

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಧ್ಯದ ಬೆರಳು ತೋರಿಸಿದ್ದು ಜನರಿಗಲ್ಲ, ಫ್ರೆಂಡ್ ಕಮ್ ಮ್ಯಾನೇಜರ್ಗೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಹಾಗೂ ನಟ ಝೈದ್ ಖಾನ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಆರ್ಯನ್ ಖಾನ್ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಜನರತ್ತ ತಿರುಗಿ ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿಸಿದ್ದರು.
ಘಟನೆ ನಡೆಯುವಾಗ ಜಮೀರ್ ಅಹ್ಮದ್ ಮಗ, ನಟ ಝೈದ್ ಖಾನ್ ಕೂಡ ಅಲ್ಲಿಯೇ ಇದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಆರ್ಯನ್ ಖಾನ್ ನನಗೆ ಹಲವು ವರ್ಷಗಳಿಂದ ಗೊತ್ತು. ನಾವಿಬ್ಬರೂ ಒಂದೇ ಕಡೆ ನಟನೆ ಕಲಿತಿದ್ದೇವೆ. ಅವನು ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದ. ಹೀಗಾಗಿ ಒಂದು ಓಪನಿಂಗ್ ಸೆರಮನಿಗೆ ಹೋಗಿದ್ದೆವು. ‘ಅಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಜನ ಸೇರಿದ್ದರು. ಇಷ್ಟು ಜನರಿದ್ದರೆ ನನ್ನಿಂದ ಸಾಧ್ಯವಿಲ್ಲ ಎಂದು ಆರ್ಯನ್ ಹೇಳಿದ.
ಬಳಿಕ ಅವನ ಮ್ಯಾನೇಜರ್ (ಗೆಳೆಯ ಕೂಡ ಹೌದು) ಜನರನ್ನು ಚದುರಿಸುತ್ತೇನೆ ಎಂದು ಹೋದ. ಎಷ್ಟು ಹೊತ್ತಾದರೂ ಬರಲಿಲ್ಲ. ಆಗ ನಾವು ಬಾಲ್ಕನಿಗೆ ಹೋಗಿ ಏನಾಗಿದೆ ಎಂದು ನೋಡಿದೆವು. ಈ ವೇಳೆ ಆರ್ಯನ್ ತನ್ನ ಫ್ರೆಂಡ್ ಕಮ್ ಮ್ಯಾನೇಜರ್ಗೆ ಹಾಗೆ ತೋರಿಸಿದ. ಅದು ಜನರಿಗೆ ತೋರಿಸಿದ್ದಲ್ಲ ಎಂದು ತಿಳಿಸಿದ್ದಾರೆ.
Advertisement