

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರನ್ನು ಫೇಕ್ ಎಲಿಮಿನೇಷನ್ ಮೂಲಕ ಹೊರಕ್ಕೆ ತಂದು ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದೆ.
ಆರಂಭದಲ್ಲಿ ಅಣ್ಣ-ತಂಗಿಯಂತಿದ್ದ ಧ್ರುವಂತ್ ಹಾಗೂ ರಕ್ಷಿತಾ ಮಧ್ಯೆ ಈಗ ಯಾವುದೂ ಸರಿ ಇಲ್ಲ ಎಂಬಂತಾಗಿದೆ. ಇದೀಗ ಇಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದ್ದು, ಧ್ರುವಂತ್ ಜೊತೆಗೆ ಸೀಕ್ರೆಟ್ ರೂಂನಲ್ಲಿ ಇರುವುದು ರಕ್ಷಿತಾ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಕ್ಷಿತಾ ಅವರಿಗೆ ಎಲಿಮಿನೇಷನ್ ಆಗಿಲ್ಲ ಎಂಬ ಖುಷಿ ಒಂದು ಕಡೆಯಾದರೆ, ಧ್ರುವಂತ್ ಜೊತೆ ಇರಬೇಕಲ್ಲ ಎಂಬ ಬೇಸರ ಮತ್ತೊಂದು ಕಡೆಯಾಗಿದೆ.
ಮನೆಯಿಂದ ಹೊರ ಬಂದ ರಕ್ಷಿತಾ ಮತ್ತು ಧ್ರುವಂತ್ ಇಬ್ಬರನ್ನು ಇದೀಗ ರಹಸ್ಯ ಕೋಣೆಗೆ ಕಳುಹಿಸಲಾಗಿದ್ದು, ಅಲ್ಲಿ ಇಬ್ಬರೂ ಟಿವಿಯಲ್ಲಿ ಬಿಗ್ ಬಾಸ್ ಮನೆಯ ಚಟುವಟಿಕೆಯನ್ನು ನೋಡುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಈ ಕುರಿತ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಗಿಲ್ಲಿ, ರಘು ಮತ್ತು ರಜತ್ ಮಾತುಗಳನ್ನು ಕೇಳಿ ರಕ್ಷಿತಾ ಕಣ್ಣೀರಿಟ್ಟಿದ್ದಾರೆ.
ವಿಡಿಯೋ ನೋಡಿದ ಬಳಿಕ ಧ್ರುವಂತ್ ರಕ್ಷಿತಾ ಜೊತೆ ನಿನ್ನ ನಾಟಕಗಳನ್ನು ನಾನು ನೋಡಿಕೊಂಡೇ ಬಂದಿದ್ದೇನೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇದಕ್ಕೆ ರಕ್ಷಿತಾ ಅಯ್ಯೋ ದೇವರೇ ಒಂದೇ ರೂಮಿನಲ್ಲಿ ನಿಮ್ಮ ಜೊತೆ ಹೇಗೆ ಇರುವುದು ಎಂದು ಹಣೆಯ ಮೇಲೆ ಕೈಯಿಟ್ಟು ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮನೆಯವರಿಗೆ ಧ್ರುವಂತ್ ಅವರು ಹೋಗುವುದರಲ್ಲಿ ಯಾವುದೇ ಅಚ್ಚರಿ ಇರಲಿಲ್ಲ. ಆದರೆ ರಕ್ಷಿತಾ ಹೊರ ಹೋಗಿದ್ದನ್ನು ಕಂಡು ಶಾಕ್ ಆಗಿದ್ದಾರೆ.
Advertisement