋಟೋ ಇಲ್ಲ ಎಂದ ಅಭಿಮಾನಿಗೆ ಶಿವಣ್ಣ ಖಡಕ್ ಉತ್ತರ!

ಭೈರತಿ ರಣಗಲ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನೆನಪು ಇಲ್ಲ.. ಅವರ ಫೋಟೋ ಇಲ್ಲ ಎಂದು ಕೇಳಿದ ಅಭಿಮಾನಿಗೆ ಶಿವಣ್ಣ ಭರ್ಜರಿ ಉತ್ತರ ನೀಡಿದ್ದು, ನಾನು ಆತನ ವ್ಯಕ್ತಿತ್ವಕ್ಕೆ ಅಭಿಮಾನಿ... ಎಂದು ಪ್ರಶ್ನಿಸಿದ್ದಾರೆ
Bhairathi Ranagal Movie
ಭೈರತಿ ರಣಗಲ್ ಚಿತ್ರ
Updated on

ಬೆಂಗಳೂರು: ಶುಕ್ರವಾರ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಭೈರತಿ ರಣಗಲ್' ಚಿತ್ರದಲ್ಲಿ 'Puneeth Rajkumar' ಫೋಟೋ ಇಲ್ಲ ಎಂದ ಅಭಿಮಾನಿಗೆ ನಟ ಶಿವರಾಜ್ ಕುಮಾರ್ ಭರ್ಜರಿ ಉತ್ತರ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಶಿವಣ್ಣ, 'ಪುನೀತ್ ರಾಜ್ ಕುಮಾರ್ ಹುಟ್ಟಿದಾಗಲೇ ನಾನು ಅವನ ಅಭಿಮಾನಿ' ಎಂದು ಹೇಳಿದ್ದಾರೆ.

ಭೈರತಿ ರಣಗಲ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನೆನಪು ಇಲ್ಲ.. ಅವರ ಫೋಟೋ ಇಲ್ಲ ಎಂದು ಕೆಲ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೇ ವಿಚಾರವಾಗಿ ಕಾರ್ಯಕ್ರಮದಲ್ಲಿ ಕರೆ ಮಾಡಿದ್ದ ಅಭಿಮಾನಿಯೋರ್ವ ಕೇಳಿದ್ದು, ಇದಕ್ಕೆ ಭರ್ಜರಿ ಉತ್ತರಿಸಿದ ಶಿವಣ್ಣ, 'ನನ್ನ ಮುಖದಲ್ಲಿ ಅಪ್ಪು ಕಾಣುತ್ತಿಲ್ಲವೇ.. ನನ್ನ ಪಾಲಿಗೆ ಆತ ಇನ್ನೂ ಸತ್ತಿಲ್ಲ.. ಸದಾಕಾಲ ನಮ್ಮೊಂದಿಗೇ ಇರುತ್ತಾನೆ. ಫೋಟೋ ಹಾಕಿ ದೂರ ತಳ್ಳಲು ಇಷ್ಟಪಡುವುದಿಲ್ಲ.

Bhairathi Ranagal Movie
Bhairathi Ranagal: 'ಚಿತ್ರ ತುಂಬಾ ಚೆನ್ನಾಗಿದೆ, ಆದರೆ...'; ಶಿವಣ್ಣನ ವಿರುದ್ಧ Puneeth RajKumar ಫ್ಯಾನ್ಸ್ ಅಸಮಾಧಾನ!

ಪುನೀತ್ ಯಾವಾಗಲೂ ನಮ್ಮೊಂದಿಗೇ ಇರುತ್ತಾನೆ. ನನ್ನ ತಮ್ಮನ್ನ ಹೇಗೆ ಪ್ರೀತಿಸಬೇಕು ಎಂಬುದು ನನಗೆ ಗೊತ್ತು. ಪುನೀತ್ ಸಿನಿಮಾ ಎಂದರೆ ಅಭಿಮಾನಿಗಳಿಗಿಂತ ಮೊದಲು ನಾನು ಮುಂದೆ ಇರುತ್ತೇನೆ. ಮೊದಲ ದಿನ ಮೊದಲ ಷೋ ಥಿಯೇಟರ್ ನಲ್ಲಿ ನೋಡುತ್ತಿದ್ದೆ' ಎಂದು ಹೇಳಿದ್ದಾರೆ.

ಅಂತೆಯೇ, 'ನೀವು ಪುನೀತ್ ಗೆ ಅಭಿಮಾನಿಯಾಗುವುದಕ್ಕಿಂತ ಮುಂಚೆ ನಾನು ಆತನ ಅಭಿಮಾನಿಯಾಗಿದ್ದೆ. ಹುಟ್ಟಿನಿಂದಲೇ ನಾನು ಆತನ ವ್ಯಕ್ತಿತ್ವಕ್ಕೆ ಅಭಿಮಾನಿ.. ನಟನೆ ಹೊರತುಪಡಿಸಿದರೆ ಆತನ ಗುಣ ನನಗೆ ಇಷ್ಟ. ಹೀಗಾಗಿ ಅಭಿಮಾನಿಗಳು ಕೂಡ ಸಿನಿಮಾವನ್ನು ಸಿನಿಮಾ ರೀತಿಯಲ್ಲಿಯೇ ನೋಡಿ' ಎಂದು ಶಿವಣ್ಣ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com