BSP Verma with Vinay Rajkumar- Script Pooja
ವಿನಯ್ ರಾಜ್‌ಕುಮಾರ್ ಜೊತೆಗೆ ಬಿಎಸ್‌ಪಿ ವರ್ಮಾ- ಸ್ಕ್ರಿಪ್ಟ್ ಪೂಜೆ

ವಿನಯ್ ರಾಜ್‌ಕುಮಾರ್‌ ನಟನೆಯ ಹೊಸ ಚಿತ್ರ ಘೋಷಣೆ; ಮರ್ಫಿ ಖ್ಯಾತಿಯ ಬಿಎಸ್‌ಪಿ ವರ್ಮಾ ಆ್ಯಕ್ಷನ್ ಕಟ್!

'ಅದೊಂದಿತ್ತು ಕಾಲ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ವಿನಯ್, ಈಗಾಗಲೇ 'ಗ್ರಾಮಾಯಣ' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ.
Published on

'ಮರ್ಫಿ' ಸಿನಿಮಾ ಖ್ಯಾತಿಯ ನಿರ್ದೇಶಕ ಬಿಎಸ್‌ಪಿ ವರ್ಮಾ ಇದೀಗ ಆ್ಯಕ್ಷನ್-ರಿವೆಂಜ್ ಕಥೆಯೊಂದಿಗೆ ನಿರ್ದೇಶನಕ್ಕೆ ಇಳಿದಿದ್ದು, ಈ ಚಿತ್ರದಲ್ಲಿ ನಟ ವಿನಯ್ ರಾಜ್‌ಕುಮಾರ್ ನಟಿಸಲಿದ್ದಾರೆ. ಅಮೃತ ಸಿನಿ ಕ್ರಾಫ್ಟ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ವಿಜಯ್ ಟಾಟಾ ನಿರ್ಮಿಸುವ ಈ ಯೋಜನೆಗೆ ಚಿತ್ರತಂಡ ಸೋಮವಾರ ಸ್ಕ್ರಿಪ್ಟ್ ಪೂಜೆ ನೆರವೇರಿಸಿದೆ. ಈ ಮೂಲಕ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ದೊರಕಿದೆ.

'ನಾನು ಎಂದಿಗೂ ಮಾಡದ ಒಂದು ವಿಷಯವೆಂದರೆ ಯಾವುದೇ ಒಂದು ಟೆಂಪ್ಲೇಟ್‌ಗೆ ಅಂಟಿಕೊಳ್ಳುವುದು. ಈ ಚಿತ್ರವು ಕಚ್ಚಾ, ಭಾವನಾತ್ಮಕ ಮತ್ತು ಆಳವಾದ ಪ್ರತೀಕಾರದ ಭಾವನೆಯಿಂದ ಕೂಡಿರುತ್ತದೆ. ಕಳೆದ ಕೆಲವು ತಿಂಗಳುಗಳಿಂದ ವಿನಯ್ ಅವರ ಪ್ರಯಾಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಮತ್ತು ನಟನ ಹಿಂದೆಂದೂ ಕಾಣದ ಒಂದು ಮಗ್ಗುಲನ್ನು ತೆರೆ ಮೇಲೆ ತರುವ ಸಮಯ ಬಂದಿದೆ' ಎಂದು ಬಿಎಸ್‌ಪಿ ವರ್ಮಾ ಹೇಳುತ್ತಾರೆ.

ಈಮಧ್ಯೆ, 'ಅದೊಂದಿತ್ತು ಕಾಲ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ವಿನಯ್, ಈಗಾಗಲೇ 'ಗ್ರಾಮಾಯಣ' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ ಮತ್ತು ಸದ್ಯ ನಿರ್ದೇಶಕ ವಿಜಯ್ ಕುಮಾರ್ ಅವರೊಂದಿಗೆ ಸಿಟಿ ಲೈಟ್ಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

BSP Verma with Vinay Rajkumar- Script Pooja
ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ ನಟನೆಯ 'ಅಂದೊಂದಿತ್ತು ಕಾಲ' ಬಿಡುಗಡೆಗೆ ದಿನಾಂಕ ಫಿಕ್ಸ್

'ನಾನು ಅವರನ್ನು ಆಯ್ಕೆ ಮಾಡಿಕೊಂಡ ಕಾರಣ ಸರಳ; ವಿನಯ್ ಅವರ ತೆರೆಯ ಮೇಲಿನ ಪಾತ್ರಗಳು ಹೆಚ್ಚಾಗಿ ಸೂಕ್ಷ್ಮ ಪಾತ್ರಗಳಾಗಿವೆ. ಆದರೆ, ಅವರಿಗೆ ಹೆಚ್ಚು ತೀವ್ರವಾದದ್ದನ್ನು ನೀಡುವ ಉತ್ಸಾಹವಿದೆ. ಈ ಪಾತ್ರವು ಅವರಲ್ಲಿನ ಹೊಸ ಆಯಾಮವನ್ನು ಹೊರತರುತ್ತದೆ. ಅವರು ಆಳವಾಗಿ ಗಮನಿಸುವ ವ್ಯಕ್ತಿ. ಅದು ಬದ್ಧ ನಟನ ಲಕ್ಷಣ. ವೈವಿಧ್ಯಮಯ ಪಾತ್ರಗಳನ್ನು ಮಾಡಲು ಅವರು ಸಿದ್ಧರಾಗಿದ್ದಾರೆ ಮತ್ತು ಈ ಚಿತ್ರವು ಅವರ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ' ಎಂದರು.

ಈ ಯೋಜನೆಯು ಸದ್ಯ ಅಂತಿಮ ಸ್ಕ್ರಿಪ್ಟ್ ಕೆಲಸದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್ ಮಧ್ಯಭಾಗದಲ್ಲಿ ಸೆಟ್ಟೇರಲಿದೆ. 'ನಾವು ಶೀಘ್ರದಲ್ಲೇ ಸ್ಥಳಗಳನ್ನು ಅಂತಿಮಗೊಳಿಸುತ್ತಿದ್ದೇವೆ ಮತ್ತು ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭಿಸುವ ಗುರಿ ಹೊಂದಿದ್ದೇವೆ' ಎಂದು ನಿರ್ದೇಶಕರು ದೃಢಪಡಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com