
ಬೆಂಗಳೂರು: ಮಹಿಳೆಯರನ್ನು ನಿಂದಿಸಿದ ಕಾರಣಕ್ಕೆ ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಯಿಂದ ಗೇಟ್ ಪಾಸ್ ಪಡೆದಿರುವ ವಕೀಲ ಕೆ.ಎನ್ ಜಗದೀಶ್ ಕುಮಾರ್, ನಟ ಸುದೀಪ್ ಹಾಗೂ ಇತರ ಸ್ಪರ್ಧಿಗಳ ಕ್ಷಮೆ ಕೋರಿದ್ದಾರೆ.
ಕೆಲ ಮಾಧ್ಯಮಗಳಿಗೆ ಸಂದೇಶ ರವಾನಿಸಿರುವ ಜಗದೀಶ್, ‘ನೂರಾರು ಕ್ಯಾಮೆರಾ, ಸಾವಿರಾರು ಬಿಗ್ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್ ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ ಎಂದಿದ್ದಾರೆ. ನಿಮ್ಮ ಪ್ರತಿ ಒಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್ ಬಾಸ್ ಪಯಣ ಯಶಸ್ಸು, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು’ ಎಂದು ಹೇಳಿದ್ದಾರೆ.
ಸುದೀಪ್ ಸರ್ ನನ್ನನ್ನು ಕ್ಷಮಿಸಿ. ನನ್ನ ಕ್ಷಮಾಪಣೆ ಸ್ವೀಕರಿಸಿ. ನಿಮ್ಮ ಮೇಲೆ ನನಗೆ ಪ್ರೀತಿ, ಗೌರವ ಇದೆ. ನಿಮ್ಮ ಸಲಹೆಯಿಂದ ನಾನು ತುಂಬಾ ಕಲಿತೆ. ನೀವು ನನಗೆ ಶಿಕ್ಷಕರ ಸಮಾನ. ನಾನು ಸುದೀಪ್ ಅವರಿಗೆ, ಬಿಗ್ ಬಾಸ್ ತಂಡಕ್ಕೆ ಆಭಾರಿಯಾಗಿರುವೆ’. ಬೆಳಿಗ್ಗೆ ಎದ್ದೇಳಲು ಹಾಕುವ ಹಾಡನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐಶ್ವರ್ಯಾ ಅವರು ನನ್ನನ್ನು ಕುಣಿಯವಂತೆ ಮಾಡಿದರು. ಅವರಿಗೆ ಧನ್ಯವಾದಗಳು. ರಂಜಿತ್, ಮಾನಸ ಹಾಗೂ ಅಲ್ಲಿರುವ ಎಲ್ಲರೂ ಸಣ್ಣ ವಯಸ್ಸಿನಲ್ಲೇ ಅದ್ಭುತ ಕಲಾವಿದರು ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ನಾನು ಎಲ್ಲರೊಳಗೊಬ್ಬನಾಗಲು ಪ್ರಯತ್ನಪಟ್ಟೆ. ನಗಲು ಪ್ರಯತ್ನ ಪಟ್ಟೆ. ಈ ನಿಟ್ಟಿನಲ್ಲಿ ನನ್ನಿಂದ ಕೆಲವು ತಪ್ಪುಗಳಾಗಿವೆ. ಯಾವುದು ವೈಯಕ್ತಿಕವಲ್ಲ. ಅದು ಮನೋರಂಜನೆಯ ಒಂದು ಭಾಗವಾಗಿತ್ತಷ್ಟೇ ಎಂದು ಸಂದೇಶದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
Advertisement