ನೀಲಿ ಚಿತ್ರನಟಿ ರಿಯಾ ಬಾರ್ಡೆ, ಆರೋಹಿ ಬರ್ಡೆ ಮತ್ತು ಬನ್ನಾ ಶೇಖ್ ಎಂಬ ಅಲಿಯಾಸ್‌ಗಳಿಂದ ಗುರುತಿಸಿಕೊಂಡಿದ್ದ ಬಾಂಗ್ಲಾದೇಶದ ರಿಯಾ ಬಾರ್ಡೆಯನ್ನು (Riya Barde) ಮುಂಬೈ ಪೊಲೀಸರು ಬಂಧಿಸಿದ್ದಾರೆ.
ರಿಯಾ ಬಾಂಗ್ಲಾದೇಶದ ಪ್ರಜೆಯಾಗಿದ್ದು, ನಕಲಿ ದಾಖಲೆಗಳನ್ನು ಬಳಸಿಕೊಂಡು ತನ್ನ ಕುಟುಂಬದೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಳು ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬ ಸದಸ್ಯರಿಗೂ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
Adult actress ರಿಯಾ ಬಾರ್ಡೆ ಅಕ್ರಮವಾಗಿ ಭಾರತದಲ್ಲಿದ್ದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಪೋರ್ನ್ ಸ್ಟಾರ್ ವಿರುದ್ಧ ಹೊರಿಸಲಾದ ಆರೋಪಗಳ ಪ್ರಕಾರ, ಅವಳು ಬಾಂಗ್ಲಾದೇಶದ ನಿವಾಸಿಯಾಗಿದ್ದು, ನಕಲಿ ದಾಖಲೆಗಳ ಆಧಾರದ ಮೇಲೆ ತನ್ನ ಕುಟುಂಬದೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಳು. ಈ ಪ್ರಕರಣದಲ್ಲಿ ಆಕೆಯ ತಾಯಿ, ಸಹೋದರಿ, ಸಹೋದರ ಮತ್ತು ತಂದೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನೀಲಿ ಚಿತ್ರೋಧ್ಯಮದಲ್ಲಿ ಆರೋಹಿ ಬರ್ಡೆ ಮತ್ತು ಬನ್ನಾ ಶೇಖ್ ಎಂದು ಜನಪ್ರಿಯರಾಗಿರುವ ರಿಯಾ ಬರ್ಡೆ ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420, 465, 468, 479, 34 ಮತ್ತು 14 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಿಯಾಳ ಸ್ನೇಹಿತ ಪ್ರಶಾಂತ್ ಮಿಶ್ರಾ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ನಂತರ ಪೊಲೀಸರು ನಟಿಯ ದಾಖಲೆಗಳನ್ನು ಪರಿಶೀಲಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ಪ್ರಶಾಂತ್ ಮಿಶ್ರಾ, ರಿಯಾ ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು.
ಮಾಹಿತಿಯ ಪ್ರಕಾರ, ರಿಯಾ ಬರ್ಡೆ ಅವರ ತಾಯಿ ಮೂಲತಃ ಬಾಂಗ್ಲಾದೇಶದವರು, ಆದರೆ ಅವರು ಮಹಾರಾಷ್ಟ್ರದ ಅಮರಾವತಿಯ ನಿವಾಸಿಯಾಗಿದ್ದ ಅರವಿಂದ್ ಬಾರ್ಡೆ (ರಿಯಾಳ ತಂದೆ) ಅವರನ್ನು ವಿವಾಹವಾಗಿದ್ದರು. ತರುವಾಯ, ಆತ ತನ್ನ ಪತ್ನಿಯ ರಾಷ್ಟ್ರೀಯತೆಯನ್ನು ಭಾರತೀಯ ಎಂದು ಸಾಬೀತುಪಡಿಸಲು ನಕಲಿ ದಾಖಲೆಗಳನ್ನು ಒದಗಿಸಿದನು. ಇನ್ನು ರಿಯಾ ಕುಟುಂಬದ ಸದಸ್ಯರನ್ನು ಅಂಜಲಿ ಬರ್ಡೆ ಅಲಿಯಾಸ್ ರೂಬಿ ಶೇಖ್ (ತಾಯಿ), ಅರವಿಂದ್ ಬಾರ್ಡೆ (ತಂದೆ), ರವೀಂದ್ರ ಅಲಿಯಾಸ್ ರಿಯಾಜ್ ಶೇಖ್ (ಸಹೋದರ) ಮತ್ತು ರಿತು ಅಲಿಯಾಸ್ ಮೋನಿ ಶೇಖ್ (ಸಹೋದರಿ) ಎಂದು ಗುರುತಿಸಲಾಗಿದೆ. ಅವರ ಪೋಷಕರು ಪ್ರಸ್ತುತ ಕತಾರ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ವೇಶ್ಯಾವಾಟಿಕೆ ಸಂಬಂಧಿತ ಪ್ರಕರಣದಲ್ಲಿ ರಿಯಾ ಬಾರ್ಡೆ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Advertisement