'ಲವ್ ಮಾಕ್ಟೇಲ್' ಖ್ಯಾತಿಯ ಅಭಿಲಾಷ್ ದಳಪತಿ, ರಾಷಿಕಾ ಶೆಟ್ಟಿ ನಟನೆಯ 'ನಿಮ್ದೆ ಕಥೆ' ನಾಳೆ ತೆರೆಗೆ
ರಾಘವೇಂದ್ರ ರಾಜ್ ನಿರ್ದೇಶಿಸಿರುವ ಚೊಚ್ಚಲ ಚಿತ್ರ 'ನಿಮ್ದೇ ಕಥೆ' ಏಪ್ರಿಲ್ 4 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ 'ಲವ್ ಮಾಕ್‌ಟೇಲ್' ಚಿತ್ರದ ಪಾತ್ರಕ್ಕೆ ಹೆಸರುವಾಸಿಯಾದ ಅಭಿಲಾಷ್ ದಳಪತಿ ಮತ್ತು ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಚಿತ್ರದಲ್ಲಿ ನಟಿಸಿದ್ದ ರಾಷಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದು ಹಾಸ್ಯಮಯ, ಭಾವನಾತ್ಮಕ ಹಾಗೂ ಸ್ವಲ್ಪ ಸಸ್ಪೆನ್ಸ್ ಹೊಂದಿರುವ ಚಿತ್ರ. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಇದು ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ.
ಈ ಚಿತ್ರದಲ್ಲಿ ಸಿಹಿ ಕಹಿ ಚಂದ್ರು, 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಖ್ಯಾತಿಯ ಮನೋಹರ್ ಗೌಡ, ಕೆವಿ ಮಂಜಯ್ಯ ಮತ್ತು ಜ್ಯೋತಿ ಮಾರೂರ್ ಮುಂತಾದವರು ನಟಿಸಿದ್ದಾರೆ.
ಶ್ರೀನಿವಾಸ್ ರೆಡ್ಡಿ ಮತ್ತು ಅರವಿಂದ್ ಯುಎಸ್ ನಿರ್ಮಿಸಿರುವ 'ನಿಮ್ದೆ ಕಥೆ' ಚಿತ್ರಕ್ಕೆ ಪ್ರವೀಣ್ ನಿಕೇತನ್ ಅವರ ಸಂಗೀತ ಸಂಯೋಜನೆ, ಪ್ರಶಾಂತ್ ಸಾಗರ್ ಅವರ ಛಾಯಾಗ್ರಹಣ ಮತ್ತು ಸುನಿಲ್ ಎಸ್ ಅವರ ಸಂಕಲನವಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ