ದಕ್ಷಿಣ ಭಾರತದ ಬಿಗ್‌ ಬ್ಯಾನರ್ 'ಲೈಕಾ ಪ್ರೊಡಕ್ಷನ್ಸ್​' ಜೊತೆ ಸಮರ್ಜಿತ್ ಸಿನಿಮಾ?

ಗೌರಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಸಮರ್ಜಿತ್ ಅವರಿಗೆ ಬಾಲಿವುಡ್ ಅಷ್ಟೇ ಅಲ್ಲದೆ, ಪಕ್ಕದ ತೆಲುಗು ಮತ್ತು ತಮಿಳು ಚಿತ್ರರಂಗದಿಂದಲೂ ಆಫರ್‌ಗಳು ಬರುತ್ತಿದ್ದು, ಪರಭಾಷೆಯ ಕಡೆ ಸಮರ್ಜಿತ್ ಗಮನ ಹರಿಸುತ್ತಿದ್ದಾರೆ.
ಸಮರ್ಜಿತ್ ಲಂಕೇಶ್
ಸಮರ್ಜಿತ್ ಲಂಕೇಶ್
Updated on

ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಜೊತೆಗೆ ಇಂದ್ರಜಿತ್‌ ಲಂಕೇಶ್‌ ಪುತ್ರ ಸಮರ್ಜಿತ್ ಲಂಕೇಶ್ ಅವರು ಕೈಜೋಡಿಸಿದ್ದಾರೆಂದು ತಿಳಿದುಬಂದಿದೆ.

ಗೌರಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಸಮರ್ಜಿತ್ ಅವರಿಗೆ ಬಾಲಿವುಡ್ ಮಾತ್ರವಲ್ಲ ಪಕ್ಕದ ತೆಲುಗು ಮತ್ತು ತಮಿಳಿನಿಂದನೂ ಆಫರ್‌ಗಳು ಬರುತ್ತಿದ್ದು, ಪರಭಾಷೆಯ ಕಡೆ ಸಮರ್ಜಿತ್ ಗಮನ ಹರಿಸುತ್ತಿರುವುದಾಗಿ ತಿಳಿದುಬಂದಿದೆ.

ತಮಿಳಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

‘ಗೌರಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಇತ್ತೀಚೆಗೆ ಸಮರ್ಜಿತ್ ಅವರಿಗೆ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ನೀಡಲಾಗಿದೆ. ಈ ಪ್ರಶಸ್ತಿ ಪಡೆದ ಖುಷಿಯಲ್ಲಿರುವ ಸಮರ್ಜಿತ್ ಅವರಿಗೆ ಹಿಂದಿ ಮಾತ್ರವಲ್ಲದೇ ತೆಲುಗು ಹಾಗೂ ತಮಿಳಿನಿಂದನೂ ಅವರಿಗೆ ಅವಕಾಶಗಳು ಸಿಗುತ್ತಿವೆ ಎನ್ನಲಾಗಿದೆ. ಈಗಾಗಲೇ ಸಮರ್ಜಿತ್ ಅವರು ಎರಡು ಚಿತ್ರಗಳಿಗೆ ಸಹಿ ಮಾಡಿದ್ದು, ಸಿನಿಮಾ ಕುರಿತು ಶೀಘ್ರದಲ್ಲೇ ಚಿತ್ರ ನಿರ್ಮಾಣ ಸಂಸ್ಥೆ ಘೋಷಣೆ ಮಾಡಲಿದೆ.

ಸಮರ್ಜಿತ್ ಲಂಕೇಶ್
'ಗೌರಿ' ಚಿತ್ರದ ಸಂಗೀತ, ನೃತ್ಯ ಯುವಜನತೆಯ ಮನ ಸೆಳೆದಿದೆ: ಸಮರ್ಜಿತ್ ಲಂಕೇಶ್

ಲೈಕಾ ಸಂಸ್ಥೆ ಈಗಾಗಲೇ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದೆ. ಆ ಸಿನಿಮಾ ಪೂರ್ಣಗೊಳ್ಳುವ ಮೊದಲೇ ಕನ್ನಡದ ಮತ್ತೊಬ್ಬ ನಟ ಸಮರ್ಜಿತ್‌ ಜೊತೆಗೆ ಸಿನಿಮಾ ಮಾಡಲು ಲೈಕಾ ನಿರ್ಧರಿಸಿದ್ದು ಸಿನಿಮಾ ಮಾತುಕತೆ ಹಂತದಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ನಡುವೆ ಬಾಲಿವುಡ್‌ ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್‌ನಿಂದಲೂ ಸರ್ಮಜಿತ್‌ ಅವರಿಗೆ ಕರೆ ಬಂದಿದ್ದು, ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಕುರಿತು ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ.

ಕರಣ್ ಜೊಹರ್ ಸಂಸ್ಥೆಯ ಜೊತೆ ಸಮರ್ಜಿತ್ ಮಾತುಕತೆ ನಡೆಸಿದ್ದು, ಹಿಂದಿಯಲ್ಲಿ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕರಣ್ ಜೋಹರ್ ಅವರು ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಒಂದು ವೇಳೆ, ಸಮರ್ಜಿತ್ ನಟನೆಯ ಸಿನಿಮಾಗೆ ಅವರು ಬಂಡವಾಳ ಹೂಡಿದ್ಜೇ ಆದರೆ, ಇದೇ ಮೊದಲ ಬಾರಿಗೆ ಅವರು ಕನ್ನಡದ ನಟನ ಸಿನಿಮಾವನ್ನು ನಿರ್ಮಾಣ ಮಾಡಿದಂತಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com