Love Reddy Movie: ಕನ್ನಡದ ನಟನ ಮೇಲೆ ಥಿಯೇಟರ್ ನಲ್ಲೇ ಮಹಿಳೆಯಿಂದ ಹಲ್ಲೆ, Video Viral

ತೆಲುಗಿನ ಲವ್ ರೆಡ್ಡಿ ಸಿನಿಮಾದಲ್ಲಿ ಅಭಿನಯ ಮಾಡಿದ್ದ ಕನ್ನಡದ ನಟರೊಬ್ಬರ ಮೇಲೆ ಪ್ರೇಕ್ಷಕಿರೊಬ್ಬರು ಹಲ್ಲೆ ನಡೆಸಿದ ಘಟನೆ ಹೈದಾರಾಬಾದ್ ನ ನಿಜಾಂಪೇಟ್‌ನಲ್ಲಿರುವ ಜಿಪಿಆರ್ ಮಾಲ್‌ನಲ್ಲಿ ನಡೆದಿದೆ.
Woman attack on Kannada Actor In Hyderabad GPR Mall
ನಟ ಎನ್ ಟಿ ರಾಮಸ್ವಾಮಿ ಮೇಲೆ ಮಹಿಳೆ ಹಲ್ಲೆ
Updated on

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನ ಮಾಲ್ ವೊಂದರಲ್ಲಿ ಕನ್ನಡದ ನಟನ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ತೆಲುಗಿನ ಲವ್ ರೆಡ್ಡಿ ಸಿನಿಮಾದಲ್ಲಿ ಅಭಿನಯ ಮಾಡಿದ್ದ ನಟರೊಬ್ಬರ ಮೇಲೆ ಪ್ರೇಕ್ಷಕಿರೊಬ್ಬರು ಹಲ್ಲೆ ನಡೆಸಿದ ಘಟನೆ ಹೈದಾರಾಬಾದ್ ನ ನಿಜಾಂಪೇಟ್‌ನಲ್ಲಿರುವ ಜಿಪಿಆರ್ ಮಾಲ್‌ನಲ್ಲಿ ನಡೆದಿದೆ.

ಮಾಲ್‌ನಲ್ಲಿ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ಸೀನ್​ ನೋಡಿದ ನಂತರ ಕೆಲ ವೀಕ್ಷಕರು ಭಾವುಕರಾಗಿದ್ದು, ಇದೇ ವೇಳೆ ಸಿನಿಮಾ ತಂಡ ವೇದಿಕೆ ಮೇಲೆ ಹತ್ತಿದೆ. ಈ ವೇಳೆ ಚಿತ್ರದಲ್ಲಿ ಅಭಿನಯಿಸಿದ್ದ ಕನ್ನಡದ ನಟ ಎನ್‌ಟಿ ರಾಮಸ್ವಾಮಿ ಅವರ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ.

ಇದೇ ಸಿನಿಮಾದಲ್ಲಿ ನಟ ಎನ್‌ಟಿ ರಾಮಸ್ವಾಮಿ ಅವರು ತಂದೆ ಪಾತ್ರದಲ್ಲಿ ಅಭಿನಯ ಮಾಡಿದ್ದು, ಸಿನಿಮಾದಲ್ಲಿ ಪ್ರೇಮಿಗಳನ್ನು ದೂರ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಕೋಪಗೊಂಡು ಎನ್‌ಟಿ ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಲವ್ ರೆಡ್ಡಿಗೆ ಉತ್ತಮ ಪ್ರತಿಕ್ರಿಯೆ

ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ಲವ್ ರೆಡ್ಡಿ ಸಿನಿಮಾಕ್ಕೆ ಪ್ರೇಕ್ಷಕರಿಂದ ಅನಿರೀಕ್ಷಿತ ಪ್ರತಿಕ್ರಿಯೆ ಪಡೆಯುತ್ತಿದೆ. ನಗರದ ಜಿಪಿಆರ್ ಮಾಲ್‌ನಲ್ಲಿ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ಸೀನ್​ ನೋಡಿದ ನಂತರ ಕೆಲ ವೀಕ್ಷಕರು ಭಾವುಕರಾಗಿದ್ದರು. ಸಿನಿಮಾ ಮುಗಿಯುತ್ತಿದ್ದಂತೆ ಮಾಲ್​ನಲ್ಲಿನ ಥಿಯೇಟರ್​ನ ವೇದಿಕೆ ಮೇಲೆ ಲವ್ ರೆಡ್ಡಿ ಸಿನಿಮಾ ತಂಡ ಆಗಮಿಸಿತ್ತು.

ಅಭಿಮಾನಿಗಳಿಗೆಲ್ಲ ಸಿನಿಮಾ ಇಷ್ಟ ಆಯಿತಾ ಎಂದು ಕೇಳುತ್ತಿದ್ದರು. ಆದರೆ ಇದೇ ವೇಳೆ ಸಿನಿಮಾ ನೋಡಿ ಭಾವುಕರಾಗಿದ್ದ ಮಹಿಳಾ ಪ್ರೇಕ್ಷಕಿ ಓಡೋಡಿ ಬಂದು ಎನ್‌ಟಿ ರಾಮಸ್ವಾಮಿಯ ಎದೆ ಮೇಲಿನ ಶರ್ಟ್ ಹಿಡಿದು 4 ಏಟು ಹಾಕಿದ್ದಾರೆ. ತಕ್ಷಣವೇ ಪಕ್ಕದಲ್ಲಿದ್ದ ನಟ ಅಂಜನ್ ರಾಮಚಂದ್ರ, ನಟಿ ಶ್ರಾವಣಿ, ನಿರ್ದೇಶಕ ಸ್ಮರಣ್ ರೆಡ್ಡಿ ಅವರು ಮಧ್ಯೆ ಪ್ರವೇಶಿಸಿ ಮಹಿಳೆ ಹಲ್ಲೆ ಮಾಡುವುದನ್ನ ತಡೆದಿದ್ದಾರೆ.

ಬಳಿಕ ಆಕೆಯನ್ನ ಸಮಾಧಾನ ಪಡಿಸಿ ಅದು ಸಿನಿಮಾದಲ್ಲಿ ನಟಿಸಿದ್ದು, ನಿಜ ಜೀವನದಲ್ಲಿ ಅವರು ಕೆಟ್ಟವರಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಅಂದಹಾಗೆ ಇದೇ ತಿಂಗಳ 18ರಂದು ಬಿಡುಗಡೆಯಾದ ಲವ್ ರೆಡ್ಡಿ ಮೂವಿಯಲ್ಲಿ ನಟ ಅಂಜನ್ ರಾಮಚಂದ್ರ ಹಾಗೂ ಶ್ರಾವಣಿ ಜೋಡಿಯಾಗಿ ನಟಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com