
ವಿಜಯ್ ಕುಮಾರ್ ನಿರ್ದೇಶನದ ಭೀಮಾ ಚಿತ್ರದಲ್ಲಿ ಗಿರಿಜಾ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಗಮನ ಸೆಳೆದಿದ್ದ ಪ್ರಿಯಾ ಶಟಮರ್ಧನ್ ಕಸ್ಟಡಿ ಎಂಬ ಸಿನಿಮಾದಲ್ಲಿ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ.
ನಾಗೇಶ್ ಕುಮಾರ್ ಯುಎಸ್ ನಿರ್ಮಿಸುತ್ತರುವ ಕಸ್ಟಡಿ ಸಿನಿಮಾವನ್ನು ಜೆಜೆ ಶ್ರೀನಿವಾಸ ನಿರ್ದೇಶಿಸಿದ್ದಾರೆ, ಕಸ್ಟಡಿ ಕಥೆ ಸೈಬರ್ ಕ್ರೈಮ್ ಕುರಿತ ಸಿನಿಮಾವಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ನಿರ್ಮಾಣ ತಂಡವು ಯೋಜನೆಯ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದೆ. ಗಜಾನನ ಮತ್ತು ಗ್ಯಾಂಗ್ ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದೇನೆ ಮತ್ತು ಕಸ್ಟಡಿ ನನ್ನ ಐದನೆಯದು ಎಂದು ನಾಗೇಶ್ ಕುಮಾರ್ ಹೇಳಿದರು. "ನನ್ನ ಸ್ನೇಹಿತ ಜೆಜೆ ಶ್ರೀನಿವಾಸ ಅವರು ಕಥೆಯನ್ನು ಹಂಚಿಕೊಂಡಾಗ, ನಾನು ತಕ್ಷಣ ಪೊಲೀಸ್ ಪಾತ್ರವನ್ನು ಪ್ರಿಯಾ ಅಭಿನಯಿಸಿದ್ದಾರೆ ಉತ್ತಮವಾಗಿರುತ್ತದೆ ಎಂದು ಕೊಂಡೆ. ನಮ್ಮ ಸಿನಿಮಾದಲ್ಲಿ ಪ್ರಿಯಾ ಅಭಿನಯಿಸುತ್ತಿರುವುದು ಥ್ರಿಲ್ ತಂದಿದೆಎಂದಿದ್ದಾರೆ.
ಕಸ್ಟಡಿ ಇಂದಿನ ಸಮಾಜದಲ್ಲಿ ಮೊಬೈಲ್ ಫೋನ್‌ಗಳ ವ್ಯಾಪಕ ಬಳಕೆಯ ಸುತ್ತ ಸುತ್ತುವ ಚಿತ್ರ ಎಂದು ಶ್ರಿನಿವಾಸ್ ತಿಳಿಸಿದ್ದಾರೆ. ಇದು ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಸಮಸ್ಯೆಯಾಗಿದೆ. ಸೈಬರ್ ಕ್ರೈಮ್ ಬಗ್ಗೆ ಅನೇಕ ಕಥೆಗಳು ಬಂದಿದ್ದರೂ ಇದು ನೀಡಲು ವಿಶಿಷ್ಟವಾದ ನಿರೂಪಣೆಯನ್ನು ಹೊಂದಿದೆ" ಎಂದು ಅವರು ವಿವರಿಸಿದರು. ಒಂದು ವರ್ಷದ ಹಿಂದೆ ಕಥೆಯನ್ನು ಅಂತಿಮಗೊಳಿಸಲಾಯಿತು, ಸ್ಕ್ರಿಪ್ಟ್ ಓದಿದ ನಂತರ ಖಡಕ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಪ್ರಿಯಾ ಅವರು ಪರಿಪೂರ್ಣವಾಗಿ ಸರಿಹೊಂದುತ್ತಾರೆ ಎಂದು ನಿರ್ದೇಶಕರು ಭಾವಿಸಿದರು, ಇದಕ್ಕೆ ಎಲ್ಲರೂ ಸಮ್ಮತಿಸಿದರು ಎಂದು ತಿಳಿಸಿದರು.
‘ನನ್ನ ‘ಗಿರಿಜಾ’ ಪಾತ್ರಕ್ಕೆ ಜನ ನೀಡಿದ ಪ್ರೀತಿಗೆ ಆಭಾರಿ. ಈ ಚಿತ್ರದಲ್ಲೂ ನಾನು ಖಡಕ್ ಪೊಲೀಸ್ ಅಧಿಕಾರಿ. ‘ದುರ್ಗಾಪರಮೇಶ್ವರಿ’ ನನ್ನ ಪಾತ್ರದ ಹೆಸರು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥೆಯನ್ನು ನಿರ್ದೇಶಕರು ಹೆಣೆದಿದ್ದಾರೆ. ನಾನು ಈ ಚಿತ್ರ ಒಪ್ಪಿಕೊಳ್ಳಲು ಪ್ರಮುಖ ಕಾರಣ ಇದುವೇ’ ಎಂದರು ಪ್ರಿಯಾ. ಚಿತ್ರದಲ್ಲಿ ಸುಧಿ ಮತ್ತು ಇತರರು ನಟಿಸಿದ್ದಾರೆ ಮತ್ತು ಅದರ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ.
Advertisement