666: ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರತಂಡ ಇದೀಗ ಪ್ರಿಯಾಂಕಾ ಮೋಹನ್ ಅವರನ್ನು ಕರೆತಂದಿದ್ದು, ಚಿತ್ರದಲ್ಲಿ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದೆ. ಹೇಮಂತ್ ಎಂ ರಾವ್ ಅವರ ನೇತೃತ್ವದಲ್ಲಿ, ಈ ಚಿತ್ರವು ಟಗರು ಖ್ಯಾತಿಯ ಶಿವರಾಜ್‌ಕುಮಾರ್ ಮತ್ತು ಧನಂಜಯ ಅವರನ್ನು ಮತ್ತೆ ತೆರೆಮೇಲೆ ತರಲಿದೆ. ಈ ಈ ಸ್ಪೈ ಥ್ರಿಲ್ಲರ್ ಚಿತ್ರವು ಘೋಷಣೆಯಾದಾಗಿನಿಂದಲೂ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಪ್ರಿಯಾಂಕಾ ಮೋಹನ್ ಅವರನ್ನು ಎರಡು ಪೋಸ್ಟರ್ ಮೂಲಕ ಪರಿಚಯಿಸಲಾಗಿದೆ. ಮೊದಲನೆಯದು ಲ್ಯಾವೆಂಡರ್ ಬಣ್ಣದ ಶರ್ಟ್ ಮತ್ತು ಹೂವಿನ ಸ್ಕರ್ಟ್ ಧರಿಸಿದ್ದಾರೆ. ಈ ಶೈಲಿಯು ವಿಂಟೇಜ್ ಸೌಂದರ್ಯದ ಕಡೆಗೆ ವಾಲುತ್ತದೆ. ಇದರೊಂದಿಗೆ ವಿಶೇಷವಾಗಿ ಇಯರ್‌ಫೋನ್ ಹಾಕಿಕೊಂಡಿದ್ದಾರೆ. ಮತ್ತೊಂದರಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮುತ್ತಿನ ಆಭರಣಗಳು, ಕೈಗವಸು, ಹೂವಿನ ಉಡುಗೆ ಮತ್ತು ಟೋಪಿ ಧರಿಸಿದ್ದಾರೆ.
ಈ ಚಿತ್ರದ ಕಥೆ ಬಗ್ಗೆ ಯಾವುದೇ ಸುಳಿವು ಲಭ್ಯವಿಲ್ಲದಿದ್ದರೂ, ಕ್ಲಾಸಿಕ್ ಶೈಲಿಯು ಹಳೆಯ-ಪ್ರಪಂಚದ ಸಿನಿಮಾವನ್ನು ನೆನಪಿಸುತ್ತದೆ. 666: ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ಧನಂಜಯ ನಾಯಕನಾಗಿ ನಟಿಸಿದ್ದಾರೆ ಮತ್ತು ಡಾ. ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ರೆಟ್ರೋ-ಪ್ರೇರಿತ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಇಬ್ಬರೂ ನಟರು ಅಭಿಮಾನಿಗಳನ್ನು ಹಿಂದಿನ ಕಾಲಕ್ಕೆ ಕರೆದೊಯ್ಯಲಿದ್ದಾರೆ ಎನ್ನುವುದು ಪಕ್ಕಾ ಆಗಿದೆ. ಜನವರಿಯಲ್ಲಿ ಚಿತ್ರದ ವಿಶೇಷ ವಿಡಿಯೋವನ್ನು ಅನಾವರಣಗೊಳಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ.
ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ನಿರ್ಮಾಣ ವಿನ್ಯಾಸಕರಾಗಿ ಮತ್ತು ಇಂಚರ ಸುರೇಶ್ ವಸ್ತ್ರ ವಿನ್ಯಾಸಕರಾಗಿದ್ದಾರೆ. ಈಗಾಗಲೇ ಮೂರು ಶೂಟಿಂಗ್ ವೇಳಾಪಟ್ಟಿಗಳನ್ನು ಪೂರ್ಣಗೊಳಿಸಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.
Advertisement