
ಟಗರು, ಸಲಗ ಮತ್ತು ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳಿಗೆ ಹಿಟ್ ಹಾಡುಗಳನ್ನು ಕೊಟ್ಟ ಚರಣ್ ರಾಜ್ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮುಂಬರುವ ಚಿತ್ರ 'ಪರಾಕ್' ಚಿತ್ರಕ್ಕೆ ಸಂಗೀತ ಸಂಯೋಜಿಸಲು ಸಿದ್ಧರಾಗಿದ್ದಾರೆ.
ಪರಾಕ್ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಹಾಲೇಶ್ ಕೋಗುಂಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬ್ರಾಂಡ್ ಕಾರ್ಪೊರೇಟ್ ಪ್ರೊಡಕ್ಷನ್ ಲಿಮಿಟೆಡ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಬಘೀರ ಚಿತ್ರದ ನಂತರ ಶ್ರೀಮುರಳಿ ಪರಾಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಮಾರ್ಚ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಚರಣ್ ರಾಜ್ ಅವರ ವಿಶಿಷ್ಟ ಶೈಲಿನ ಸಂಗೀತವು ಚಿತ್ರಕ್ಕೆ ಹೊಸ ಮೆರುಗು ನೀಡುವ ನಿರೀಕ್ಷೆಯಿದೆ.
ಈಮಧ್ಯೆ, ಬಘೀರ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ನಟ ಶ್ರೀಮುರಳಿ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಪರಾಕ್ ಜೊತೆಗೆ, ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಇನ್ನೂ ಹೆಸರಿಸದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಅದರ 47ನೇ ಚಿತ್ರವಾಗಿದೆ.
Advertisement