
ಬಿಡುಗಡೆಗೂ ಮುನ್ನವೇ ಕಾಂತಾರ ಚಾಪ್ಟರ್ 1 ದೇಶಾದ್ಯಂತ ಸಂಚಲನ ಮೂಡಿಸಿದೆ. ಅಕ್ಟೋಬರ್ 2ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ಚಿತ್ರ ಬಿಡುಗಡೆಗೆ ಹೊಂಬಾಳೆ ಫಿಲ್ಮ್ಸ್ ತಯಾರಿ ನಡೆಸುತ್ತಿದೆ. ಸದ್ಯ ಚಿತ್ರೀಕರಣ ಪೂರ್ಣಗೊಂಡಿದ್ದು ಎಡಿಟಿಂಗ್ ಕೆಲಸ ನಡೆಯುತ್ತಿದೆ. ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ದೈವಿಕ ಪ್ರಧಾನ ಚಿತ್ರ ಕಾಂತಾರ: ಒಂದು ದಂತಕಥೆ 2022ರಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. 15 ಕೋಟಿಯಲ್ಲಿ ನಿರ್ಮಾಣವಾಗಿದ್ದ ಚಿತ್ರ ದೇಶಾದ್ಯಂತ 450 ಕೋಟಿ ರೂಪಾಯಿ ಗಳಿಸಿ ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿತ್ತು.
ಇನ್ನು 2025ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾಗಿರುವ ಕಾಂತಾರ ಚಾಪ್ಟರ್ 1 ಬಿಡುಗಡೆಗೂ ಮುನ್ನವೇ ತೆಲುಗಿನ ರೈಟ್ಸ್ ಬಿಕರಿಯಾಗಿದೆ. ಮಾಹಿತಿ ಪ್ರಕಾರ, 100 ಕೋಟಿಗೂ ಹೆಚ್ಚು ಮೊತ್ತಕ್ಕೆ ಥಿಯೇಟರ್ ರೈಟ್ಸ್ ಬಿಕರಿಯಾಗಿದೆ. ತೆಲಂಗಾಣದ ನಿಜಾಮ್ ಭಾಗದ ರೈಟ್ಸ್ 40 ಕೋಟಿ, ಕರಾವಳಿ ಆಂಧ್ರದ ರೈಟ್ಸ್ 45 ಕೋಟಿ ಹಾಗೂ ಇತರೆ 15 ಕೋಟಿಗೆ ಬಿಕರಿಯಾಗಿದ್ದು ಒಟ್ಟಾರೆ 100 ಕೋಟಿ ಬಾಚಿಕೊಂಡಿದೆ.
Advertisement