ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ ಸಂಗೀತ ಸಂಯೋಜಕ ಚರಣ್ ರಾಜ್ ಇದೀಗ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಟಗರು, ಸಲಗ, ಭೀಮಾ, ಸಪ್ತ ಸಾಗರದಾಚೆ ಎಲ್ಲೋ ಮತ್ತು ಎಕ್ಕ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿ ಮೆಚ್ಚುಗೆಗೆ ಪಾತ್ರವಾಗಿದ್ದ ಚರಣ್, ತೆಲುಗು ಚಿತ್ರರಂಗದಲ್ಲಿಯೂ ಮೋಡಿ ಮಾಡಲು ಸಜ್ಜಾಗಿದ್ದಾರೆ.
ತೆಲುಗು ಉದ್ಯಮದ ಎರಡು ಪ್ರಮುಖ ಬ್ಯಾನರ್‌ಗಳಾದ - ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬೆಂಬಲಿತ ಯೋಜನೆ ಮೂಲಕ ತೆಲುಗಿಗೆ ಬರುತ್ತಿದ್ದಾರೆ. ಸುಕುಮಾರ್ ರೈಟಿಂಗ್ಸ್ ಪ್ರಸಿದ್ಧ ನಿರ್ದೇಶಕ ಸುಕುಮಾರ್ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯಾಗಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಗೌತಮ್ ವಾಸುದೇವ್ ಮೆನನ್ ಮತ್ತು ಸುಕುಮಾರ್ ಅವರೊಂದಿಗೆ ಹಿಂದೆ ಕೆಲಸ ಮಾಡಿದ ಮಾಧುರಿ ಬಂಡ್ರೆಡ್ಡಿ ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಪ್ರತಿ ಸಿನಿಮಾದಲ್ಲೂ ವಿಶೇಷವಾದ ಭಾವದೊಂದಿಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುವ ಚರಣ್, ಮುಂದಿನ ಒಂದೂವರೆ ತಿಂಗಳಲ್ಲಿ ತೆಲುಗು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಪ್ರಾರಂಭಿಸಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿಯೂ ಅವರು ಸಾಲು ಸಾಲು ಚಿತ್ರಗಳನ್ನು ಹೊಂದಿದ್ದಾರೆ. ಹೇಮಂತ್ ಎಂ ರಾವ್ ನಿರ್ದೇಶನದ '666 ಆಪರೇಷನ್ ಡ್ರೀಮ್ ಥಿಯೇಟರ್' ಮತ್ತು ಗಣೇಶ್ ಹೆಗ್ಡೆ ನಿರ್ದೇಶಿಸಿದ ಮತ್ತು ನಟೇಶ್ ಹೆಗ್ಡೆ ನಟಿಸಿರುವ ಕುರ್ಕಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಅಲ್ಲದೆ, ಮ್ಯಾಂಗೋ ಪಚ್ಚಾ, ಮಾರ್ನವಮಿ ಮತ್ತು ವಿಜಯ್ ಕುಮಾರ್ ನಿರ್ದೇಶನದ ಸಿಟಿ ಲೈಟ್ಸ್ ಸೇರಿವೆ. ಅವರು ನಿರ್ದೇಶಕ ಸೂರಿಯೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಈ ಹಿಂದೆ ಟಗರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು.
Advertisement