ನಟ ದರ್ಶನ್‌ಗೆ ಜನವರಿಯಲ್ಲಿ ಜಾಮೀನು ಸಿಗುವ ನಿರೀಕ್ಷೆ: ಜಮೀರ್ ಪುತ್ರ ಝೈದ್ ಖಾನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಜನವರಿಯಲ್ಲಿ ಜಾಮೀನು ಸಿಗುವ ನಿರೀಕ್ಷೆಯಿದೆ ಎಂದು ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಹೇಳಿದ್ದಾರೆ.
Darshan-Zaid Khan
ದರ್ಶನ್-ಝೈದ್ ಖಾನ್
Updated on

ಹಾವೇರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಜನವರಿಯಲ್ಲಿ ಜಾಮೀನು ಸಿಗುವ ನಿರೀಕ್ಷೆಯಿದೆ ಎಂದು ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಹೇಳಿದ್ದಾರೆ. ಕಲ್ಟ್ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ನಟ ಝೈದ್ ಖಾನ್, ದರ್ಶನ್ ಅಣ್ಣನಿಗೆ ಜನವರಿಯಲ್ಲಿ ಬೇಲ್ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಸಿಗದಿದ್ದರೆ ನಾನೇ ಜೈಲಿಗೆ ಹೋಗಿ ಅವರ ಆಶಿರ್ವಾದ ಪಡೆದು ಬರುತ್ತೇನೆ ಎಂದಿದ್ದಾರೆ. ಸಂಕಷ್ಟದ ಸಮಯದಲ್ಲೂ ದರ್ಶನ್ ಅವರು ಅಭಿಮಾನಿಗಳಿಗೆ ಯಶಸ್ವಿ ಚಿತ್ರವನ್ನು ಕೊಟ್ಟಿದ್ದಾರೆ. ಸಿನಿಮಾ ಗೆದ್ದ ನಂತರ ಮಾತನಾಡಿದರೆ ಅದಕ್ಕೆ ತೂಕ ಬರುತ್ತದೆ ಎಂದು ನಾನು ನಂಬಿದ್ದೇನೆ ಎಂದರು.

Darshan-Zaid Khan
ದರ್ಶನ್ ಜೈಲ್‌ನಲ್ಲಿ ಇದ್ರೂ ರಾಜ್ಯಾದ್ಯಂತ 'ಡೆವಿಲ್' ಫೀವರ್; ಮೊದಲ ದಿನದ ಗಳಿಕೆ ಎಷ್ಟು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com