
ರೋಹಿತ್ ಕೀರ್ತಿ ನಿರ್ದೇಶನದ ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿ ದೀಪಿಕಾ ದಾಸ್ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾದ '#ಪಾರು ಪಾರ್ವತಿ' ಚಿತ್ರ ಇದೀಗ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ದೀಪಿಕಾ ದಾಸ್ ಹೊರತಾಗಿ, ಚಿತ್ರದ ತಾರಾಗಣದಲ್ಲಿ ಪೂನಂ ಸಿರ್ನಾಯಕ್ ಮತ್ತು ಫವಾಜ್ ಅಶ್ರಫ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದೊಂದು ಪ್ರಯಾಣ ಆಧರಿತ ಚಿತ್ರವಾಗಿದ್ದು, ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಾಖಂಡದಾದ್ಯಂತ ಚಿತ್ರಿಸಲಾಗಿದೆ. #ಪಾರು ಪಾರ್ವತಿ ವಾಸ್ತವ ಮತ್ತು ಭಾವನಾತ್ಮಕ ಪ್ರಯಾಣವನ್ನು ಒಳಗೊಂಡಿದೆ. ವೈವಿಧ್ಯಮಯ ಭೂದೃಶ್ಯಗಳು ಮತ್ತು ಆಂತರಿಕ ರೂಪಾಂತರಗಳನ್ನು ಸೆರೆಹಿಡಿಯುತ್ತದೆ.
ಚಿತ್ರದ ಟ್ರೇಲರ್ ಅನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದ್ದರು. ಜನವರಿ 31ರಂದು ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.
Eighteen Thirty Six Pictures ಬ್ಯಾನರ್ ಅಡಿಯಲ್ಲಿ ಪಿಬಿ ಪ್ರೇಮನಾಥ್ ನಿರ್ಮಿಸಿರುವ ಈ ಚಿತ್ರಕ್ಕೆ ಅಬಿನ್ ರಾಜೇಶ್ ಅವರ ಛಾಯಾಗ್ರಹಣ, ಆರ್. ಹರಿ ಅವರ ಸಂಗೀತ ಮತ್ತು ಸಿಕೆ ಕುಮಾರ್ ಅವರ ಸಂಕಲನವಿದೆ.
Advertisement