
ಅಭಿಮಾನಿಯ ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ವಿಡಿಯೋ ಮೂಲಕ ನಟ ಸುದೀಪ್ ಮನವಿ ಮಾಡಿದ್ದಾರೆ. ಕಿಚ್ಚ ಸುದೀಪ್ ಫ್ಯಾನ್ ಪೇಜ್ನಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ನಟನ ಹೃದಯ ಕಂದಮ್ಮನಿಗಾಗಿ ಮಿಡಿದಿರುವುದನ್ನು ಕಾಣಬಹುದು.
ಕೀರ್ತನ ಎಂಬ ಮುಗ್ಧ ಮಗು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ 16 ಕೋಟಿ ರೂ. ಖರ್ಚಾಗಲಿದೆ. ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನೀವೂ ಸಹಾಯ ಮಾಡಿ ಎಂದು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ವಿಡಿಯೋ ನೋಡುತ್ತಿರುವ ಎಲ್ಲರಿಗೂ ಕಿಚ್ಚನ ನಮಸ್ತೇ. ಈ ವಿಡಿಯೋ ಮಾಡೋಕೆ ಒಂದು ಮುಖ್ಯವಾದ ಕಾರಣ ಇದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡ್ತಾ ಇದ್ದ ಕಿಶೋರ್ ಮತ್ತು ಅವರ ಪತ್ನಿ ನಾಗಶ್ರೀ ದಂಪತಿಗೆ 1 ವರ್ಷ 10 ತಿಂಗಳ ಕಿರಿಯ ಮಗಳು ಇದ್ದಾಳೆ, ಅವಳ ಹೆಸರು ಕೀರ್ತನಾ.
ಆ ಪುಟ್ಟ ಮಗಳಿಗೆ ಸ್ಪೈನ್ ಮ್ಯಾಸ್ಕ್ಯೂಲರ್ ಅಟ್ರೋಫಿ ಎಂಬ ಅಪರೂಪದ ಆರೋಗ್ಯ ಸಮಸ್ಯೆ ಇದೆ. ಬಹಳ ರೇರ್ ಜೆನಟಿಕಲ್ ಡಿಸಾರ್ಡರ್ ಇದು'' ಎಂದು ಮಗುವಿನ ಅನಾರೋಗ್ಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದಕ್ಕೊಂದು ಔಷಧಿ ಇದೆ. ಗುಣ ಆಗೋವಂತಹ ಸಾಧ್ಯತೆಗಳಿವೆ. ಆದ್ರೆ ಆ ಒಂದು ಮೆಡಿಕಲ್ ಟ್ರೀಟ್ಮೆಂಟ್ಗೆ ಬೇಕಾದಂತಹ ಒಂದು ಮೊತ್ತ ಕೇಳಿದ್ರೆ ಮೈಜುಂ ಅನಿಸುತ್ತದೆ. ಈ ಚಿಕಿತ್ಸೆಗೆ ಬೇಕಾಗಿರೋದು 16 ಕೋಟಿ ರೂಪಾಯಿ. ತಂದೆ ತಾಯಿ ಎಲ್ಲದನ್ನೂ ಬಿಟ್ಟು, ಅವರ ಆಸ್ತಿಯನ್ನೂ ಮಾರಿ, ಎಲ್ಲವನ್ನೂ ಮಾಡಿ ಈ ಮಗುವನ್ನು ಉಳಿಸಿಕೊಳ್ಳೋ ಪ್ರಯತ್ನದಲ್ಲಿದ್ದಾರೆ.
ಸಾಕಷ್ಟು ಜನ ಇದಕ್ಕೆ ಕೈಜೊಡಿಸಿದ್ದಾರೆ. ಸಾಕಷ್ಟು ಜನ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನನ್ನ ಕೈಲಾದಷ್ಟು, ನಾನೇನು ಮಾಡಬಲ್ಲೆ ಅದನ್ನು ಮಾಡಿದ್ದೇನೆ. ನಾನು ಈ ವಿಡಿಯೋ ಮಾಡಲು ಮುಖ್ಯ ಕಾರಣ ಅಷ್ಟೇನೆ. ಒಂದೇ ಒಂದು ರಿಕ್ವೆಸ್ಟ್. ಇಲ್ಲಿ ಕ್ಯೂಆರ್ ಕೋಡ್ ಇದೆ. ಇದಕ್ಕೆ ನಿಮ್ಮ ಕೈಯಲ್ಲಿ ಎಷ್ಟು ಸಹಾಯ ಮಾಡಕ್ಕಾಗುತ್ತೋ ಖಂಡಿತಾ ಮಾಡಿ. ಆ ಮಗು, ನಮ್ಮ ಕೀರ್ತನಾಳನ್ನು ಉಳಿಸಿಕೊಳ್ಳೋ ಪ್ರಯತ್ನ ನಾವೆಲ್ಲಾ ಸೇರಿ ಮಾಡೋಡ'' ಎಂದು ತಿಳಿಸಿದ್ದಾರೆ.
Advertisement