ರಾಜವರ್ಧನ್ ನಟನೆಯ 'ಪ್ರಣಯಂ' ರಿಲೀಸ್ ಡೇಟ್ ಫಿಕ್ಸ್!

ಪಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ  ಚಿತ್ರಗಳನ್ನು ನೀಡಿದ  ಪರಮೇಶ್ ಅವರೀಗ ಮತ್ತೊಂದು ಲವ್ ಸ್ಟೋರಿಯನ್ನು ಪ್ರಣಯಂ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲಿದ್ದಾರೆ.  ಫೆಬ್ರವರಿ 9 ರಂದು ಪ್ರಣಯಂ ಸಿನಿಮಾ ರಿಲೀಸ್ ಆಗಲಿದೆ.
ಪ್ರಣಯಂ ಸಿನಿಮಾ ಸ್ಟಿಲ್
ಪ್ರಣಯಂ ಸಿನಿಮಾ ಸ್ಟಿಲ್
Updated on

ಪಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ  ಚಿತ್ರಗಳನ್ನು ನೀಡಿದ  ಪರಮೇಶ್ ಅವರೀಗ ಮತ್ತೊಂದು ಲವ್ ಸ್ಟೋರಿಯನ್ನು ಪ್ರಣಯಂ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲಿದ್ದಾರೆ. ಫೆಬ್ರವರಿ 9 ರಂದು ಪ್ರಣಯಂ ಸಿನಿಮಾ ರಿಲೀಸ್ ಆಗಲಿದೆ.

ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ  ಈ ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಿಚ್ಚುಗತ್ತಿ ಖ್ಯಾತಿಯ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ  ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್  ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಾಜಿ ಉಪ ಮೇಯರ್ ಮೋಹನ್ ರಾಜು ಟ್ರೈಲರ್ ರಿಲೀಸ್ ಮಾಡಿದರು.

ಈ ಚಿತ್ರದಲ್ಲಿ  ಜಯಂತ್ ಕಾಯ್ಕಿಣಿ ಅವರು 3 ಹಾಡುಗಳನ್ನು ಬರೆದಿದ್ದು, ಮನೋಮೂರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಶ್ ಆಚಾರ್ಯ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಮನೋಮೂರ್ತಿ ಚಿತ್ರದಲ್ಲಿ 5 ಹಾಡಿದ್ದು, ಕ್ಯಾಮೆರಾ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಪ್ರಣಯಂ ಅಂದ್ರೆ ಲವ್, ಅದನ್ನಿಲ್ಲಿ  ಢಿಫರೆಂಟಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಣಯಂ ಒಂದು ವಿಶಿಷ್ಟವಾದ ಪ್ರೇಮಕಥೆಯಾಗಿದೆ, ಸಾಮಾನ್ಯವಾಗಿ ಕುಟುಂಬದಲ್ಲಿ ನಡೆಯುವ ನೈಜ ಘಟನೆಗಳಿಂದ ಚಿತ್ರವು ಸ್ಫೂರ್ತಿ ಪಡೆದಿದೆ ಎಂದು ನಿರ್ಮಾಪಕ ಪರಮೇಶ ತಿಳಿಸಿದ್ದಾರೆ. ಮನೋ ಮೂರ್ತಿ ಮತ್ತು ಜಯಂತ್ ಕಾಯ್ಕಿಣಿ ಅವರಂತಹ ದಂತಕಥೆಗಳೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದ ಅವರು, ಅವರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಬಿಡುಗಡೆ ತಡವಾಗುತ್ತಿದ್ದರೂ ಪರಮೇಶ ಚಿತ್ರದ ಯಶಸ್ಸಿನ ವಿಶ್ವಾಸದಲ್ಲಿದ್ದಾರೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಾಯಕ ನಟ ರಾಜವರ್ದನ್, ಪ್ರಣಯಂ ಬಗ್ಗೆ ತಮ್ಮ ಕುತೂಹಲ ತಿಳಿಸಿದ್ದಾರೆ. ತನಗೆ ಸವಾಲಿನ ಪಾತ್ರವನ್ನು ನೀಡಿದ್ದಕ್ಕಾಗಿ ಅವರು ನಿರ್ಮಾಪಕರಿಗೆ ಧನ್ಯವಾದ ಹೇಳಿದರು. ಚಿಕ್ಕಮಗಳೂರು ಮತ್ತು ಮಡಿಕೇರಿಯಂತಹ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಈ ಚಿತ್ರದ ಮೂಲಕ ಬಾಲಿವುಡ್ ನಟಿ ನೈನಾ ಗಂಗೂಲಿ  ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಗೋವಿಂದೇಗೌಡ, ಮಂಥನ್, ಪ್ರಶಾಂತ್, ಸಮೀಕ್ಷಾ ಮತ್ತು ಪ್ರಿಯಾ ತರುಣ್ ಇದ್ದಾರೆ. ಮದನ್ ಹರಿಣಿ ನೃತ್ಯ ಸಂಯೋಜನೆಯನ್ನು ನಿಭಾಯಿಸಿದರೆ, ಫೈಟ್‌ಗಳನ್ನು ಥ್ರಿಲ್ಲರ್ ಮಂಜು ಮತ್ತು ಮಾಸ್ ಮಾದ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com