ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ದೂರು!

ಬೆಂಗಳೂರಿನ ಪಶ್ಚಿಮ ಸೆನ್ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಅವರ 60 ಮಂದಿ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ಅವರು ದೂರು ದಾಖಲಿಸಿದ್ದಾರೆ.
Actor Pratham
ನಟ ಪ್ರಥಮ್
Updated on

ಬೆಂಗಳೂರು: ನಟ ದರ್ಶನ್ ಅವರ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ಅವರು ಶನಿವಾರ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಪಶ್ಚಿಮ ಸೆನ್ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಅವರ 60 ಮಂದಿ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ಅವರು ದೂರು ದಾಖಲಿಸಿದ್ದಾರೆ.

ದೂರು ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಥಮ್ ಅವರು, ಸಂಜೆ ಗ್ರಾಮಾಂತರದ ಪ್ರತಿಷ್ಟಿತ ಹೋಟೆಲ್ ನಲ್ಲಿ ಆಪ್ತರೊಟ್ಟಿಗೆ ಊಟಕ್ಕೆ ಕೂತಿದ್ದೆವು. ಕೆಲವರು ಫೋಟೋ ತಗೊಂಡರು. ಜೈ ಡಿ ಬಾಸ್ ಅಂತ ಬಲವಂತವಾಗಿ ಕೂಗೋಕೆ ಹೇಳಿ ಗಲಾಟೆ ಕೂಗಿದರು. ಒಳ್ಳೇದಾಗ್ಲಪ್ಪ ಅಂದೆ. ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಬಂದ್ರು. ಅಲ್ಲಿದ್ದ 8 ಜನ ಬೌನ್ಸರ್ ಆ ಗೂಂಡಗಳನ್ನ ಎಳೆದು ಹೊರಗೆ ತಳ್ಳಿದ್ರು; ಕ್ಷಮೆಕೇಳಿದ್ರು. ಬಿಟ್ಟಿದ್ದೀನಿ. ಹೋಟೆಲ್ ನ ಎಲ್ಲಾ ಸಿಬ್ಬಂದಿ ಹಾಗೂ ಮ್ಯಾನೇಜರ್ ಮನವಿ ಮೇರೆಗೆ ನಾನು ಕಂಪ್ಲೇಂಟ್ ಕೊಡಬಾರ್ದು ಎಂದು ನಿರ್ಧರಿಸಿದೆ.

Actor Pratham
ನಟ ಪ್ರಥಮ್, ಉಮಾಪತಿಗೆ ಅವಾಚ್ಯ ಪದಗಳಿಂದ ನಿಂದನೆ: ಕ್ಷಮೆ ಕೇಳಿದ ದರ್ಶನ್ ಅಭಿಮಾನಿ!

ನಮ್ಮ ಪಾಡಿಗೆ ನಾವಿದ್ದೇವೆ. ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವರ ಪಾಡಿಗೆ ಇದ್ದಾರೆ. ಆದರೆ, ಈ ಮಿನಿ ಗೂಂಡಾಗಳ ನಿಗರಾಟ ನೋಡೋಕಾಗುತ್ತಿಲ್ಲ. ಹೇಗಿದ್ರೂ ಹೋಟೆಲ್ ನಲ್ಲಿ ಸಿಸಿಟಿವಿ ಇದೆ. ಇದು ಹೀಗೆ ಮುಂದುವರೆದರೆ ನಾನಂತು ಸುಮ್ಮನೆ ಕೂರಲ್ಲ. ಒತ್ತಾಯದಿಂದ ಜೈ ಡಿಬಾಸ್ ಅನ್ನಿಸೋದು. ಬಲವಂತವಾಗ ಅಶ್ಲೀಲ ಪದ ಬಳಸೋದು ನೋಡ್ತಾ ಇರೋಕಾಗಲ್ಲ; ನಾನು ಒಂದು ಕಂಪ್ಲೈಂಟ್ ಕೊಟ್ರೆ ಕಂಬಿ ಎಣಿಸಬೇಕಾಗುತ್ತದೆ. ಮುಚ್ಕೊಂಡು ಮೈಬಗ್ಗಿಸಿ ದುಡಿದು ಚೆನ್ನಾಗಿ ಬದುಕಿ.

ಇದು 2nd time ಆಗ್ತಿರೋದು; ನಾನು ಒಂದು ಕಂಪ್ಲೇಂಟ್ ಕೊಟ್ರೆ ಜೈಲು, ಕೇಸ್ ಅಂತ ಅಲಿಬೇಕಾಗುತ್ತದೆ. ಅಲ್ಲಿದ್ದ ನಾಲ್ಕು ಪುಡಿರೌಡಿಗಳ ಫ್ಯಾಮಿಲಿ ನೆನಪಿಸಿಕೊಂಡು ಸುಮ್ನಿದ್ದೀನಿ. ಕಿರುಚಾಡಿದ್ದ ವೀಡಿಯೋ, ಅನುಚಿತ ವರ್ತನೆ ಮಾಡಿದ್ದು ಎಲ್ಲವೂ ಇದೆ. ಸುಮ್ನೆ ಮುಚ್ಕೊಂಡು ಇರೋಕೆ ಏನ್ರೋ ರೋಗ ನಿಮ್ಗೆ? ಬದುಕು ಸುಂದರವಾದದ್ದು. ಹಾಳು ಮಾಡ್ಕೊಬೇಡಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com