
ನಟ ಪ್ರಭು ಮುಂಡ್ಕರ್ ನಟನೆಯ ಮರ್ಫಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅಕ್ಟೋಬರ್ 18ಕ್ಕೆ ಚಿತ್ರ ತೆರೆಗೆ ಬರುತ್ತಿದೆ.
ಚಿತ್ರದ ಶೂಟಿಂಗ್ ಮುಗಿಸಿರುವ ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಿತ್ರ ತಂಡ, ಮರ್ಫಿ ಚಿತ್ರದ ಡ್ಯಾನ್ಸಿಂಗ್ ನಂಬರ್ ಹಾಡನ್ನು ಅನಾವರಣಗೊಳಿಸಿದೆ.
ಮೊಗಾಚಿ ಎಂಬ ಹಾಡಿಗೆ ಧನಂಜಯ್ ರಂಜನ್ ಪದಗೀಚಿದ್ದು, ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ. ಗೋವಾದ ಪೋರ್ಚುಗೀಸ್ ಮತ್ತು ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸಿರುವ ಹಾಡಿಗೆ ರಜತ್ ಹೆಗ್ಡೆ ಮತ್ತು ನಾಡಿಯಾ ರೆಬೆಲೊ ಧ್ವನಿಯಾಗಿದ್ದಾರೆ. ಮಾಧುರಿ ಪರಶುರಾಮ್ ನೃತ್ಯ ಸಂಯೋಜನೆ ಹಾಡಿನ ತೂಕ ಹೆಚ್ಚಿಸಿದೆ.
400 ವರ್ಷಗಳಷ್ಟು ಹಳೆಯದಾದ ಗೋವಾದ ಬಂಗಲೆಯ ಹಿನ್ನೆಲೆಯಲ್ಲಿ ನಿರ್ಮಿಸಲಾದ ಈ ಹಾಡು ಗೋವಾದ ಜೀವನದ ಸಾರವನ್ನು ಬಿಂಬಿಸುತ್ತಿದೆ.
ರೊಮ್ಯಾಂಟಿಕ್ ಡ್ರಾಮಾ ಎಳೆಯ ಸಿನಿಮಾದಲ್ಲಿ ದೊಡ್ಡ ತಾರಾಬಳಗ ಇದೆ. ಪ್ರಭು ಮುಂಡ್ಕುರ್ ಜೊತೆ ರೋಶಿನಿ ಪ್ರಕಾಶ್, ಇಳಾ ವೀರಮಲ್ಲ ಹಾಗೂ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ಅಡಿ ಮರ್ಫಿ ಸಿನಿಮಾವನ್ನು ರಾಮ್ ಕೋ ಸೋಮಣ್ಣ ಹಾಗೂ ಬಿಎಸ್‌ಪಿ ವರ್ಮಾ ನಿರ್ಮಾಣ ಮಾಡಿದ್ದಾರೆ. ಸೆನ್ಸಾರ್ ಪರೀಕ್ಷೆಯಲ್ಲಿ ಯು ಸರ್ಟಿಫಿಕೇಟ್ನೊಂದಿಗೆ ಸಿನಿಮಾ ಪಾಸಾಗಿದೆ. ಸಿನಿಮಾದಲ್ಲಿ ಎಂಟರ್ಟೈನ್ಮೆಂಟ್ ಜೊತೆ ಜೊತೆಗೆ ಎಮೋಷನಲ್ ಅಂಶಗಳನ್ನೂ ಸಹ ಅಚ್ಚುಕಟ್ಟಾಗಿ ಕಟ್ಟಿ ಕೊಡಲಾಗಿದ್ದು, ಮನೆಮಂದಿ ಕುಳಿತು ನೋಡುವಂತಹ ಸಿನಿಮಾ ಎನ್ನುವುದು ಚಿತ್ರತಂಡದ ಅಭಿಪ್ರಾಯ.
Advertisement