ರೈಡರ್ ಚಿತ್ರದಲ್ಲಿ ಪ್ರಮುಖ ಪಾತ್ರದ ಮೂಲಕ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡಿದ ನಟಿ ಸಂಪದಾ ಅವರು, ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸುತ್ತಿರುವ ಎಕ್ಕ ಚಿತ್ರದಲ್ಲಿ ಯುವರಾಜ್ ಕುಮಾರ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
ಬೆಂಕಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸಂಪದ, ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಹಾಗೂ ಗುರುದತ್ತ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.
ಯುವರಾಜ್ ಕುಮಾರ್ ಅವರೊಂದಿಗೆ ನಟಿಸಲು ಬಹಳ ಉತ್ಸುಕಳಾಗಿದ್ದೇನೆ. 2024 ನನಗೆ ನಿಧಾನವಾಗಿರಬಹುದು, ಆದರೆ, ಇದು ಉತ್ತಮ ವರ್ಷವಾಗಿದೆ. ಎರಡು ಉತ್ತಮ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರರಂಗದಲ್ಲಿ ಮುಂದುವರೆಯಲು ನನಗೆ ಬೇಕಾಗಿರುವುದು ಇಷ್ಟೇ. ಎಕ್ಕ ನನ್ನ ನಾಲ್ಕನೇ ಚಿತ್ರವಾಗಿದ್ದು, ಪಾತ್ರಗಳ ಆಯ್ಕೆಯಲ್ಲಿ ಬಹಳ ಯೋಚಿಸಿ, ಆಯ್ಕೆ ಮಾಡುತ್ತೇನೆಂದು ನಟಿ ಸಂಪದ ಅವರು ಹೇಳಿದ್ದಾರೆ.
ಚಿತ್ರತಂಡೊಂದಿಗೆ ಮಾತುಕತೆ ನಡೆಸಿದ್ದು ಉತ್ತಮ ಅನುಭವ ನೀಡಿದೆ. ಚಿತ್ರದಲ್ಲಿ ಇಬ್ಬರು ನಾಯಕ ನಟಿಯರಿರುವುದರಿಂದ ಪಾತ್ರ ಆಯ್ಕೆ ಬಗ್ಗೆ ಚಿಂತೆಯಿತ್ತು. ಆದರೆ, ನಂತರ ನಟಿಸಲು ನಿರ್ಧರಿಸಿದೆ. ನನ್ನ ಪಾತ್ರದ ಬಗ್ಗೆ ನನಗೆ ಸಂತೋಷವಿದೆ ಎಂದು ತಿಳಿಸಿದ್ದಾರೆ,
ಇನ್ನು ಟಾಲಿವುಡ್ ಗೂ ನಟಿ ಸಂಪದ ಅವರು ಪಾದಾರ್ಪಣೆ ಮಾಡುತ್ತಿದ್ದು, ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ನಿರ್ಮಿಸಿದ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ನನ್ನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕೆಲವು ಭಾಗಗಳ ಚಿತ್ರಕರಣ ಬಾಕಿಯಿದ್ದು, ಅದೂ ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಈ ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ಕೂಡ ಅದ್ಭುತವಾಗಿದೆ ಎಂದು ಹೇಳಿದ್ದಾರೆ.
ಎಕ್ಕ ಚಿತ್ರ ಯುವ ರಾಜ್‌ಕುಮಾರ್ ಅವರು ನಟಿಸುತ್ತಿರುವ ಎರಡನೇ ಚಿತ್ರವಾಗಿದ್ದು, ಮೂರು ದಿಗ್ಗದ ಸಿನಿಮಾ ನಿರ್ಮಾಣ ಸಂಸ್ಧೆಗಳು ಚಿತ್ರ ನಿರ್ಮಿಸುತ್ತಿದೆ. ಇಂದು ಚಿತ್ರದ ಮುಹೂರ್ತ ನಡೆಯುತ್ತಿದ್ದು, ಮುಂದಿನ ತಿಂಗಳಲ್ಲಿ ನಟಿ ಸಂಪದ ಅವರು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ಸಂಪದ ಜೊತೆಗೆ, ಚಿತ್ರದಲ್ಲಿ ಅತುಲ್ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ, ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನವಿದ್ದು ಚಿತ್ರದ ನಿರ್ಮಾಪಕರು 2025 ರ ಮಧ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ, ಚಿತ್ರದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಲಿದೆ.
Advertisement