
ತಮ್ಮ ಬಹುನಿರೀಕ್ಷಿತ 'ಬಿಲ್ಲ ರಂಗ ಬಾಷಾ (BRB)' ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ಕಿಚ್ಚ ಸುದೀಪ್ ಈಗ ಓವರ್‌ಡ್ರೈವ್ ಮೂಡ್‌ನಲ್ಲಿದ್ದಾರೆ ಎಂದು ತೋರುತ್ತಿದೆ. ತಮ್ಮ ಕೆಲಸದ ವೇಗವನ್ನು ಹೆಚ್ಚಿಸಲು ಬದ್ಧರಾಗಿದ್ದ ನಟ, ಮಾಧ್ಯಮಗಳೊಂದಿಗಿನ ಹಿಂದಿನ ಸಂವಾದದ ಸಮಯದಲ್ಲಿ ಪ್ರತಿ 18 ತಿಂಗಳಿಗೊಮ್ಮೆ ಎರಡು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಆ ಭರವಸೆಯನ್ನು ಉಳಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಈ ಏಪ್ರಿಲ್‌ನಲ್ಲಿ ಅನೂಪ್ ಭಂಡಾರಿ ನಿರ್ದೇಶನದ ಬಿಆರ್‌ಬಿ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆಯಿದ್ದರೂ, ಇದೀಗ ಹಲವಾರು ಸ್ಕ್ರಿಪ್ಟ್‌ಗಳನ್ನು ಕೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ, ನಟ ದಿನಕ್ಕೆ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ನಾಲ್ಕು ದಿನ ಹೊಸ ಸ್ಕ್ರಿಪ್ಟ್‌ಗಳನ್ನು ಕೇಳಲು ಮೀಸಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಕನಿಷ್ಠ ಎರಡು ಮೂರು ಸ್ಕ್ರಿಪ್ಟ್‌ಗಳನ್ನು ಓಕೆ ಮಾಡಲು ಅವರು ಯೋಜಿಸಿದ್ದಾರೆ. ಈ ಪೈಕಿ ಇತ್ತೀಚೆಗಷ್ಟೇ ಬಿಡುಗಡೆಯಾದ ಮ್ಯಾಕ್ಸ್‌ನ ಮುಂದುವರಿದ ಭಾಗವಾಗಿದೆ ಎಂದು ಹೇಳಲಾಗಿದೆ.
2024ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಮ್ಯಾಕ್ಸ್' ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿ ಗಳಿಕೆ ಕಂಡಿದ್ದು, ಈಗ ಚಿತ್ರತಂಡ 2025ರಲ್ಲಿ ಇನ್ನೂ ದೊಡ್ಡ ಚಿತ್ರಗಳಿಗೆ ವೇದಿಕೆ ಕಲ್ಪಿಸಲು ಯೋಜಿಸಿದ್ದಾರೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಚಿತ್ರದ ಮುಂದುವರಿದ ಭಾಗದ ಸುಳಿವು ನೀಡಿದೆ. ಚಿತ್ರತಂಡ ಸದ್ಯ ಕಥೆಯನ್ನು ನಿಲ್ಲಿಸಿದ ಸ್ಥಳದಿಂದ ಹೇಗೆ ಮುಂದುವರಿಸುವುದು ಎಂಬುದರ ಕುರಿತು ಕೆಲಸ ಮಾಡುತ್ತಿದೆ.
ಇದಲ್ಲದೆ, ನಟ ಕನ್ನಡ ಚಿತ್ರರಂಗದ ಕೆಲವು ಉನ್ನತ ನಿರ್ದೇಶಕರು ಮತ್ತು ಕೆಲವು ಹೊಸ ನಿರ್ದೇಶಕರು ಹಾಗೂ ತೆಲುಗು ಚಲನಚಿತ್ರ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ನಿಜವಾಗಿದ್ದರೆ, ಸುದೀಪ್ ಸತತ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, ಅಭಿಮಾನಿಗಳಿಗೆ ಸಂತೋಷದ ಸುದ್ದಿ ಕಾದಿದೆ.
Advertisement