ಚಿತ್ರದ ಬಜೆಟ್‌ಗಿಂತಲೂ ಭಾರಿ ಬೆಲೆಗೆ ಮಾರಾಟವಾದ 'ಬಲರಾಮನ ದಿನಗಳು' ಆಡಿಯೋ ರೈಟ್ಸ್!

ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಟಿಸಿದ್ದು, ಇದು ಅವರ 25ನೇ ಚಿತ್ರವಾಗಿದೆ. ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.
Still from Balaramana Dinagalu; the film's team
ಬಲರಾಮನ ದಿನಗಳು ಚಿತ್ರದ ಸ್ಟಿಲ್ - ಚಿತ್ರತಂಡ
Updated on

ಬ್ಲಾಕ್‌ಬಸ್ಟರ್ 'ಆ ದಿನಗಳು' ಚಿತ್ರದ ಹದಿನೆಂಟು ವರ್ಷಗಳ ನಂತರ, ನಿರ್ದೇಶಕ ಕೆಎಂ ಚೈತನ್ಯ 'ಬಲರಾಮನ ದಿನಗಳು' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಚಿತ್ರದ ಮೊದಲ ಹಾಡು 'ಶುರು ಶುರು' ಟಿ-ಸೀರೀಸ್ ಕನ್ನಡದ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ತಮಿಳು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಟಿಸಿದ್ದು, ಇದು ಅವರ 25ನೇ ಚಿತ್ರವಾಗಿದೆ. ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅವಿನಾಶ್, ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.

ಮಹತ್ವದ ಬೆಳವಣಿಗೆಯೊಂದರಲ್ಲಿ, ಟಿ-ಸೀರೀಸ್ ಆಡಿಯೋ ಹಕ್ಕುಗಳನ್ನು ಸ್ವತಂತ್ರ ಒಪ್ಪಂದವಾಗಿ ಪಡೆದುಕೊಂಡಿದೆ. ವರದಿ ಪ್ರಕಾರ, ಚಿತ್ರದ ಬಜೆಟ್‌ಗೆ ಹೋಲಿಸಬಹುದಾದ ಮೊತ್ತವನ್ನು ಪಾವತಿಸಲಾಗಿದೆ ಎನ್ನಲಾಗಿದೆ. 'ಇದು ಸಂತೋಷ್ ನಾರಾಯಣನ್ ಅವರ ಮೊದಲ ಕನ್ನಡ ಚಿತ್ರ ಮತ್ತು ಪ್ರತಿಕ್ರಿಯೆಯ ಬಗ್ಗೆ ನಮಗೆ ವಿಶ್ವಾಸವಿದೆ. ಮ್ಯೂಸಿಕ್ ಲೇಬಲ್ ಕಚ್ಚಾ ದೃಶ್ಯಗಳು ಮತ್ತು ಸಂಗೀತವನ್ನು ನೋಡಿದೆ ಮತ್ತು ಆಫರ್ ನಮ್ಮ ನಿರೀಕ್ಷೆಗಳನ್ನು ಮೀರಿದೆ. ಕನ್ನಡದಲ್ಲಿ ಆಡಿಯೋ ರೈಟ್ಸ್‌ಗೆ ಇಷ್ಟು ಹೆಚ್ಚಿನ ಒಪ್ಪಂದ ನಡೆದಿರುವುದು ಇದೇ ಮೊದಲು' ಎಂದು ಶ್ರೇಯಸ್ ಹೇಳುತ್ತಾರೆ.

Still from Balaramana Dinagalu; the film's team
ಕೆಎಂ ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಚಿತ್ರಕ್ಕೆ ಪ್ರಿಯಾ ಆನಂದ್ ಎಂಟ್ರಿ; ವಿನೋದ್ ಪ್ರಭಾಕರ್‌ಗೆ ಜೋಡಿ

'ಈ ವರ್ಷದ ಟಾಪ್ ಟ್ರ್ಯಾಕ್‌ಗಳಲ್ಲಿ ಶುರು ಶುರು ಖಂಡಿತವಾಗಿಯೂ ಒಂದಾಗಲಿದೆ. ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಅದ್ಭುತವಾಗಿದೆ' ಎಂದು ಸಂತೋಷ್ ನಾರಾಯಣನ್ ಹೇಳುತ್ತಾರೆ. ನಟ ವಿನಯ್ ಗೌಡ, 'ನಾನು ಕಟ್ಟಿ ಎಂಬ ಪಾತ್ರವನ್ನು ನಿರ್ವಹಿಸುತ್ತೇನೆ. ಈ ಹಾಡಿನೊಂದಿಗೆ, ಬಲರಾಮನ ದಿನಗಳು ಚಿತ್ರದ ಉತ್ಸಾಹ ಅಧಿಕೃತವಾಗಿ ಆರಂಭವಾಗಿದೆ' ಎಂದು ಹೇಳುತ್ತಾರೆ.

ಬಲರಾಮನ ದಿನಗಳು 'ಆ ದಿನಗಳು' ಚಿತ್ರದ ಎರಡನೇ ಭಾಗವಲ್ಲ ಎಂದು ಹೇಳುವ ಚೈತನ್ಯ, 'ಇದು 1990ರ ದಶಕದಲ್ಲಿ ನಡೆಯುವ ಸಂಪೂರ್ಣ ಕಾಲ್ಪನಿಕ ಕಥೆ. ನಿರ್ಮಾಪಕರು 'ಆ ದಿನಗಳು' ಚಿತ್ರದಿಂದ ಸ್ಫೂರ್ತಿ ಪಡೆದು, ವಿನೋದ್ ಪ್ರಭಾಕರ್ ಅವರಿಗಾಗಿಯೇ ಈ ಚಿತ್ರವನ್ನು ನಿರ್ಮಿಸಬೇಕೆಂದು ಬಯಸಿದ್ದರು. ಸಂತೋಷ್ ನಾರಾಯಣನ್ ಅವರ ಸಂಗೀತ ಮತ್ತು ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಅಸಾಧಾರಣವಾಗಿದೆ. ಛಾಯಾಗ್ರಾಹಕ ಎಚ್.ಸಿ. ವೇಣು ಅದ್ಭುತ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ವಿನೋದ್ ಮತ್ತು ಪ್ರಿಯಾ ಅವರ ಕೆಮಿಸ್ಟ್ರಿ ಚೆನ್ನಾಗಿದೆ" ಎಂದರು.

Still from Balaramana Dinagalu; the film's team
'ಮಾದೇವ' ಯಶಸ್ಸಿನ ಬಳಿಕ 'ಬಲರಾಮನ ದಿನಗಳು' ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ ವಿನೋದ್ ಪ್ರಭಾಕರ್!

'ನನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಡಿಯೋ ಹಕ್ಕುಗಳಿಗೆ ಅತ್ಯುನ್ನತ ಆಫರ್ ಸಿಕ್ಕಿದೆ. ನನ್ನ 25 ಚಿತ್ರಗಳಲ್ಲಿ ಆಡಿಯೋ ಒಪ್ಪಂದ ಇಷ್ಟೊಂದು ದೊಡ್ಡದಾಗಿರುವುದು ಇದೇ ಮೊದಲು. ಈ ಪಾತ್ರ ಅದ್ಭುತವಾಗಿ ರೂಪುಗೊಂಡಿದೆ' ಎಂದು ವಿನೋದ್ ಪ್ರಭಾಕರ್ ಹಂಚಿಕೊಂಡಿದ್ದಾರೆ.

'ರಾಜಕುಮಾರ ನಂತರ ಇದು ನನ್ನ ಐದನೇ ಕನ್ನಡ ಚಿತ್ರ. ಪುನೀತ್ ರಾಜ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಕನ್ನಡ ಕಲಿಯುವುದರಿಂದ ದೃಶ್ಯಗಳಲ್ಲಿ ಸ್ವಾಭಾವಿಕವಾಗಿ ನಟಿಸಲು ನನಗೆ ಸಹಾಯವಾಯಿತು' ಎಂದು ಪ್ರಿಯಾ ಆನಂದ್ ಹೇಳುತ್ತಾರೆ.

ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ವರ್ಷ ಫೆಬ್ರುವರಿಯಲ್ಲಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com