ಬಿಗ್ ಬಾಸ್ ಕನ್ನಡ ಖ್ಯಾತಿಯ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ನಟನೆಯ ಜಸ್ಟ್ ಮ್ಯಾರೀಡ್ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಆಗಸ್ಟ್ 22 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಈಗಾಗಲೇ ಹಾಡುಗಳನ್ನು ಬಿಡುಗಡೆ ಮಾಡಿದ್ದು, ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಹಾಡು 'ತಪ್ಪು ಮಾಡೋದು ಸಹಜ' ಅನ್ನು ಬಿಡುಗಡೆ ಮಾಡಿತು.
ಈ ಹಾಡಿಗೆ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಧನಂಜಯ್ ರಂಜನ್ ಅವರ ಸಾಹಿತ್ಯ ಮತ್ತು ಅನನ್ಯ ಭಟ್ ಅವರ ಗಾಯನವಿದೆ. ಇದು ಸಮಕಾಲೀನ ಭಾವನೆಗಳನ್ನು ಕಚ್ಚಾ ಸಾಹಿತ್ಯದೊಂದಿಗೆ ಸಂಯೋಜಿಸುತ್ತದೆ.
ವಿಶೇಷ ಕಾರ್ಯಕ್ರಮದಲ್ಲಿ ಹಾಡನ್ನು ಅನಾವರಣಗೊಳಿಸಿದ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ, ತಂಡಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು ಮತ್ತು ಚಿತ್ರದ ಪ್ರೀತಿ, ಗುರುತು ಮತ್ತು ವೈವಾಹಿಕ ಪರಿವರ್ತನೆಗಳ ಸೂಕ್ಷ್ಮ ಚಿತ್ರಣವನ್ನು ಶ್ಲಾಘಿಸಿದರು.
ಚಿತ್ರಕ್ಕೆ ಸಿಆರ್ ಬಾಬಿ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದ ಸಂಭಾಷಣೆಯನ್ನು ರಘು ನಿಡುವಳ್ಳಿ ಬರೆದಿದ್ದಾರೆ. ಎಬಿಬಿಎಸ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿಆರ್ ಬಾಬಿ ಮತ್ತು ಬಿ ಅಜನೀಶ್ ಲೋಕನಾಥ್ ಚಿತ್ರವನ್ನು ನಿರ್ಮಿಸಿದ್ದಾರೆ. ವಿಕೆ ಫಿಲ್ಮ್ಸ್ ಚಿತ್ರದ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ.
ಜಸ್ಟ್ ಮ್ಯಾರೀಡ್ ಚಿತ್ರದಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್ ಜೊತೆಗೆ ಶ್ರುತಿ ಹರಿಹರನ್, ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಶೃತಿ ಕೃಷ್ಣ, ಅನೂಪ್ ಭಂಡಾರಿ, ರವಿಶಂಕರ್ ಗೌಡ, ರವಿ ಭಟ್, ಶ್ರೀಮನ್, ಸಾಕ್ಷಿ ಅರರ್ವಾಲ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Advertisement